ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇತ್ತ ಉತ್ತರ ಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ, ಗುಜರಾತ್ ಮತ್ತು ಈಶಾನ್ಯ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ 40 ಗಂಟೆಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ದೆಹಲಿ-ಎನ್ಸಿಆರ್ನ ವಿವಿಧ ಭಾಗಗಳು ಮತ್ತು ಇತರ ಅಕ್ಕಪಕ್ಕದ ಪ್ರದೇಶಗಳಲ್ಲಿ ಜಲಾವೃತವಾಗಿದೆ.
Delhi wakes up to waterlogging in several parts of the national capital after heavy rainfall; visuals from East Vinod Nagar pic.twitter.com/todRTaJjls
— ANI (@ANI) October 9, 2022
ಭಾನುವಾರ (ಇಂದು) ಮುಂಜಾನೆಯ ಸಮಯದಲ್ಲಿ ಇಡೀ ದೆಹಲಿ-ಎನ್ಸಿಆರ್ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗುರದಿಂದ ಮಧ್ಯಮ ತೀವ್ರತೆಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದೆಹಲಿಯ ಎಲ್ಲಾ 12 ಕೇಂದ್ರಗಳಲ್ಲಿ ಇಂದು ಮಳೆಯಾಗಿದೆ. ನಾಳೆಯವರೆಗೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 10 ರಿಂದ ಗಮನಾರ್ಹ ಮಳೆಯಾಗುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ವಿಜ್ಞಾನಿ ಆರ್ಕೆ ಜೆನಮಣಿ ಹೇಳಿದ್ದಾರೆ.
ಮಹಾರಾಷ್ಟ್ರಕ್ಕೆ ಎಲ್ಲೋ ಅಲರ್ಟ್ ಘೋಷಣೆ
ಮಹಾರಾಷ್ಟ್ರದಲ್ಲಿ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ. ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಗಳಿವೆ. ಇದರ ಜೊತೆಗೆ ಚಂಡಮಾರುತದ ಎಚ್ಚರಿಕೆಯನ್ನು ನೀಡಲಾಗಿದೆ. ಮಹಾರಾಷ್ಟ್ರ, ಮರಾಠವಾಡ ಮತ್ತು ಕೊಂಕಣದಲ್ಲಿ ಮುಂದಿನ ಮೂರರಿಂದ ನಾಲ್ಕು ದಿನಗಳವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು IMD ಮುಂಬೈನ ವಿಜ್ಞಾನಿ-ಸಿ ನಿತಾ ಟಿಎಸ್ ಹೇಳಿದ್ದಾರೆ.
ಯುಪಿಯಲ್ಲಿ ಮಳೆ-ಸಂಬಂಧಿತ ಘಟನೆಗಳಲ್ಲಿ 4 ಮಂದಿ ಸಾವು
ಉತ್ತರ ಪ್ರದೇಶದಲ್ಲಿ ಶನಿವಾರ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಅತಿವೃಷ್ಟಿಯಿಂದ ಉಂಟಾದ ಘಟನೆಗಳಲ್ಲಿ ಲಖಿಂಪುರ ಖೇರಿ, ಇಟಾಹ್ ಮತ್ತು ಅಂಬೇಡ್ಕರ್ ನಗರದಲ್ಲಿ ತಲಾ ಒಬ್ಬ ಸಾವು ವರದಿಯಾಗಿದೆ. ಬಂದಾ ಎಂಬಲ್ಲಿ ಸಿಡಿಲು ಬಡಿದು ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
BIGG NEWS : ಕೇಂದ್ರ ಸರ್ಕಾರದಿಂದ ಅತಿಹೆಚ್ಚು ಬಾಲ್ಯ ವಿವಾಹ ನಡೆಯುತ್ತಿರುವ ರಾಜ್ಯದ ಹೆಸರು ಪ್ರಕಟ | Child marriage