ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದಂತ ದೆಹಲಿಯ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರಪರಿ 5ರಂದು ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಮತಏಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂಬುದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಘೋಷಿಸಿದರು.
ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರು ಇವಿಎಂ ಯಂತ್ರವನ್ನು ಹ್ಯಾಕ್ ಮಾಡಲು ಸಾದ್ಯವಿಲ್ಲ. ಯಾವುದೇ ಮಾರ್ವಲ್ ಕೂಡ ಅವುಗಳಲ್ಲಿ ಇನ್ ಸ್ಟಾಲ್ ಮಾಡೋದಕ್ಕೆ ಸಾಧ್ಯವಿಲ್ಲ. ಇದನ್ನೇ ಸುಪ್ರೀಂ ಕೋರ್ಟ್ ಕೂಡ ಈಗಾಗಲೇ ಹಲವು ತೀರ್ಪುಗಳಲ್ಲಿ ಸ್ಪಷ್ಟ ಪಡಿಸಿದೆ ಎಂದರು.
ಪಾರದರ್ಶಕ ಚುನಾವಣೆ ನಡೆಸುವು ನಮ್ಮ ಆದ್ಯತೆಯಾಗಿದೆ. ಚುನಾವಣೆ 7-8 ದಿನಗಳ ಮೊದಲೇ ಇವಿಎಂ ಸಿದ್ಧತೆ ಕೈಗೊಳ್ಳಲಾಗುತ್ತದೆ. 7-8 ದಿನಗಳ ಮೊದಲೇ ಇವಿಎಂಗೆ ಸಿಂಬಲ್ ಅಳವಡಿಸಲಾಗುತ್ತದೆ. ಏಜೆಂಟ್ ಸಮ್ಮುಖದಲ್ಲೇ ಇವಿಎಂಗೆ ಸಿಂಬಲ್ ಗಳನ್ನು ಅಳವಡಿಸಲಾಗುತ್ತದೆ. ಇವಿಎಂ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಪೂರ್ಣ ಪಾರದರ್ಶಕತೆಯಿಂದ ಮತದಾರರ ಪಟ್ಟಿಯನ್ನು ತಯಾಗಿಸಲಾಗುತ್ತದೆ. ಮತದಾನ ಮುಗಿದ ಬಳಿಕ ಇವಿಎಂ ಸೀಲ್ ಮಾಡಲಾಗುತ್ತದೆ ಎಂದರು.
ದೆಹಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 11 ಜಿಲ್ಲೆಗಳಿಂದ 70 ಆಗಿದೆ. ಈ ವಿಧಾನಸಭಾ ಚುನಾವಣಾ ಕ್ಷೇತ್ರಗಳಲ್ಲಿ 58 ಸಾಮಾನ್ಯ ಮೀಸಲು ಕ್ಷೇತ್ರಗಳಾಗಿದ್ದಾವೆ. 12 ಎಸ್ಸಿ ಮೀಸಲು ಕ್ಷೇತ್ರಗಳಾಗಿದ್ದಾವೆ ಎಂಬುದಾಗಿ ತಿಳಿಸಿದರು.
1.55 ಕೋಟಿ ಮತದಾರರು ಇದ್ದಾರೆ. 83.49 ಲಕ್ಷ ಪುರುಷರು, 71.74 ಲಕ್ಷ ಮಹಿಳಾ ಮತದಾರರಿದ್ದಾರೆ. ಯುವ ಮತದಾರರ ಸಂಖ್ಯೆ 25.89 ಲಕ್ಷವಾಗಿದೆ ಎಂದರು.
