ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳ ಘೋಷಣೆ ಮಾಡಲಾಗಿದೆ. ಬಸವ, ಮಹಾವೀರ, ಚೌಡಯ್ಯ ಹಾಗೂ ಪಂಪ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪುರಸ್ಕೃತರಿಗೆ ಜನವರಿ 31ಕ್ಕೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಡಮಾಡುವ ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳ ಪುರಸ್ಕೃತರನ್ನು ಆಯ್ಕೆ ಸಮಿತಿಗಳ ಮೂಲಕ ಆಯ್ಕೆ ಮಾಡಲಾಗಿದೆ. ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಶ್ರೀ ಆನಂದ್ ತೆಲ್ತುಂಬಡೆ ಹಾಗೂ ಡಾ. ಎನ್.ಜಿ. ಮಹದೇವಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಜಿನದತ್ತ ದೇಸಾಯಿ ಹಾಗೂ ಗುಜರಾತಿನ ಗಾಂಧಿ ಸೇವಾಶ್ರಮ ಅವರನ್ನು ಆಯ್ಕೆ ಮಾಡಲಾಗಿದೆ. ಟಿ. ಚೌಡಯ್ಯ ಪ್ರಶಸ್ತಿಗಾಗಿ ನಿತ್ಯಾನಂದ ಹಳದಿಪುರ ಹಾಗೂ ಶ್ರೀರಾಮುಲು ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಪ್ರತಿಷ್ಠಿತ ಪಂಪ ಪ್ರಶಸ್ತಿಯೂ ಸೇರಿದಂತೆ ವಿವಿಧ ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಗಳನ್ನು ಇದೇ ಜನವರಿ 31ರಂದು ಬೆಂಗಳೂರಿನ ರವಿಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಸನ್ಮಾನ್ಯ ಮುಖ್ಯಮಂತ್ರಿಗಳು ಈ ಪ್ರಶಸ್ತಿಗಳನ್ನು ವಿತರಣೆ ಮಾಡಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಇದರ ಜೊತೆಗೆ ಈ ಹಿಂದೆ ಘೋಷಣೆ ಮಾಡಲಾಗಿದ್ದ, 2018-19, 2020-21, 2021-22 ಹಾಗೂ 2022-23ನೇ ಸಾಲಿನ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗುವುದು. ನಾನಾ ಕಾರಣಗಳಿಗಾಗಿ ಈ ಪ್ರಶಸ್ತಿಗಳು ವಿತರಣೆ ಆಗಿರಲಿಲ್ಲ. ವಿತರಣೆ ಆಗದೇ ಇರುವ 31 ಪ್ರಶಸ್ತಿಗಳನ್ನು ಸೇರಿದಂತೆ ಒಟ್ಟು 75 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಇದರಲ್ಲಿ 2018-19ನೇ ಸಾಲಿನಲ್ಲಿ ಬಿ.ವಿ. ಕಾರಂತ ಪ್ರಶಸ್ತಿಗೆ ಭಾಜನರಾಗಿದ್ದ ಎಸ್. ಮಾಲತಿ, ಶಿವಮೊಗ್ಗ ಹಾಗೂ 2021-22ನೇ ಸಾಲಿನಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾಗಿದ್ದ ಬಾಬಣ್ಣ ಕಲ್ಮನಿ ಅವರು ನಿಧನರಾಗಿದ್ದು, ಅವರ ಕುಟುಂಬ ಸದಸ್ಯರಿಗೆ ಪ್ರಶಸ್ತಿ ವಿತರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಹೀಗಿದೆ ಇಂದು ಘೋಷಿಸಲಾಗುತ್ತಿರುವ ರಾಷ್ಟ್ರೀಯ ವಿಭಾಗದ ವಿವಿಧ ಪ್ರಶಸ್ತಿಗಳ ವಿವರ
