ಯಾದಗಿರಿ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ದೇವೇಗೌಡರೇ ಪ್ಲಾನ್ ಮಾಡಿ ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದಾರೆ. ವೀಸಾ ಪಾಸ್ ಪೋರ್ಟ್ ಕೊಡೋರು ಬಿಜೆಪಿಯವರೇ ತಾನೆ. ಅಮಿತ್ ಶಾ ಗೆ ಗೊತ್ತಿದ್ದರೂ ಪ್ರಜ್ವಲ್ ಗೆ ಟಿಕೆಟ್ ಯಾಕೆ ಕೊಟ್ಟರು? ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿದವನಿಗೆ ಟಿಕೆಟ್ ಹಾಕಿ ಕೊಡಬೇಕು? ಹಾಗಾಗಿ ಪ್ರಕರಣ ಕುರಿತಂತೆ ಎಸ್ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತದೆ ಎಂದು ತಿಳಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಮಾತನಾಡಿದ ಅವರು, ಕಾರ್ತಿಕ್ ಪ್ರಜ್ವಲ್ ರೇವಣ್ಣ ಡ್ರೈವರ್ ಆಗಿದ್ದ. ಕಾರ್ತಿಕ್ ಬಿಜೆಪಿ ಮುಖಂಡನ ಕೈಯಲ್ಲಿ ಪೆನ್ ಡ್ರೈವ್ ಕೊಟ್ಟಿದ್ದು. ಎಚ್ ಡಿ ಕುಮಾರಸ್ವಾಮಿ ರಾಜಕಾರಣಕ್ಕೆ ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡುತ್ತಾರೆ. ಕೇಂದ್ರ ಸಚಿವ ಅಮಿತ್ ಶಾ ಗೆ ಗೊತ್ತಿದ್ದರೂ ಯಾಕೆ ಪ್ರಜ್ವಲ್ ಗೆ ಟಿಕೆಟ್ ಕೊಟ್ಟರು? ಎಸ್ಐಟಿ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ಮಾಡುತ್ತಾರೆ ಎಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಪ್ರಕರಣಕ್ಕೂ ಡಿಕೆ ಶಿವಕುಮಾರ್ ಗು ಸಂಬಂಧ ಇಲ್ಲ
ವೀಸಾ ಕೊಡುವುದು ಯಾರು? ಕೇಂದ್ರದ ಬಿಜೆಪಿಯವರೇ ತಾನೇ. ಪ್ರಜ್ವಲ್ ಪ್ರಕರಣಕ್ಕೂ ಡಿಕೆ ಶಿವಕುಮಾರ್ ಗು ಸಂಬಂಧ ಇಲ್ಲ ಸೂರಜ್ ರೇವಣ್ಣ ಜೊತೆ ಫೋಟೋ ಇರುವುದರಿಂದ ಏನಾಗುತ್ತೆ? ಕುಮಾರಸ್ವಾಮಿ ಜೊತೆಗೂ ಡಿಕೆ ಶಿವಕುಮಾರ್ ಫೋಟೋ ಇದೆ. ನನ್ನ ಜೊತೆಗೆ ಎಚ್ ಡಿ ರೇವಣ್ಣ ಇರುವ ಫೋಟೋ ಕೂಡ ಇದೆ ಹಾಗಾದರೆ ಅವರನ್ನು ರಕ್ಷಣೆ ಮಾಡ್ತೀನಿ ಅಂತಾನ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.