ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ದೆಹಲಿಯಿಂದ ಬಂದು ಏನಾದರೂ ಸಿಹಿ ಸುದ್ದಿ ನೀಡ್ತಾರಾ’ ಅನ್ನೋ ಪ್ರಶ್ನೆಗೆ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವರು ಲಕ್ಷಾಧಿಪತಿಗಳು, ಕೋಟ್ಯಧಿಪತಿಗಳು ಇದ್ದಾರೆ. ಅವರೆಲ್ಲರೂ ಶಾಸಕರಾಗೋಕೆ ಸಾಧ್ಯವಾಗಿದ್ಯಾ? ಆದ್ರೆ ನಾನೊಬ್ಬ ಸಾಮಾನ್ಯನಾಗಿ ಶಾಸಕನಾಗಿದ್ದೇನೆ ಎಂದರು.ನನಗೆ ವರ್ಷದ 365 ದಿನವೂ ಸಿಹಿ ಸುದ್ದಿನೇ, ಕಹಿ ಅನ್ನೋದೇ ಗೊತ್ತಿಲ್ಲ ಎಂದು ಬೀಗಿದ್ದಾರೆ.ಈಗಾಗಲೇ 2009 ರಿಂದ 2012ರ ವರೆಗೆ ಸಚಿವನಾಗಿ ಕೆಲಸ ಮಾಡಿದ ಅನುಭವ ನನಗಿದೆ. ನಾನಿಲ್ಲಿ ಸಂತೋಷದಿಂದಲೇ ಇದ್ದೇನೆ. ನಾನು ಯಾವತ್ತೂ ಸಂತೋಷ ಜೀವಿ. ಕೆಲವರು ಲಕ್ಷಾಧಿಪತಿ, ಕೋಟ್ಯಧಿಪತಿಗಳಿದ್ದರೂ ಶಾಸಕರಾಗೋಕೆ ಆಗಿಲ್ಲ. ಆದ್ರೆ ನನ್ನಂತಹ ಒಬ್ಬ ಸಾಮಾನ್ಯ ಮನುಷ್ಯನನ್ನ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನನಗೆ ಅದಕ್ಕಿಂತ ದೊಡ್ಡ ಸ್ಥಾನ ಯಾವುದೂ ಇಲ್ಲ, ಜನಾದೇಶ ಬಹಳ ಮುಖ್ಯ ಎಂದರು.