ಧಾರವಾಡ: ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ತರಬೇಕೆಂದು ಆಗ್ರಹಿಸಿ ಧಾರವಾಡದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎನ್ ಪಿಎಸ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ.
BIGG NEWS: ಚೆನ್ನೈ ನಲ್ಲಿ ಕರಡಿ ದಾಳಿ ಮೂವರ ಸ್ಥಿತಿ ಗಂಭೀರ:ಬೆಚ್ಚಿಬಿದ್ದ ಜನ
ಪ್ರತಿಭಟನಾ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಾಥ್ ನೀಡಿದರು. ನಂತರ ಮಾತನಾಡಿದ ಅವರು, ಈ ಹಿಂದೆ ಪ್ರತಿಭಟನೆ ಮಾಡಿದ್ದಾಗ ಡಿ ಕೆ ಶಿವಕುಮಾರ್ ಅವರು ಹಳೆಯ ಪಿಂಚಣಿ ಪದ್ಧತಿ ಜಾರಿಗೆ ತರುವ ಬಗ್ಗೆ ಮಾತನಾಡಿದ್ದರು. ಆದ್ರೆ, ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.
BIGG NEWS: ಚೆನ್ನೈ ನಲ್ಲಿ ಕರಡಿ ದಾಳಿ ಮೂವರ ಸ್ಥಿತಿ ಗಂಭೀರ:ಬೆಚ್ಚಿಬಿದ್ದ ಜನ
ನಾವು ವಿಧಾನ ಪರಿಷತ್ ಸದಸ್ಯರೆಲ್ಲರೂ ಸೇರಿ ಶಿಕ್ಷಣ ಸಚಿವರ ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದೇವೆ. ಜೊತೆಗೆ ಈ ಕುರಿತು ಸಿಎಂಗೆ ಕೂಡ ಹೇಳಿದ್ದೇನೆ ಎಂದರು.
ಸರ್ಕಾರಿ ನೌಕರರ ಈ ಹೋರಾಟ ನ್ಯಾಯವಾಗಿದೆ ಮತ್ತು ಪ್ರತಿಭಟನಾಕಾರರ ಬೇಡಿಕೆ ಯೋಗ್ಯವಾಗಿದೆ. ಹೀಗಾಗಿ, ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ತರಬೇಕೆಂದು ಒತ್ತಾಯ ಮಾಡುತ್ತೇನೆ. ಯಾರಿಗಾದರೂ ಅನ್ಯಾಯ ಆದರೆ ಅವರ ಪರ ನ್ಯಾಯಕ್ಕಾಗಿ ನಾನು ಇರುತ್ತೇನೆ ಎಂದರು.