ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮೂರು ವರ್ಷದ ಮಗುವೊಂದು ತನ್ನ ತಾಯಿಯ ಬಗ್ಗೆ ಪೊಲೀಸರಿಗೆ ದೂರು ನೀಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು..
‘’ನನ್ನ ತಾಯಿ ನನ್ನ ತಿಂಡಿ ಕದ್ದು, ನನ್ನ ಕೆನ್ನೆಗೆ ಹೊಡಿದಿದ್ದಾಳೆ. . ಪಪ್ಪಾ ನಡಿ ಅಮ್ಮನ ಬಗ್ಗೆ ಪೊಲೀಸರಿಗೆ ಕಂಪ್ಲೆಂಟ್ ಕೊಡೋಣ’ ಎಂದು ಪೊಲೀಸ್ ಠಾಣೆಗೆ 3 ವರ್ಷದ ಮಗು ತನ್ನ ಅಪ್ಪನನ್ನು ಕರೆದೊಯ್ದಿತ್ತು. ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯ ದೆಡ್ತಲೈ ಗ್ರಾಮದಲ್ಲಿ ಈ ಘಟನೆ ವರದಿಯಾಗಿತ್ತು.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಮಗುವಿಗೆ ವಿಡಿಯೋ ಕಾಲ್ ಮಾಡಿ, , ‘ದೀಪಾವಳಿಯಂದು ಮಗುವಿಗೆ ಚಾಕೋಲೇಟ್ ಮತ್ತು ಸೈಕಲ್ ಕಳಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಆ ದೀಪಾವಳಿ ಗಿಫ್ಟ್ ಮಗುವಿನ ಕೈ ಸೇರಿದೆ.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪುಟ್ಟ ಬಾಲಕನಿಗೆ ಸೈಕಲ್ ಅನ್ನು ದೀಪಾವಳಿ ಗಿಫ್ಟ್ ಆಗಿ ನೀಡಿದ್ದಾರೆ. ಸದ್ಯ ಬಾಲಕ ಆಟವಾಡುವ ಸೈಕಲ್ನಲ್ಲಿ ಕುಳಿತುಕೊಂಡು ಅದನ್ನು ಓಡಿಸಲು ಪ್ರಯತ್ನಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಮೂರು ವರ್ಷದ ಈ ಗಂಡುಮಗು ಸದ್ದಾಂನ ಮುಗ್ದ ಮಾತಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಪೊಲೀಸ್ ಠಾಣೆಯಲ್ಲಿ ‘ತನ್ನ ತಾಯಿ ತನ್ನ ಕೆನ್ನೆಗೆ ಹೊಡೆದಳು ಮತ್ತು ಅವನ ಮಿಠಾಯಿಗಳನ್ನು ಕದ್ದಳು ಎಂದು ಮಗು ಹೇಳಿದೆ. ಅವಳನ್ನು ಜೈಲಿಗೆ ಹಾಕಬೇಕೆಂದು ಮಗು ಒತ್ತಾಯಿಸಿದೆ. ಹುಡುಗನ ದೂರನ್ನು ಕೇಳಿದ ನಂತರ ಎಲ್ಲರೂ ನಕ್ಕರು ಎಂದು ಸಬ್ ಇನ್ಸ್ಪೆಕ್ಟರ್ ಪ್ರಿಯಾಂಕಾ ನಾಯಕ್ ಹೇಳಿದ್ದಾರೆ. ನಂತರ ಕೊನೆಯಲ್ಲಿ ಮಗುವಿನಿಂದ ಸಹಿ ಮಾಡಿಸಿಕೊಂಡ ಪೊಲೀಸರು ಜೊತೆಗೆ ಆದಷ್ಟು ಬೇಗ ನಿನ್ನ ಅಮ್ಮನನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿ ಕಳುಹಿಸಿದ್ದರು.
बुरहानपुर: दीपावली से पहले मनी 'हमजा' की दिवाली…
हमजा साइकिल और चॉकलेट पाकर हुआ प्रफुल्लित…
हमजा के माता-पिता ने गृह मंत्री @drnarottammisra की सहृदयता, सहिष्णुता, सद्भावना और मासूम हमजा के प्रति स्नेह का हृदय से आभार व्यक्त किया है…@proburhanpur#JansamparkMP pic.twitter.com/ivJCQiPdtu
— Home Department, MP (@mohdept) October 18, 2022
BREAKING NEWS : ನೇಪಾಳದಲ್ಲಿ ನಡುಗಿದ ಭೂಮಿ ; 5.1 ತೀವ್ರತೆಯ ಭೂಕಂಪ, ಜನರಲ್ಲಿ ಆತಂಕ |Nepal Earthquake
‘ಭೂತಾರಾಧನೆ’ ಹಿಂದೂ ಸಂಸ್ಕೃತಿಯ ಒಂದು ಭಾಗ : ನಟ ಚೇತನ್ ಹೇಳಿಕೆಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಟಾಂಗ್