ಶಿವಮೊಗ್ಗ: ಸಾಗರದ ಬಿಹೆಚ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಒಳಚರಂಡಿ ಕಾಮಗಾರಿ ಕಳಪೆ ಎನ್ನುವ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಒಳಚರಂಡಿ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ದೃಢಪಟ್ಟರೇ ಮುಲಾಜಿಲ್ಲದೇ ಡೆಮಾಲಿಷ್ ಮಾಡಿಸಿ, ಗುಣಮಟ್ಟದಿಂದ ಕೂಡಿರುವಂತ ಕಾಮಗಾರಿ ನಡೆಸಲು ಆದೇಶಿಸಲಾಗುವುದು ಅಂತ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.
ಇಂದು ಸಾಗರದ ಬಿಹೆಚ್ ರಸ್ತೆಯಲ್ಲಿ ನಡೆಯುತ್ತಿರುವಂತ ರಾಷ್ಟ್ರೀಯ ಹೆದ್ದಾರಿಯ ಒಳಚರಂಡಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಜಗದೀಶ್ ಪರಿಶೀಲನೆ ನಡೆಸಿದರು. ಒಳಚರಂಡಿ ಕಾಮಗಾರಿಯನ್ನು ನಾಮಕಾವಸ್ಥೆಗೆ ನಡೆಸಲಾಗುತ್ತಿದೆ. ಕ್ಯೂರಿಂಗ್ ಬಗ್ಗೆ ಕಿಂಚಿತ್ತೂ ಗಮನ ಕೊಡುತ್ತಿಲ್ಲ ಎಂಬುದಾಗಿ ಸ್ಥಳದಲ್ಲಿದ್ದಂತ ಸಾಗರದ ಸಾರ್ವಜನಿಕರು ಜಗದೀಶ್ ಅವರ ಗಮನಕ್ಕೆ ತಂದರು.
ಜೋಗ ರಸ್ತೆಯ ಸೇತುವೆ ಕಾಮಗಾರಿಯಿಂದ ಹಿಡಿದು, ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದ ಒಳಚರಂಡಿ ಕಾಮಗಾರಿಯನ್ನು ಜಗದೀಶ್ ವೀಕ್ಷಣೆ ಮಾಡಿದರು. ಈ ವೇಳೆ ಸ್ಥಳದಲ್ಲಿದ್ದಂತ ಹಿರಿಯ ಪತ್ರಕರ್ತ ಮಹೇಶ್ ಹೆಗಡೆ ಅವರು ಕಳಪೆ ಕಾಮಗಾರಿಯ ಬಗ್ಗೆ ಇಂಚಿಂಚೂ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಜಗದೀಶ್ ಅವರ ಗಮನಕ್ಕೆ ತಂದರು.
ಸಾಗರದ ಹೈವೇ ರಸ್ತೆ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ. ಬಿಸಿಲ ಛಳಕ್ಕೆ ಈಗಾಗಲೇ ಅಲ್ಲಲ್ಲಿ ಕ್ಯೂರಿಂಗ್ ಸರಿಯಾಗಿ ಮಾಡದೇ ಬಿರುಕು ಬಿಟ್ಟಿದೆ. ಮುಂಬರುವ ಮಳೆಗಾಲದ ವೇಳೆಗೆ ಒಳಚರಂಡಿ ಹಾಳು ಆಗೋದು ಗ್ಯಾರಂಟಿ ಎಂಬುದಾಗಿ ಸ್ಥಳದಲ್ಲಿದ್ದಂತ ಸಾರ್ವಜನಿಕರು ಆಕ್ರೋಶವನ್ನು ಹೊರ ಹಾಕಿದರು.
ಈ ಕಾಮಗಾರಿ ಪರಿಶೀಲನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಜಗದೀಶ್ ಅವರು, ಸಾಗರದ ಬಿಹೆಚ್ ರಸ್ತೆ ಹೈವೇ ಕಾಮಗಾರಿಯನ್ನು ವೀಕ್ಷಣೆ ಮಾಡಲಾಗಿದೆ. ಮೇಲ್ನೋಟಕ್ಕೆ ಕಳಪೆಯಿಂದ ಕೂಡಿರುವುದು ಗಮನಕ್ಕೆ ಬಂದಿದೆ. ಕಾಮಗಾರಿಯ ಕ್ವಾಲಿಟಿಯ ಬಗ್ಗೆ ಪರೀಕ್ಷೆ ಮಾಡಲಾಗುತ್ತದೆ. ಪರೀಕ್ಷೆಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೂನ್, ಜುಲೈ ನಲ್ಲಿ ಕಾಮಗಾರಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದರು.
ಇದೇ ಸಂದರ್ಭದಲ್ಲಿ ಕಾಮಗಾರಿ ಕಳಪೆಯಾಗಿದ್ದರೇ ಕ್ರಮವೇನು ಎಂದು ಪ್ರಶ್ನಿಸಿದಂತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದಂತ ಅವರು, ಕಳಪೆ ಕಾಮಗಾರಿಯ ವಿಚಾರದಲ್ಲಿ ನಾವು ರಾಜಿಯೇ ಮಾಡಿಕೊಳ್ಳೋದಿಲ್ಲ. ಒಳಚರಂಡಿ ಕಾಮಗಾರಿಯು ಗುಣಮಟ್ಟದಿಂದ ಕೂಡಿಲ್ಲ ಎಂಬುದು ಸಾಭೀತಾದ್ರೆ ಡೆಮಾಲಿಷ್ ಮಾಡಿಸುವುದಾಗಿ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ
ಟ್ರಂಪ್ ಜೊತೆ ಮಾತಿನ ಚಕಮಕಿ:’ಜೆಲೆನ್ಸ್ಕಿ’ಗೆ ಯುರೋಪಿಯನ್ ಮಿತ್ರರಾಷ್ಟ್ರಗಳು, ಕೆನಡಾ ಬೆಂಬಲ | Trump-Zelensky