ಉತ್ತರ ಪ್ರದೇಶ: ಆಂಬ್ಯುಲೆನ್ಸ್ ವ್ಯವಸ್ಥೆ ದೊರಕದ ಕಾರಣ 10 ವರ್ಷದ ಬಾಲಕನೊಬ್ಬ ತನ್ನ ಸಹೋದರನ ಮೃತದೇಹವನ್ನು ತೋಳಗಳಲ್ಲೇ ಹಿಡಿದು ಮನೆಗೆ ಕಾಲ್ನಡಿಗೆಯಲ್ಲೇ ಹೋಗುತ್ತಿರುವ ಮನಕಲಕುವ ದೃಶ್ಯವೊಂದು ಉತ್ತರ ಪ್ರದೇಶದ ಬಾಗ್ಪತ್ನಿಂದ ಹೊರಬಿದ್ದಿದೆ.
ಏನಿದು ಪ್ರಕರಣ?
ಬಾಗ್ಪತ್ನ ದೆಹಲಿ-ಯಮುನೋತ್ರಿ ಹೆದ್ದಾರಿಯಲ್ಲಿ ಮಲತಾಯಿ ಸೀತಾ ಎಂಬಾಕೆ ತನ್ನ 2 ವರ್ಷದ ಕಾಲಾ ಎಂಬ ಮಗು ನಿರಂತರವಾಗಿ ಅಳುತ್ತಿದ್ದರಿಂದ ಕೋಪದಿಂದ ಮಗುವನ್ನು ರಸ್ತೆಗೆ ಎಸೆದಿದ್ದಾಳೆ. ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಆ ಮಗುವಿನ ಮೇಲೆ ಹರಿದಿದೆ. ಇದರ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಈಗಾಗಲೇ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ವೇಳೆ ಅವರ ಬಳಿ ಸಾಕಷ್ಟು ಹಣ ಕೂಡ ಇರಲಿಲ್ಲ. ಈ ನಡುವೆ ಆಂಬ್ಯುಲೆನ್ಸ್ ವ್ಯವಸ್ಥೆ ದೊರಕದ ಕಾರಣ ಮಗುವಿನ ತಂದೆ ಮತ್ತು 10 ವರ್ಷದ ಸಹೋದರ ಶಿವಂ ಮಗುವಿನ ಮೃತದೇಹವನ್ನು ಹೊತ್ತು ಸಾಗುತ್ತಿರುವ ದೃಶ್ಯ ಕಂಡುಬಂದಿದೆ.
बागपत में मानवता की शर्मसार करने वाला #VIDEO आया सामने, बच्चे का पोस्टमार्टम करा हाथो में उठाकर शव ले जाते परिजनों का वीडियो वायरल.
@UPGovt
@brajeshpathakup
@myogiadityanath #Healthdepartment pic.twitter.com/09R81r80oC— Mayank Tiwari (@imayanktiwari) August 27, 2022
ಇದೇ ವೇಳೆ ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ದಿನೇಶ್ ಶರ್ಮಾ ಮಾತನಾಡಿ, ಕುಟುಂಬಸ್ಥರು ತಮ್ಮ ಇಚ್ಛೆಯ ಮೇರೆಗೆ ಮೃತದೇಹವನ್ನು ಕಾಲ್ನಡಿಗೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಸ್ವಲ್ಪ ದೂರದ ನಂತರವೇ ವಾಹನ ಒದಗಿಸಿ ಆ ಮೂಲಕ ಮನೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಿಕೊಂಡಿದ್ದಾರೆ.
Ganesh Chaturthi 2022: : ಗಣೇಶ ಚತುರ್ಥಿ ಪೂಜಾ ವಿಧಿ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ ಮುಹೂರ್ತ