ಹಾಸನ : ನಾನು 14 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಹಲವು ಸಮಸ್ಯೆಗಳನ್ನ ಎದುರಿಸಿದ್ದೇನೆ. ನಾನು ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೆ, ಯಾರಿಗೂ ಬಹುಮತ ಸಿಗದಿದ್ದಾಗ ಅವರೇ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾದರು. ದೇವೇಗೌಡರು ನನ್ನ ಮಗ ಸಿಎಂ ಆಗುವುದು ಬೇಡ ಎಂದು ಹೇಳಿದರು.ಆದರೂ ಅವರೇ ಒತ್ತಡ ಹಾಕಿ ನನ್ನನ್ನು ಸಿಎಂ ಮಾಡಿದರು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಮಾತನಾಡಿದ ಅವರು, ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿಲ್ಲ. ಇವರು ದೇವೇಗೌಡರನ್ನು ಅಧಿಕಾರದಿಂದ ಯಾಕೆ ಕೆಳಗೆ ಇಳಿಸಿದರು? ಎಚ್ಡಿ ದೇವೇಗೌಡರು ಮಾಡಿದ ದ್ರೋಹ ಏನು? ದೇವೇಗೌಡರನ್ನು ಕೂಡಿಸಿ ಪ್ರಧಾನಿ ಮೋದಿ ನಿಂತುಕೊಳ್ಳುತ್ತಾರೆ. ಇದು ಎಚ್ ಡಿ ದೇವೇಗೌಡರಿಗೆ ಇರುವ ಗೌರವ. ನಾನು ಸಿಎಂ ಆಗಿದ್ದಾಗ ಈ ಜಿಲ್ಲೆಯ ಮಗನಾಗಿ ಕೆಲಸ ಮಾಡಿದ್ದೇನೆ ಎಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು.
BREAKING : ದಾವಣಗೆರೆಯಲ್ಲಿ ‘KSRTC’ ಬಸ್-ಓಮಿನಿ ನಡುವೆ ಭೀಕರ ಅಪಘಾತ : 3 ಸಾವು 6ಕ್ಕೂ ಹೆಚ್ಚು ಜನರಿಗೆ ಗಾಯ
ಮೊದಲ ದಿನದಿಂದಲೇ ರೈತರ ಸಾಲ ಮನ್ನಾ ಬಗ್ಗೆ ಅಪಸ್ವರ ಎತ್ತಿದರು. ನಮ್ಮ ಹಳೆಯ ಯೋಜನೆಗೆ ಹಣ ಕೊಡಿ ಎಂದರು. ಎಲ್ಲಾ ಯೋಜನೆಗಳಿಗೂ ಹಣಕೊಟ್ಟು ರೈತರ ಸಾಲ ಮನ್ನಾ ಮಾಡಿದೆ.ಸಾಲ ಮನ್ನಾ ಮಾಡುವಾಗ ನಾನು ಕೇಂದ್ರದ ಮುಂದೆ ಹೋಗಿದ್ನ? ಗ್ಯಾರಂಟಿ ಯೋಜನೆಯಿಂದ ನಿಮ್ಮ ಆರ್ಥಿಕ ಶಕ್ತಿ ಹೆಚ್ಚಾಗಿದೆ? ಒಂದೇ ವರ್ಷಕ್ಕೆ 1 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದ್ದಾರೆ.ಈ ಸಾಲವನ್ನು ತೀರಿಸುವುದು ಯಾರು ಅದನ್ನು ನೀವೇ ತೀರಿಸಬೇಕು ಎಂದು ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಕಾಂಗ್ರೆಸ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಕೆಂಡ ಕಾರಿದ್ದು, ನಮ್ಮ ತೆರಿಗೆ ನಮ್ಮ ಹಣ ಅಂತಾರೆ ನಾಚಿಕೆ ಆಗಬೇಕು ನಿಮಗೆ. ನಾವು ಅಧಿಕಾರದಲ್ಲಿದ್ದಾಗ ತಲೆ ಒಡೆಯೋ ಕೆಲಸ ಮಾಡಿಲ್ಲ ಮೋದಿ ಪ್ರಧಾನಿಯಾಗುವುದನ್ನು ಯಾರು ತಡೆಯೋಕ್ಕಾಗಲ್ಲ ಎಂದು ಅವರು ತಿಳಿಸಿದರು.