ಆಯ್ಕೆ ಸಮಿತಿಯ ಅಧ್ಯಕ್ಷರು : ಡಾ. ಗೊ.ರು. ಚನ್ನಬಸಪ್ಪ
ಕ್ರ
ಸಂ |
ಪ್ರಶಸ್ತಿಯ ಹೆಸರು | 2020-21 | 2021-22 | 2022-23 | 2023-24 | ಒಟ್ಟು |
1 | ಬಸವ ರಾಷ್ಟ್ರೀಯ ಪುರಸ್ಕಾರ | – | – | ಶ್ರೀ ಆನಂದ್ ತೆಲ್ತುಂಬಡೆ, ಮಹಾರಾಷ್ಟ್ರ | ಡಾ. ಎನ್. ಜಿ. ಮಹದೇವಪ್ಪ, ಧಾರವಾಡ | 2 |
2 | ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ | – | – | ಶ್ರೀ ಜಿನದತ್ತ ದೇಸಾಯಿ, ಧಾರವಾಡ | ಗಾಂಧಿ ಸೇವಾಶ್ರಮ, ಗುಜರಾತ | 2 |
3 | ಟಿ. ಚೌಡಯ್ಯ ಪ್ರಶಸ್ತಿ | – | – | ಶ್ರೀ ನಿತ್ಯಾನಂದ ಹಳದಿಪುರ, ಮುಂಬೈ (ಕೊಳಲು) | ಶ್ರೀ ಶ್ರೀರಾಮುಲು, ಕೋಲಾರ (ನಾದಸ್ವರ) | 2 |
4 | ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿ | – | – | ಪಂ. ಸೋಮನಾಥ್ ಮರಡೂರ, ಧಾರವಾಡ
(ಹಿಂದೂಸ್ಥಾನಿ ಗಾಯನ) |
ಡಾ. ನಾಗಮಣಿ ಶ್ರೀನಾಥ್, ಮೈಸೂರು
(ಕರ್ನಾಟಕ ಸಂಗೀತ) |
2 |
ಈ ಪ್ರಶಸ್ತಿಗಳು ತಲಾ ರೂ.10.00ಲಕ್ಷಗಳ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಹಾಗೂ ಶಾಲು, ಹಾರ, ಫಲತಾಂಬೂಲ ಒಳಗೊಂಡಿದೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗ
ಆಯ್ಕೆ ಸಮಿತಿಯ ಅಧ್ಯಕ್ಷರು : ಶ್ರೀಮತಿ ಬಿ.ಟಿ. ಲಲಿತಾ ನಾಯಕ್
ಕ್ರ
ಸಂ |
ಪ್ರಶಸ್ತಿಯ ಹೆಸರು | 2020-21 | 2021-22 | 2022-23 | 2023-24 | ಒಟ್ಟು |
5 | ಸಂಗೊಳ್ಳಿರಾಯಣ್ಣ ಪ್ರಶಸ್ತಿ | ಶ್ರೀ ಕೆ. ಮರುಳಸಿದ್ದಪ್ಪ, ಬೆಂಗಳೂರು | ಶ್ರೀ ಹಸನ್ ನಯೀಂ ಸುರಕೋಡ, ಬೆಳಗಾವಿ | ಶ್ರೀ ಕೆ. ರಾಮಯ್ಯ, ಕೋಲಾರ | ಶ್ರೀ ವೀರಸಂಗಯ್ಯ, ಬಳ್ಳಾರಿ | 4 |
6 | ಅಕ್ಕಮಹಾದೇವಿ ಪ್ರಶಸ್ತಿ | ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್, ಧಾರವಾಡ | ಡಾ. ಆರ್ ಸುನಂದಮ್ಮ, ಮಂಡ್ಯ | ಶ್ರೀಮತಿ ಮೀನಾಕ್ಷಿ ಬಾಳಿ, ಕಲಬುರಗಿ | ಡಾ. ವಸುಂಧರಾ ಭೂಪತಿ, ಬೆಂಗಳೂರು | 4 |
7 | ಕನಕಶ್ರೀ ಪ್ರಶಸ್ತಿ | – | ಡಾ. ಲಿಂಗದಹಳ್ಳಿ ಹಾಲಪ್ಪ, ಹಾವೇರಿ | ಡಾ. ಬಿ. ಶಿವರಾಮ ಶೆಟ್ಟಿ, ಮಂಗಳೂರು | – | 2 |
ಈ ಪ್ರಶಸ್ತಿಗಳು ತಲಾ ರೂ.5.00ಲಕ್ಷಗಳ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಹಾಗೂ ಶಾಲು, ಹಾರ, ಫಲತಾಂಬೂಲ ಒಳಗೊಂಡಿದೆ.
ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ ವಿಭಾಗ
ಆಯ್ಕೆ ಸಮಿತಿಯ ಅಧ್ಯಕ್ಷರು : ಡಾ. ಬರಗೂರು ರಾಮಚಂದ್ರಪ್ಪ
ಕ್ರ
ಸಂ |
ಪ್ರಶಸ್ತಿಯ ಹೆಸರು | 2020-21 | 2021-22 | 2022-23 | 2023-24 | ಒಟ್ಟು |
8 | ಪಂಪ ಪ್ರಶಸ್ತಿ | – | – | – | ಶ್ರೀ ನಾ. ಡಿಸೋಜ, ಶಿವಮೊಗ್ಗ | 1 |
9 | ಪ್ರೊ. ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ | – | – | ಡಾ. ಕೆ. ವಿಶ್ವನಾಥ ಕಾರ್ನಾಡ್, ಮಹಾರಾಷ್ಟ್ರ | ಶ್ರೀ ಚಂದ್ರಕಾಂತ ಪೋಕಳೆ, ಬೆಳಗಾವಿ | 2 |
10 | ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ | – | – | ಶ್ರೀಮತಿ ಬಾನು ಮುಷ್ತಾಕ್, ಹಾಸನ | ಶ್ರೀಮತಿ ಎಚ್. ಎಸ್. ಮುಕ್ತಾಯಕ್ಕ, ರಾಯಚೂರು | 2 |
11 | ಬಿ.ವಿ. ಕಾರಂತ ಪ್ರಶಸ್ತಿ | – | – | ಶ್ರೀ ಸಿ. ಬಸವಲಿಂಗಯ್ಯ, ಬೆಂಗಳೂರು | ಶ್ರೀ ಸದಾನಂದ ಸುವರ್ಣ, ಮಂಗಳೂರು | 2 |
12 | ಡಾ. ಗುಬ್ಬಿವೀರಣ್ಣ ಪ್ರಶಸ್ತಿ | – | – | ಶ್ರೀ ಚನ್ನಬಸಯ್ಯ ಗುಬ್ಬಿ, ತುಮಕೂರು | ಶ್ರೀ ಎಲ್. ಬಿ. ಶೇಖ ಮಾಸ್ತರ, ವಿಜಯಪುರ | 2 |
13 | ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ | – | ಡಾ. ಮೊಗಳ್ಳಿ ಗಣೇಶ್, ಹಂಪಿ | ಶ್ರೀ ಉತ್ತಮ ಕಾಂಬ್ಳೆ
(ಮರಾಠಿ ಲೇಖಕರು) |
ಶ್ರೀಮತಿ ಬಿ. ಟಿ. ಜಾಹ್ನವಿ, ದಾವಣಗೆರೆ | 3 |
ಈ ಪ್ರಶಸ್ತಿಗಳು ತಲಾ ರೂ.5.00ಲಕ್ಷಗಳ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಹಾಗೂ ಶಾಲು, ಹಾರ, ಫಲತಾಂಬೂಲ ಒಳಗೊಂಡಿದೆ.
ಕಲಾ ಪ್ರಶಸ್ತಿ ವಿಭಾಗ
ಆಯ್ಕೆ ಸಮಿತಿಯ ಅಧ್ಯಕ್ಷರು : ಡಾ. ವಿ.ಟಿ. ಕಾಳೆ
ಕ್ರ
ಸಂ |
ಪ್ರಶಸ್ತಿಯ ಹೆಸರು | 2020-21 | 2021-22 | 2022-23 | 2023-24 | ಒಟ್ಟು |
14 | ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ | – | – | ಶ್ರೀ ಜಿ. ಎಲ್. ಎನ್. ಸಿಂಹ, ಮೈಸೂರು | ಶ್ರೀ ಬಸವರಾಜ್. ಎಲ್. ಜಾನೆ, ಕಲಬುರಗಿ | 2 |
16 | ಜಾನಪದಶ್ರೀ ಪ್ರಶಸ್ತಿ – ವಾದನ | – | – | ಶ್ರೀ ಅರುವ ಕೊರಗಪ್ಪ ಶೆಟ್ಟಿ, ದಕ್ಷಿಣ ಕನ್ನಡ | ಶ್ರೀ ಜಿ. ಪಿ. ಜಗದೀಶ್, ಚಿಕ್ಕಮಗಳೂರು | 2 |
17 | ಜಾನಪದಶ್ರೀ ಪ್ರಶಸ್ತಿ – ಗಾಯನ | – | – | ಶ್ರೀ ಕಲ್ಲಪ್ಪ ಮಿರ್ಜಾಪುರ, ಬೀದರ | ಶ್ರೀಮತಿ ಹಲಗೆ ದುರ್ಗಮ್ಮ, ಚಿತ್ರದುರ್ಗ | 2 |
ಈ ಪ್ರಶಸ್ತಿಗಳು ತಲಾ ರೂ.5.00ಲಕ್ಷಗಳ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಹಾಗೂ ಶಾಲು, ಹಾರ, ಫಲತಾಂಬೂಲ ಒಳಗೊಂಡಿದೆ.
ಶಸ್ತಿ ವಿಭಾಗ
ಆಯ್ಕೆ ಸಮಿತಿಯ ಅಧ್ಯಕ್ಷರು : ಡಾ. ನರಸಿಂಹಲು ವಡವಾಟಿ
ಕ್ರ
ಸಂ |
ಪ್ರಶಸ್ತಿಯ ಹೆಸರು | 2020-21 | 2021-22 | 2022-23 | 2023-24 | ಒಟ್ಟು |
18 | ಶ್ರೀ ನಿಜಗುಣ-ಪುರಂದರ ಪ್ರಶಸ್ತಿ | – | – | ಶ್ರೀಮತಿ ಎಂ.ಕೆ. ಸರಸ್ವತಿ, ಮೈಸೂರು | ಶ್ರೀಮತಿ ಅಕ್ಕಮಹಾದೇವಿ ಮಠ, ಧಾರವಾಡ | 2 |
19 | ಕುಮಾರವ್ಯಾಸ ಪ್ರಶಸ್ತಿ | – | – | ಶ್ರೀ ಸಿದ್ದೇಶ್ವರ ಶಾಸ್ತ್ರೀ, ಗದಗ | ಶ್ರೀ ಕೃಷ್ಣಗಿರಿ ರಾಮಚಂದ್ರ, ಮೈಸೂರು | 2 |
20 | ಶಾಂತಲಾನಾಟ್ಯ ಪ್ರಶಸ್ತಿ | – | – | ಶ್ರೀಮತಿ ಚಿತ್ರ ವೇಣುಗೋಪಾಲ್, ಬೆಂಗಳೂರು | ಶ್ರೀಮತಿ ರೇವತಿ ನರಸಿಂಹನ್, ಬೆಂಗಳೂರು | 2 |
21 | ಸಂತ ಶಿಶುನಾಳ ಷರೀಫ ಪ್ರಶಸ್ತಿ | – | – | ಶ್ರೀಮತಿ ಕಸ್ತೂರಿ ಶಂಕರ್, ಬೆಂಗಳೂರು | ಶ್ರೀ ಎನ್. ಬಿ. ಶಿವಲಿಂಗಪ್ಪ, ಶಿವಮೊಗ್ಗ | 2 |
ಒಟ್ಟು | 44 |
ಈ ಪ್ರಶಸ್ತಿಗಳು ತಲಾ ರೂ.5.00ಲಕ್ಷಗಳ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಹಾಗೂ ಶಾಲು, ಹಾರ, ಫಲತಾಂಬೂಲ ಒಳಗೊಂಡಿದೆ.
ಈಗಾಗಲೇ ಘೋಷಣೆ ಮಾಡಿರುವ ಪ್ರಶಸ್ತಿ ಪ್ರದಾನ ಆಗದೆ ಇರುವ ಹಿಂದಿನ ಸಾಲಿನ ಪ್ರಶಸ್ತಿಗಳ ವಿವರ
ಕ್ರ
ಸಂ |
ಪ್ರಶಸ್ತಿಯ ಹೆಸರು | 2018-19 | 2020-21 | 2021-22 | 2022-23 | ಒಟ್ಟು |
1 | ಬಸವ ರಾಷ್ಟ್ರೀಯ ಪುರಸ್ಕಾರ | – | ಶ್ರೀ ಭಿಕು ರಾಮ್‌ಜಿ ಇದಾತೆ ರತ್ನಗಿರಿ, ಮಹಾರಾಷ್ಟ್ರ | ಡಾ ವೀರಣ್ಣ ರಾಜೂರು | – | 2 |
2 | ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ | – | ಶ್ರೀ ಜಪಾನಂದ ಸ್ವಾಮಿಜಿ | ಶ್ರೀ ಸದಾನಂದ ಮಾಸ್ಟರ್ | – | 2 |
3 | ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ | – | ಶ್ರೀ ಎಂ ವಾಸುದೇವ ಮೋಹಿತೆ | ಶ್ರೀ ಹರಿಪ್ರಸಾದ್ ಚೌರಾಸಿಯಾ | – | 2 |
8 | ಪಂಪ ಪ್ರಶಸ್ತಿ | – | ಪ್ರೊ. ಸಿ.ಪಿ ಕೃಷ್ಣಕುಮಾರ್ | – | ಡಾ ಎಸ್ ಆರ್ ರಾಮಸ್ವಾಮಿ | 2 |
9 | ಪ್ರೊ.ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ | – | ಡಾ. ರಮಾನಂದ ಬನಾರಿ | ಶ್ರೀ ಎಂ ಎನ್ ವೆಂಕಟೇಶ, ಕುಪ್ಪಂ | – | 2 |
10 | ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ | – | ಶ್ರೀಮತಿ ಕೌಸಲ್ಯಾ ಧರಣೀಂದ್ರ | ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ | – | 2 |
11 | ಬಿ.ವಿ. ಕಾರಂತ ಪ್ರಶಸ್ತಿ | ಶ್ರೀಮತಿ ಎಸ್ ಮಾಲತಿ, ಶಿವಮೊಗ್ಗ
(ಸದರಿಯವರ ಬದಲಾಗಿ ಅವರ ವಾರಸುದಾರರಿಗೆ ಪ್ರಶಸ್ತಿ ನೀಡಲು ಸರ್ಕಾರವು ಆದೇಶಿಸಿದೆ) |
ಡಾ. ಬಿ ವಿ ರಾಜಾರಾಂ | ಶ್ರೀ ಅಬ್ದುಲ್ಲ ಪಿಂಜಾರ | – | 3 |
12 | ಡಾ. ಗುಬ್ಬಿವೀರಣ್ಣ ಪ್ರಶಸ್ತಿ | – | ಶ್ರೀ ಕುಮಾರಸ್ವಾಮಿ, ಚಿತ್ರದುರ್ಗ | ಶ್ರೀ ಬಾಬಣ್ಣ ಕಲ್ಮನಿ | – | 2 |
14 | ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ | – | ಶ್ರೀಮತಿ ಗಾಯತ್ರಿ ದೇಸಾಯಿ | ಶ್ರೀ ವಿಜಯ್ ಹಾಗರ ಗುಂಡಗಿ | – | 2 |
16 | ಜಾನಪದಶ್ರೀ ಪ್ರಶಸ್ತಿ – ವಾದನ | – | ಶ್ರೀಮತಿ ಹುಸೇನಾ ಬಿ ಬುಡೇನ್ | ಶ್ರೀ ಕುಮಾರಸ್ವಾಮಿ, ಮೈಸೂರು | – | 2 |
17 | ಜಾನಪದಶ್ರೀ ಪ್ರಶಸ್ತಿ – ಗಾಯನ | – | ಶ್ರೀ ಮಾರೆಪ್ಪ ಮಾರೆಪ್ಪ ದಾಸರ | ಡಾ. ಅಪ್ಪಗೆರೆ ತಿಮ್ಮರಾಜು | – | 2 |
18 | ಶ್ರೀ ನಿಜಗುಣ-ಪುರಂದರ ಪ್ರಶಸ್ತಿ | – | ಪಂಡಿತ್ ಎಂ.ವೆಂಕಟೇಶ್ ಕುಮಾರ | ಶ್ರೀಮತಿ ಎಂ ಎಸ್ ಶೀಲಾ | – | 2 |
19 | ಕುಮಾರವ್ಯಾಸ ಪ್ರಶಸ್ತಿ | – | ಶ್ರೀ ರಾಜಾರಾಂ ಮೂರ್ತಿ | ಡಾ. ಎನ್. ಕೆ ರಾಮಶೇಷನ್ | – | 2 |
20 | ಶಾಂತಲಾನಾಟ್ಯ ಪ್ರಶಸ್ತಿ | – | ಶ್ರೀ ಎಂ ಆರ್ ಕೃಷ್ಣಮೂರ್ತಿ | ಶ್ರೀಮತಿ ಬಿ ಎಸ್ ಸುನಂದಾದೇವಿ | – | 2 |
21 | ಸಂತ ಶಿಶುನಾಳ ಷರೀಫ ಪ್ರಶಸ್ತಿ | – | ಶ್ರೀ ಪುತ್ತೂರು ನರಸಿಂಹ | ಶ್ರೀ ಚಂದ್ರಶೇಖರ ಜೋಯಿಸ್ | – | 2 |
ಒಟ್ಟು | 31 |
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜನವರಿ 31ರಂದು ಸಂಜೆ 6.00ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿಗಳು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.