ನವದೆಹಲಿ: ತಾಯಿಗೆ ಪ್ರತಿನಿತ್ಯ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಬಾಲಕನೊಬ್ಬ ತನ್ನ ತಂದೆಯನ್ನೇ ಲಟ್ಟಣಿಗೆಯಿಂದ ಹೊಡೆದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಕೊಲೆ ಆರೋಪದ ಮೇಲೆ ಇದೀಗ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ರೈಲ್ವೇ ಪ್ರೊಟೆಕ್ಷನ್ ಫೋರ್ಸ್ನಲ್ಲಿ (ಆರ್ಪಿಎಫ್) ಕೆಲಸ ಮಾಡುತ್ತಿದ್ದ ತನ್ನ ತಂದೆ ತನ್ನ ತಾಯಿಯನ್ನು ನಿಂದಿಸುತ್ತಿರುವುದನ್ನು ಕಂಡು ಆರೋಪಿ ಬಾಲಾಪರಾಧಿ ತೀವ್ರ ಕ್ರಮ ಕೈಗೊಂಡಿದ್ದಾನೆ.
ʻತನ್ನ ತಂದೆಯನ್ನು ಕೊಲ್ಲುವ ಉದ್ದೇಶ ನನಗಿರಲಿಲ್ಲ. ಆದರೆ, ಆತನಿಗೆ ತಕ್ಕ ಪಾಠ ಕಲಿಸಲು ಬಯಸಿದ್ದೆʼ ಎಂದು ಬಾಲಾಪರಾಧಿ ಪೊಲೀಸರಿಗೆ ತಿಳಿಸಿದ್ದಾನೆ.
ತಂದೆ ಪ್ರತಿದಿನ ಕುಡಿದು ಮನೆಗೆ ಬಂದು ತಾಯಿಯನ್ನು ನಿಂದಿಸಿ ಹೊಡೆಯುತ್ತಿದ್ದ. ಆಗಸ್ಟ್ 22 ರ ರಾತ್ರಿ ರಾತ್ರಿ 10 ಗಂಟೆಯ ಸುಮಾರಿಗೆ ಮನೆಗೆ ಬಂದ ತಂದೆ ತಾಯಿಗೆ ಕಾಲಿನಿಂದ ಒದ್ದು ಥಳಿಸಿದ್ದ. ಇದರಿಂದ ಕೋಪಗೊಂಡ ಬಾಲಕ ಲಟ್ಟಣಿಗೆಯಿಂದ 20 ಬಾರಿ ಹೊಡೆದು ತಂದೆಯನ್ನು ಕೊಂದಿರುವುದಾಗಿ ಬಾಲಕ ಹೇಳಿದ್ದಾನೆ.
ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹದ ಮೇಲೆ 19 ಗಾಯಗಳಾಗಿವೆ. ತಲೆಗೆ ಬಲವಾದ ಪಟ್ಟು ಬಿದ್ದಿದ್ದು, ಮೆದು:ಇಗೆ ಹಾನಿಯಾಗಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶವಪರೀಕ್ಷೆ ವರದಿಯ ನಂತರ, ಪೊಲೀಸರು ಕೊಲೆ ಎಫ್ಐಆರ್ ದಾಖಲಿಸಿದ್ದು, ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
BREAKING NEWS: ಇಂದು ನಡೆಯಬೇಕಿದ್ದಂತ ರಾಜ್ಯ ಸಚಿವ ಸಂಪುಟ ಸಭೆ ಮುಂದೂಡಿಕೆ
BIGG NEWS: ಬೀದರ್ನಲ್ಲಿ ಸಹೋದರಿಯ ಮೇಲೆ ಅಣ್ಣನಿಂದಲೇ ಅತ್ಯಾಚಾರ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲು