ಬೆಂಗಳೂರು : ಸಂಸದ ಪ್ರತಾಪ್ ಸಿಂಹ ಕುರಿತು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ ಈ ಹಿಂದೆ ಏಕವಚನದಲ್ಲಿ ಪ್ರತಾಪ್ ಸಿಂಹ ಒಬ್ಬ ಮುಠ್ಠಾಳ ಅಯೋಗ್ಯ ಎಂದು ವಾಗ್ದಾಳಿ ನಡೆಸಿದ್ದರು.ಹೀಗಾಗಿ ಪ್ರತಾಪ್ ಸಿಂಹ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ. ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸುವಂತೆ ದೂರು ನೀಡಿದ್ದಾರೆ.
ರಾಜ್ಯಸಭಾ ಚುನಾವಣೆ: ಈವರೆಗೆ 39 ಶಾಸಕರಿಂದ ಮತದಾನ | Rajya Sabha election 2024
ಹೌದು ಕಳೆದ ತಿಂಗಳು ಚಿಕ್ಕಬಳ್ಳಾಪುರದ ಅಲಗುರ್ಕಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ ಶಂಕು ಸ್ಥಾಪನೆಯ ವೇಳೆ, ಪ್ರತಾಪ್ ಸಿಂಹ ಒಬ್ಬ ದೊಡ್ಡ ಅಯೋಗ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಾಯಿ ಮುಚ್ಕಂಡು ಸುಮ್ಮನಿದ್ದರೆ ಸರಿ. ಇಲ್ಲವಾದಲ್ಲಿ ಇಡೀ ಕಾಂಗ್ರೆಸ್ ಪಾಳಯ ಮೈಸೂರಿಗೆ ಇಳಿಯಬೇಕಾಗುತ್ತೆ. ಇದೇ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಇದೀಗ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾನವನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ.
ಇನ್ನೂ ಈ ವಿಷಯದ ಕುರಿತಾಗಿ ಸಂಸದ ಪ್ರತಾಪ್ ಸಿಂಹ ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಮುಠಾಳ, ಅಯೋಗ್ಯ ಎಂಬಿತ್ಯಾದಿ ನಿಂದನತ್ಮಾಕ ಶಬ್ದಗಳಿಂದ ತೇಜೋವಧ ಮಾಡಲು ಪ್ರಯತ್ನಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜನರಿಗೆ ನನ್ನ ಮೇಲೆ ತಪ್ಪು ಅಭಿಪ್ರಾಯ ಮೂಡಲು ದಾರಿಮಾಡಿಕೊಟ್ಟಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಕನಿಷ್ಠ ಸೌಜನ್ಯವನ್ನು ಕೂಡ ತೋರದ ಚಾರಿತ್ರ್ಯ ವಧೆ ಮಾಡುವ ಮಾತುಗಳನ್ನು ಆಡಿದ್ದಾರೆ. ಹಾಗೂ ನನ್ನನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ಖಾಸಗಿ ದೂರು ಸಲ್ಲಿಸಿದ್ದಾರೆ.
Schoking News: ಮಂಡ್ಯದಲ್ಲಿ ‘ಆಸ್ತಿ ವಿಚಾರ’ವಾಗಿ ಮಗನಿಂದಲೇ ‘ತಂದೆ’ಯ ಬರ್ಬರ ಹತ್ಯೆ