ಚುನಾವಣಾ ಆಯುಕ್ತ ರಾಜೀವ್ ಕುಮಾರ್, “ಭಾರತೀಯ ಮತದಾರರು ಅತ್ಯಂತ ಜಾಗೃತರಾಗಿದ್ದಾರೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಈಗಲೂ ಕಥೆಗಳು ಹರಿದಾಡುತ್ತಿವೆ. ಸುಮಾರು 70 ಮೆಟ್ಟಿಲುಗಳಿವೆ… ಇದರಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ನಮ್ಮೊಂದಿಗೆ ಇರುತ್ತಾರೆ.. ಬರುವ ಎಲ್ಲಾ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು – ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಫಾರ್ಮ್ 7 ಇಲ್ಲದೆ ಯಾವುದೇ ಅಳಿಸುವಿಕೆ ಮಾಡಲು ಸಾಧ್ಯವಿಲ್ಲ ಎಂದರು.
#WATCH | Delhi | Election Commissioner Rajiv Kumar says, "Indian voters are extremely aware… Stories are going around regarding electoral rolls, even now. Almost 70 steps are there…in which political parties and candidates remain with us… All the claims and objections that… pic.twitter.com/eTiea0tCS3
— ANI (@ANI) January 7, 2025
ಇವಿಎಂನಲ್ಲಿ ಯಾವುದೇ ನ್ಯೂನತೆ ಅಥವಾ ವಿಶ್ವಾಸಾರ್ಹತೆ ಇಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಇವಿಎಂನಲ್ಲಿ ವೈರಸ್ ಅಥವಾ ದೋಷವನ್ನು ಪರಿಚಯಿಸುವ ಪ್ರಶ್ನೆಯೇ ಇಲ್ಲ. ಇವಿಎಂನಲ್ಲಿ ಅಮಾನ್ಯ ಮತಗಳ ಪ್ರಶ್ನೆಯೇ ಇಲ್ಲ. ಯಾವುದೇ ರಿಗ್ಗಿಂಗ್ ಸಾಧ್ಯವಿಲ್ಲ. ಹೈಕೋರ್ಟ್ಗಳು ಮತ್ತು ಸುಪ್ರೀಂ ಕೋರ್ಟ್ ಇದನ್ನು ನಿರಂತರವಾಗಿ ವಿಭಿನ್ನ ತೀರ್ಪುಗಳಲ್ಲಿ ಹೇಳುತ್ತಿವೆ… ಬೇರೆ ಏನು ಹೇಳಲು ಸಾಧ್ಯ? ಇವಿಎಂಗಳು ಎಣಿಕೆಗೆ ದೋಷರಹಿತ ಸಾಧನಗಳಾಗಿವೆ. ಸಂಯಮದ ಆರೋಪಗಳು ಆಧಾರರಹಿತವಾಗಿವೆ. ನಾವು ಈಗ ಮಾತನಾಡುತ್ತಿದ್ದೇವೆ ಏಕೆಂದರೆ ಚುನಾವಣೆಗಳು ನಡೆಯುತ್ತಿರುವಾಗ ನಾವು ಮಾತನಾಡುವುದಿಲ್ಲ” ಎಂದು ಅವರು ಹೇಳಿದರು.
#WATCH | Delhi | Election Commissioner Rajiv Kumar says, "There is no evidence of unreliability or any drawback in the EVM… There is no question of introducing a virus or bug in the EVM. There is no question of invalid votes in the EVM. No rigging is possible. High Courts and… pic.twitter.com/kwUhq7B6mK
— ANI (@ANI) January 7, 2025
ದಿನಾಂಕ 10-01-2025ರಂದು ಚುನಾವಣಾ ಅಧಿಸೂಚನೆ. ದಿನಾಂಕ 17-01-2025ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ದಿನಾಂಕ 18-01-2025ರಂದು ನಾಮಪತ್ರಗಳ ಪರಿಶೀಲನೆ. ದಿನಾಂಕ 05-02-2025ರಂದು ಮತದಾನ ನಡೆಯಲಿದೆ. ದಿನಾಂಕ 08-02-2025ರಂದು ಮತಏಣಿಕೆ ನಡೆದು ಫಲಿತಾಂಶ ಘೋಷಣೆ. ದಿನಾಂಕ 10-02-2025ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ ಎಂದರು.