ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀವ ವೀಡಿಯೋ ಪ್ರಕರಣದ ಬಳಿಕ, ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ನಂತ್ರ ಮನನೊಂದಿದ್ದಂತ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು, ತಮ್ಮ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು ಎಂಬ ಸ್ಪೋಟ ಮಾಹಿತಿಯನ್ನು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಹಿರಂಗ ಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನಮ್ಮ ಕುಟುಂಬವನ್ನು ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ಕುಟುಂಬವನ್ನು ಮುಗಿಸೋದಕ್ಕೆ ಈ ರೀತಿ ಷಡ್ಯಂತ್ರ ನಡೆಸಲಾಗುತ್ತಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಮನನೊಂದು, ಹೆಚ್.ಡಿ ದೇವೇಗೌಡರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟಿದ್ದರು ಎಂಬ ಅಂಶವನ್ನು ಬಿಚ್ಚಿಟ್ಟಿದರು.
ನಮ್ಮ ಕುಟುಂಬದವರ ಎಲ್ಲಾ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ನಾನು ಅಕ್ರಮದ ಬಗ್ಗೆ ಮಾತನಾಡುತ್ತೇನೆ ಎಂಬುದಾಗಿ ನನ್ನ ಮೇಲೂ ಷಡ್ಯಂತ್ರ ರೂಪಿಸಲಾಗಿದೆ. ನನ್ನ ಜೊತೆಗೆ ಇದ್ದಂತ ಸುಮಾರು 45 ಜನರ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದರು.
ಈ ಎಲ್ಲಾ ಘಟನೆ, ಪ್ರಕರಣಗಳಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮನನೊಂದಿದ್ದಾರೆ. ಇದೇ ಕಾರಣಕ್ಕೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡೋದಾಗಿ ಹೊರಟಿದ್ದರು. ಆದ್ರೇ ನಾನು ಯಾರೋ ಮಾಡಿದ ತಪ್ಪಿಗೆ ನೀವು ಯಾಕೆ ರಾಜೀನಾಮೆ ಕೊಡಬೇಕು.? ಕೊಡಬೇಡಿ ಎಂದೆ. ಆಗ ಅವರು ಸುಮ್ಮನಾದರು ಎಂದು ಹೇಳಿದರು.
ಕರ್ನಾಟಕದ ’11 ವಿಧಾನ ಪರಿಷತ್ ಸ್ಥಾನ’ಗಳಿಗೆ ಚುನಾವಣೆ ಘೋಷಣೆ: ಜೂ.13ರಂದು ಮತದಾನ, ಫಲಿತಾಂಶ
BREAKING : ದೊಡ್ಡ ಭಯೋತ್ಪಾದಕ ದಾಳಿ ಸಂಚು ವಿಫಲ : ಗುಜರಾತ್’ನಲ್ಲಿ ನಾಲ್ವರು ‘ISIS ಉಗ್ರರ’ ಬಂಧನ
‘ಸ್ಮೋಕ್ ಪಾನ್’ ಪ್ರಿಯರೇ ಎಚ್ಚರ ; ಪಾನ್ ತಿಂದು 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ, ಶಸ್ತ್ರಚಿಕಿತ್ಸ