ನವದೆಹಲಿ: ಹಸಿವಿನಿಂದ ಬಳಲುತ್ತಿದ್ದವನಿಗೆ ಆಹಾರ ನೀಡಲು ನಿರಾಕರಿಸಿದ ಕಾಣ, ಕುಪಿತಗೊಂಡ ವ್ಯಕ್ತಿ ಆತನನ್ನು ಚಾಕುವಿನಿಂದ ಇರಿದು ಕೊಂದ ಘಟನೆ ರಾಷ್ಟ್ರ ರಾಜಧಾನಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಇಬ್ಬರು ವ್ಯಕ್ತಿಗಳು ರಿಕ್ಷಾದಲ್ಲಿ ಊಟ ಮಾಡುತ್ತಿದ್ದಾಗ ಒಬ್ಬ ಪಾನಮತ್ತ ವ್ಯಕ್ತಿ ಅವರ ಬಳಿಗೆ ಬಂದು ಊಟ ಕೇಳಿದ್ದಾನೆ. ರಿಕ್ಷಾದಲ್ಲಿದ್ದ ಒಬ್ಬ ವ್ಯಕ್ತಿ ರೊಟ್ಟಿ ಕೊಟ್ಟಿದ್ದಾನೆ. ಆದ್ರೆ, ಇನ್ನೊಬ್ಬ ವ್ಯಕ್ತಿ ಏನನ್ನೂ ಕೊಟ್ಟಿಲ್ಲ. ಇದರಿಂದ ಕುಪಿತಗೊಂಡ ಆತ ರಿಕ್ಷಾದಲ್ಲಿದ್ದ ಇಬ್ಬರನ್ನು ನಿಂದಿಸಲು ಆರಂಭಿಸಿದ್ದು, ನಂತರ ಚಾಕು ತೆಗೆದು ರಿಕ್ಷಾದಲ್ಲಿದ್ದ ಒಬ್ಬ ವ್ಯಕ್ತಿ ಇರಿದಿದ್ದಾನೆ ಎಂದು ಸೆಂಟ್ರಲ್ ದೆಹಲಿಯ ಪೊಲೀಸ್ ಉಪ ಕಮಿಷನರ್ ಶ್ವೇತಾ ಚೌಹಾಣ್ ಹೇಳಿದ್ದಾರೆ.
ಕೂಡಲೇ ಇರಿತಕ್ಕೊಳಗಾವನನ್ನು ಆರ್ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತ. ಆದ್ರೆ, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಪೊಲೀಸರು ಆರೋಪಿಯನ್ನು ಆಗ್ರಾದ 26 ವರ್ಷದ ಫಿರೋಜ್ ಖಾನ್ ಎಂದು ಗುರುತಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ವಾಯುಮಾಲಿನ್ಯವು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ: UK ಸಂಶೋಧಕರ ಬಹಿರಂಗ