ಶಿವಮೊಗ್ಗ: ಜಿಲ್ಲೆಯ ಸಾಗರ ಅರಣ್ಯ ವಲಯದಲ್ಲಿನ ತಾಳಗುಪ್ಪ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್.ಎನ್, ಉಳ್ಳೂರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸುಂದರಮೂರ್ತಿ.ಎನ್.ಜಿ ಹಾಗೂ ಗಸ್ತು ಅರಣ್ಯ ಪಾಲಕ ಪ್ರವೀಣ್ ಕುಮಾರ್.ಈ ಅವರ ಅಮಾನತು ಆದೇಶವನ್ನು ತೆರವುಗೊಳಿಸಲಾಗಿದೆ.
ಈ ಕುರಿತಂತೆ ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿಗಳು ಆದೇಶ ಹೊರಡಿಸಿದ್ದು, ಸಾಗರ ವಲಯದ ತಾಳಗುಪ್ಪ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ಕುಮಾರ್.ಎನ್, ಉಳ್ಳೂರು ಶಾಖೆಯ ಸುಂದರಮೂರ್ತಿ ಎನ್.ಜಿ ಹಾಗೂ ಗಸ್ತು ಅರಣ್ಯ ಪಾಲಕ ಉಳ್ಳೂರು ಗಸ್ತು(ಪ್ರಭಾರ) ಇವರನ್ನು ಕರ್ತವ್ಯ ನಿರ್ಲಕ್ಷತನ ಹಾಗೂ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತ್ತು ಮಾಡಿ ಆದೇಶಿಸಲಾಗಿತ್ತು ಎಂದಿದ್ದಾರೆ.
ಈ ಮೂವರು ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳ ಅಮಾನತು ಆದೇಶವನ್ನು ಹಿಂಪಡೆದು, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ (ವರ್ಗೀಕರಣ, ನಿಯಂತ್ರಣ, ಅಪೀಲು) 1957ರ ನಿಯಮ 10(5) (ಸಿ) ಅನ್ವಯ ಸೇವೆಗೆ ಪುನರ್ ನೇಮಕ ಮಾಡಿ ಆದೇಶಿಸಲಾಗಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯ ಅಧಿಕಾರಿಗಳ ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ಕಾಯ್ದೆ 2016ರನ್ವಯ ನೌಕರರ ಸ್ಥಳ ನಿಯುಕ್ತಿಯನ್ನು ಕಂಟಿಜೆಂಟ್ ಅಡಿಯಲ್ಲಿ ಅರ್ಜಿ ಸಲ್ಲಿಸಿ ನಿಯುಕ್ತಿ ಆದೇಶ ಪಡೆಯಬೇಕಾಗಿದೆ. ಹೀಗಾಗಿ ಸಂತೋಷ್ ಕುಮಾರ್.ಎನ್ ಇವರನ್ನು ಲೀಗಲ್ ಮತ್ತು ಐಸಿಟಿ ಘಟಕ, ಕೋಗಾರು ವನ್ಯಜೀವಿ ವಲಯ ಇಲ್ಲಿನ ಖಾಲಿ ಉಪ ವಲಯ ಅರಣ್ಯಾಧಿಕಾರಿ ಹುದ್ದೆಗೆ ತಾತ್ಕಾಲಿಕವಾಗಿ ಷರತ್ತಿಗೆ ಒಳಪಟ್ಟು ಸ್ಥಳ ನಿಯುಕ್ತಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಸುಂದರಮೂರ್ತಿ ಎನ್ ಜಿ ಅವರನ್ನು ಖಾಲಿ ಇದ್ದಂತ ಆನವಟ್ಟಿಯ ಜಡೆ ಶಾಖೆಗೆ ಉಪ ವಲಯ ಅರಣ್ಯಾಧಿಕಾರಿಯಾಗಿ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಗಸ್ತು ಅರಣ್ಯ ಪಾಲಕ ಪ್ರವೀಣ್ ಕುಮಾರ್.ಈ ಅವರನ್ನು ಸೊರಬ ವಲಯದ ಉಳವಿ ಗಸ್ತು ಇಲ್ಲಿನ ಖಾಲಿ ಹುದ್ದೆಗೆ ಷರತ್ತುಗಳಿಗೆ ಒಳಪಟ್ಟು ಸ್ಥಳ ನಿಯುಕ್ತಿಗೊಳಿಸಲಾಗಿದೆ.
ಈ ಮೂವರು ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ( ಅರಣ್ಯ ಅಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ಕಾಯ್ದೆ, 2016ರನ್ವಯ ನೌಕರರಿಗೆ ನಿಯೋಜಿಸಲಾದ ಸ್ಥಳಕ್ಕೆ ಸ್ಥಳ ನಿಯುಕ್ತಿಗೊಳಿಸಿದಲ್ಲಿ ಹಾಗೂ ಇತರೆ ಮೂಲಗಳಿಂದ ಯಾವುದೇ ಉಪ ವಲಯ ಅರಣ್ಯಾಧಿಕಾರಿ ಮತ್ತು ಗಸ್ತು ಅರಣ್ಯ ಪಾಲಕರುಗಳು ಸ್ಥಳ ನಿಯುಕ್ತಿಗೊಂಡಲ್ಲಿ ಈ ಮೇಲ್ಕಂಡ ಆದೇಶವು ಕೂಡಲೇ ರದ್ದಾಗುವುದು. ಅಲ್ಲದೇ ನೌಕರರನ್ನು ನಿಯಂತ್ರಣಾಧಿಕಾರಿಗಳು ಕೂಡಲೇ ಮೂಲ ಸ್ಥಳಕ್ಕೆ ಕಾರ್ಯ ವಿಮುಕ್ತಗೊಳಿಸುವುದು ಅಂತ ಷರತ್ತಿನಲ್ಲಿ ತಿಳಿಸಿ, ಅಮಾತ್ತಿನಿಂದ ಸೇವೆಗೆ ಪುನರ್ ನೇಮಕ ಮಾಡಿ ಆದೇಶಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BREAKING NEWS: ವಿಧಾನಸಭೆಯಲ್ಲಿ ‘ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024’ ಅಂಗೀಕಾರ