ದೆಹಲಿ: ಮುಸ್ಲಿಂ ಕಾನೂನು ಪ್ರಕಾರ, ʻಪ್ರೌಢಾವಸ್ಥೆಗೆ ಬಂದ ಮುಸ್ಲಿಂ ಯುವತಿ ತನ್ನ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು. ಆಕೆ ಅಪ್ರಾಪ್ತಳಾಗಿದ್ದರೂ ಸಹ ತನ್ನ ಪತಿಯೊಂದಿಗೆ ವಾಸಿಸಬಹುದುʼ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ದಂಪತಿಗಳಾದ ಅಪ್ರಾಪ್ತ ಮುಸ್ಲಿಂ ಬಾಲಕಿ ಮತ್ತು ಆಕೆಯ ಪತಿ ರಕ್ಷಣೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ʻದಂಪತಿಗಳು ರಕ್ಷಣೆ ಬಯಸಿದ್ದಾರೆ. ಅವರನ್ನು ಯಾರೂ ಬಲವಂತವಾಗಿ ಬೇರ್ಪಡಿಸಲು ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ.
ಮಾರ್ಚ್ 11 ರಂದು ದಂಪತಿಗಳು ವಿವಾಹವಾಗಿದ್ದಾರೆ. ಇದು ಬಾಲಕಿಯ ಪೋಷಕರ ಇಚ್ಛೆಗೆ ವಿರುದ್ಧವಾಗಿತ್ತು. ಈ ಬಗ್ಗೆ ದೂರು ನೀಡಿದ್ದು, ಮದುವೆಯ ಸಮಯದಲ್ಲಿ, ಯುವಕನಿಗೆ 25 ವರ್ಷ ವಯಸ್ಸಾಗಿತ್ತು ಮತ್ತು ಬಾಲಕಿಗೆ ಇನ್ನೂ 15 ವರ್ಷ ಎಂದು ಪೋಷಕರು ಹೇಳಿಕೊಂಡಿದ್ದಾರೆ. ಆದ್ರೆ, ಪೋಷಕರು ನೀಡಿದ ಆಧಾರ್ ಕಾರ್ಡ್ ಪ್ರಕಾರ ಬಾಲಕಿಯ ವಯಸ್ಸು 19 ವರ್ಷಕ್ಕಿಂತ ಮೇಲ್ಪಟ್ಟಿದೆ ಎನ್ನಲಾಗಿದೆ.
BIGG NEWS : `ACB’ ರದ್ದು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಹೋಗಲ್ಲ : ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ
ಆಗಸ್ಟ್ 17 ರ ಆದೇಶದಲ್ಲಿ, ನ್ಯಾಯಮೂರ್ತಿ ಸಿಂಗ್ ಅವರು, ʻಮುಸ್ಲಿಂ ಕಾನೂನಿನ ಪ್ರಕಾರ, ಪ್ರೌಢಾವಸ್ಥೆಗೆ ಬಂದ ಹುಡುಗಿ ತನ್ನ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು ಮತ್ತು ಅವಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೂ ಸಹ ತನ್ನ ಪತಿಯೊಂದಿಗೆ ವಾಸಿಸುವ ಹಕ್ಕನ್ನು ಹೊಂದಿದ್ದಾಳೆʼ ಎಂದು ಎಂದಿದ್ದಾರೆ. ಸೋಮವಾರ ಸಂಜೆ ಆದೇಶದ ಪೂರ್ಣ ಪ್ರತಿ ಬಿಡುಗಡೆಯಾಗಿದೆ.
ಪೋಷಕರು ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರು ಹಾಗೂ ನನ್ನ ಪ್ರೇಮ ಪ್ರಕರಣದ ಹೊರತಾಗಿಯೂ ಬಲವಂತವಾಗಿ ಬೇರೊಬ್ಬರಿಗೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದರು. ಇದರಿಂದ ಬಾಲಕಿ ಇದರಿಂದ ಬೇಸತ್ತು ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮಾರ್ಚ್ 11, 2022 ರಂದು ಮುಸ್ಲಿಂ ಕಾನೂನಿನ ಪ್ರಕಾರ ವಿವಾಹವಾಗಿರುವುದಾಗಿ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಆದ್ರೆ, ಬಾಲಕಿಯ ಪೋಷಕರು ಮದುವೆಯನ್ನು ವಿರೋಧಿಸಿದ್ದು, ಯುವಕನ ವಿರುದ್ಧ ಐಪಿಸಿ ಸೆಕ್ಷನ್ 363 (ಅಪಹರಣಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಇದೀಗ, ಮದುವೆಯ ನಂತ್ರ ದಂಪತಿಗಳು ಲೈಂಗಿಕ ಸಂಭೋಗ ನಡೆಸಿದ್ದು, ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಹಾಗೂ ಈಗ ಮಹಿಳೆ ಗರ್ಭಿಣಿ ಎಂದು ವಕೀಲರು ತಿಳಿಸಿದ್ದಾರೆ. ಹೀಗಾಗಿ, ನ್ಯಾಯಾಲಯವು ಅವರನ್ನು ಒಟ್ಟಿಗೆ ಇರಲು ಅವಕಾಶ ಮಾಡಿಕೊಟ್ಟಿದ್ದು, ಅವರ ವೈಯಕ್ತಿಕ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಬಾಲಕಿ ಗರ್ಭಿಣಿಯಾಗಿದ್ದಾಗ ಆಕೆಯನ್ನು ಪತಿಯಿಂದ ಬೇರ್ಪಡಿಸಿದರೆ, ಆಕೆಗೆ ಹುಟ್ಟುವ ಮಗು ಹಾಗೂ ಆಕೆಯಗೆ ಹೆಚ್ಚು ಆಘಾತವನ್ನು ಉಂಟುಮಾಡುತ್ತದೆ. ಹೀಗಾಗಿ, ಇಲ್ಲಿ ರಾಜ್ಯದ ಉದ್ದೇಶವು ಅರ್ಜಿದಾರರ ಹಿತವನ್ನು ಕಾಪಾಡುವುದು ಸರ್ಕಾರದ ಗುರಿಯಾಗಬೇಕು. ಬಾಲಕಿ ಒಪ್ಪಿಗೆಯಿಂದ ಮದುವೆ ಆಗಿದ್ದರೆ ಹಾಗೂ ಸಂತೋಷವಾಗಿದ್ದರೆ, ಅವರ ವಯಕ್ತಕ ಬದುಕಿನಲ್ಲಿ ಪ್ರವೇಶಿಸಲು ಹಾಗೂ ಅವರನ್ನು ಬೇರ್ಪಡಿಸಲು ಯಾರಿಗೂ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.
Big news: ಚಿಕ್ಕ ಮಕ್ಕಳಲ್ಲಿ `ಟೊಮೆಟೊ ಜ್ವರ’ದ ಅಪಾಯ ಹೆಚ್ಚು: ಅಧ್ಯಯನ | tomato flu
Big news: ವೈದ್ಯಕೀಯ ತಪಾಸಣೆಗಾಗಿ ತಮ್ಮ ಮಕ್ಕಳೊಂದಿಗೆ ʻಸೋನಿಯಾ ಗಾಂಧಿʼ ವಿದೇಶ ಪ್ರವಾಸ: ಮೂಲಗಳು