ಬೆಂಗಳೂರು : ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ವಿಳಂಬ ಆಗಿರುವುದಕ್ಕೆ ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಹೈಕೋರ್ಟ್ ತನಿಖೆಯ ವಿಳಂಬಕ್ಕೆ ರಾಜ್ಯ ಸರ್ಕಾರಕ್ಕೆ ಕಾರಣ ಕೇಳಿದ್ದು ಪ್ರತಿಕ್ರಿಯೆ ನೀಡದೆ ಹೋದಲ್ಲಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಹೈಕೋರ್ಟ್ ನಲ್ಲಿ ನಿಕ್ಷೇಪ ಇನ್ ಪ್ರಾಜೆಕ್ಟ್ ಅರ್ಜಿ ವಿಚಾರಣೆ ನಡೆಯಿತು.ನ್ಯಾ.ನಾಗಮೋಹನದಾಸ ಆಯೋಗದಲ್ಲಿ ಈವರೆಗೆ ವಿಚಾರಣಾ ಪ್ರಕ್ರಿಯೆ ನಡೆದಿಲ್ಲ ವಿಚಾರಣೆ ನೆಪವೊಡ್ಡಿ ಸರ್ಕಾರ ಗುತ್ತಿಗೆದಾರರ ಬಿಲ್ ಪಾವತಿಸುತ್ತಿಲ್ಲ ಎಂದು ಹೈಕೋರ್ಟಿಗೆ ಅರ್ಜಿದಾರರ ಪರ ವಕೀಲರಿಂದ ಈ ಕುರಿತಂತೆ ಮಾಹಿತಿ ಒದಗಿಸಲಾಯಿತು. ಈವರೆಗೂ ವಿಚಾರಣೆ ನಡೆಯದಿರುವುದಕ್ಕೆ ಹೈಕೋರ್ಟ್ ಅಸಮಾಧಾನ ಹೊರಹಾಕಿತು.
ಹೈ ಕೋರ್ಟ್ ಆದೇಶವಿದ್ದರೂ ವಿಚಾರಣೆ ವಿಳಂಬಕ್ಕೆ ಕಾರಣವೇನು ಸರ್ಕಾರದ ಪ್ರತಿಕ್ರಿಯೆ ಬಾರದಿದ್ದರೆ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕ ಸದಸ್ಯ ಪೀಠ ಎಚ್ಚರಿಕೆ ನೀಡಿದೆ.
ಕಳೆದ ಬಿಜೆಪಿ ಅಧಿಕಾರ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದರು
ಇದೀಗ ಕಾಂಗ್ರೆಸ್ ಸರ್ಕಾರದಲ್ಲೂ ಕೂಡ ಕೆಂಪಣ್ಣ ಅವರು ಕಮಿಷನ್ ಆರೋಪ ಮಾಡಿದ್ದಾರೆ.