ಬೆಂಗಳೂರು : ಬೆಂಗಳೂರು ನಗರದಲ್ಲಿ ಪಟಾಕಿ ಅವಘಡ ಹೆಚ್ಚುತ್ತಿದ್ದು, ಇದುವರೆಗೆ 24 ಮಂದಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಸೋಮವಾರ ರಾತ್ರಿ 24 ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿದೆ. ಇನ್ನೊಂದೆಡೆ ರಸ್ತೆಯಲ್ಲಿ ಹೋಗುತ್ತಿರುವವರು ಹಾಗೂ ವಾಹನಗಳಲ್ಲಿ ಸಂಚಾರ ಮಾಡುತ್ತಿರುವವರಿಗೂ ಕೂಡ ಗಾಯಗಳಾದ ಘಟನೆ ಸಂಭವಿಸಿದೆ.
ಮಂಗಳವಾರ ನಿನ್ನೆ ಮಿಂಟೋ ಕಣ್ಣಿನ ಆಸ್ಪತ್ರೆಗೆ 10 ಮಂದಿ ಹಾಗೂ ನಾರಾಯಣ ನೇತ್ರಾಲಯಕ್ಕೆ 14 ಮಂದಿ ಗಾಯಾಳುಗಳು ದಾಖಲಾಗಿದ್ದಾರೆ. ಅಗರ್ವಾಲ್ ಮತ್ತು ಜಯನಗರದ ಕಣ್ಣಿನ ಆಸ್ಪತ್ರೆಗಳಿಗೂ ಹಲವು ಜನರು ದಾಖಲಾಗಿದ್ದಾರೆ.
ಚಾಮರಾಜಪೇಟೆ ಬಳಿಯ ಅಜಾದ್ ನಗರದಲ್ಲಿ ಭುವನ್, ಎನ್ ಜಿ ಎಫ್ ಲೇಔಟ್ ನಲ್ಲಿ ಸುರಭಿ, ಜೆಜೆ ಆರ್ ನಗರದಲ್ಲಿ ಕಾರ್ತಿಕ್, ಸರ್ಜಾಪುರ ರಸ್ತೆಯಲ್ಲಿ ಸಂಗೀತಾ ವರ್ಮ, ಮೈಸೂರು ರಸ್ತೆಯಲ್ಲಿ ಜಯಸೂರ್ಯ ಎಂಬ ಯುವಕ,ಅನ್ನಪೂರ್ಣೇಶ್ವರಿ ನಗರದಲ್ಲಿ ಮಮತಾ ಎಂಬ ಮಹಿಳೆಗೆ ಗಾಯಗಳಾಗಿದೆ. ಈ ಪೈಕಿ ಬಹುತೇಕರ ಕಣ್ಣಿಗೆ ಗಾಯಗಳಾಗಿದ್ದು, ಹಲವರ ಮುಖಕ್ಕೆ ಸುಟ್ಟ ಗಾಯಗಳಾಗಿದೆ. ಹಲವರು ಚಿಕಿತ್ಸೆ ಪಡೆದು ಮನೆಗೆ ತೆರಳುತ್ತಿದ್ದಾರೆ. ಒಟ್ಟಿನಲ್ಲಿ ಪಟಾಕಿ ಸಿಡಿಸಲು ಹೋಗುವ ಯುವಕರು, ಮಕ್ಕಳು ಎಚ್ಚರಿಕೆಯಿಂದಿರುವುದು ಒಳಿತು.
ಸಾಂದರ್ಭಿಕ ಚಿತ್ರ
BIGG NEWS : ರಾಜ್ಯದಲ್ಲಿ ತಾಪಮಾನ ಭಾರಿ ಕುಸಿತ : ಮೈನಡುಗುವ ಚಳಿಗೆ ಹೊರಬಾರದ ಜನ!
ದೀಪಾವಳಿ ಹಬ್ಬದ ದಿನ ‘ಅಗ್ನಿ ದುರಂತ’ ತಪ್ಪಿಸಲು ಈ ನಿಯಮಗಳ ಪಾಲನೆ ಕಡ್ಡಾಯ |Diwali 2022