ನವದೆಹಲಿ : ದೆಹಲಿ ಶ್ರದ್ಧಾ ವಾಕರ್ ಹತ್ಯೆ ಶಂಕಿತ ಆರೋಪಿಗೆ ಅಫ್ತಾಬ್ ಅಮೀನ್ ಪೂನಾವಾಲಾನ ಮಂಪರು ಪರೀಕ್ಷೆಯನ್ನು ಪರೀಕ್ಷೆಯನ್ನು ಐದು ದಿನಗಳೊಳಗೆ ಮುಗಿಸುವಂತೆ ದೆಹಲಿ ನ್ಯಾಯಾಲಯವು ಶುಕ್ರವಾರ ನಗರ ಪೊಲೀಸರಿಗೆ ಆದೇಶಿಸಿದೆ. ಇದರ ಜೊತೆಗೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ರೋಹಿಣಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಜಯಶ್ರೀ ರಾಥೋಡ್ ಅವರು ಐದು ದಿನಗಳೊಳಗೆ ಆರೋಪಿಯ ಮಂಪರು ಪರೀಕ್ಷೆಯನ್ನು ನಡೆಸಲು ತನಿಖಾಧಿಕಾರಿಗೆ (ಐಒ) ಅವಕಾಶ ನೀಡುವಂತೆ ಆದೇಶಿಸಿದ್ದಾರೆ.
28ರ ಹರೆಯದ ಪೂನಾವಾಲಾ ಎಂಬಾತ ತನ್ನ ಜೀವನ ಸಂಗಾತಿ ಶ್ರದ್ಧಾ ವಾಕರ್ಳನ್ನು ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ಮನೆಯಲ್ಲಿ 300 ಲೀಟರ್ ಫ್ರಿಡ್ಜ್ನಲ್ಲಿಟ್ಟು ಸುಮಾರು ಮೂರು ವಾರಗಳ ಕಾಲ ನಗರದಾದ್ಯಂತ ಎಸೆದಿದ್ದನು. ಪ್ರಕರಣವು ಕೊಲೆಯಾದ 6 ತಿಂಗಳ ಬಳಿಕ ಬೆಳಕಿಗೆ ಬಂದಿದೆ.
ಶ್ರದ್ಧಾ ವಾಕರ್ ತನ್ನ ಜೀವಕ್ಕೆ ನಿರಂತರವಾಗಿ ಹೆದರುತ್ತಿದ್ದರು. ಆಕೆಯ ಸ್ನೇಹಿತೆಯ ಪ್ರಕಾರ, ಅಫ್ತಾಬ್ ಅವಳನ್ನು ಹಿಂಸಾತ್ಮಕವಾಗಿ ನಿಂದಿಸಿದ ನಂತರ ಅವಳ ಸ್ನೇಹಿತರು 2020 ರಲ್ಲಿ ಅವಳನ್ನು ರಕ್ಷಿಸಿದ್ದರು ಎನ್ನಲಾಗುತ್ತಿದೆ.
ಅಫ್ತಾಬ್ ಆಕೆಯನ್ನು ಮನೆಗೆ ಬೀಗ ಹಾಕಿಕೊಂಡು ಇತರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದ. ಅಫ್ತಾಬ್ ಕೂಡ ಮಾದಕ ವ್ಯಸನಿಯಾಗಿದ್ದನು.
ಶ್ರದ್ಧಾ ಮೂರು ವರ್ಷಗಳ ಹಿಂದೆ ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಅಫ್ತಾಬ್ ಪರಿಚಯವಾಗಿತ್ತು. ಆದರೆ ಅವರ ಸಂಬಂಧವು ಸಂತೋಷವಾಗಿರಲಿಲ್ಲ. ದಂಪತಿ ನಡುವೆ ನಿತ್ಯ ಹಣದ ಭಿನ್ನಾಭಿಪ್ರಾಯಗಳಿದ್ದವು. ಈ ವಿಷಯಗಳಲ್ಲಿ ಒಂದಕ್ಕೆ ದಂಪತಿಗಳು ಜಗಳವಾಡಿದ್ದರು. ಇದು ಅಫ್ತಾಬ್ ಶ್ರದ್ಧಾಳನ್ನು ಕೊಲ್ಲಲು ಕಾರಣವಾಯಿತು ಎನ್ನಲಾಗುತ್ತಿದೆ.
BREAKING: ಜೊಮ್ಯಾಟೋ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ | Mohit Gupta resigns