ಜಕಾರ್ತಾ(ಇಂಡೋನೇಷ್ಯಾ) : ಇಂಡೋನೇಷ್ಯಾದ ರಾಜಧಾನಿ ಮತ್ತು ಮುಖ್ಯ ದ್ವೀಪ ಜಾವಾದ ಇತರ ಭಾಗಗಳಲ್ಲಿ ಗುರುವಾರ 5.8 ತೀವ್ರತೆಯಪ್ರಬಲ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಭೂ ಕಂಪನದಿಂದಾಗಿ ಜಕಾರ್ತದಲ್ಲಿ ಎತ್ತರದ ಕಟ್ಟಡಗಳು ಹಲವಾರು ಸೆಕೆಂಡುಗಳ ಕಾಲ ತೂಗಾಡಿವೆ. ಇದರಿಂದ ಅಲ್ಲದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದ್ರೆ, ತಕ್ಷಣಕ್ಕೆ ಯಾವುದೇ ಗಂಭೀರ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.
ಪಶ್ಚಿಮ ಜಾವಾ ಪ್ರಾಂತ್ಯದ ಸಿರಂಜಾಂಗ್-ಹಿಲಿರ್ನ ವಾಯುವ್ಯಕ್ಕೆ 14 ಕಿಮೀ ದೂರದಲ್ಲಿ 123.7 ಕಿಲೋಮೀಟರ್ ಆಳದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.
ನ. 1ರಂದು ಸಿಯಾಂಜೂರ್ ನಗರದಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಸುಮಾರು 334 ಜನರು ಸಾವನ್ನಪ್ಪಿದರು ಮತ್ತು ಸುಮಾರು 600 ಜನರು ಗಾಯಗೊಂಡಿದ್ದರು.
BIGG NEWS : ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ : ಆಸ್ತಿ ವಿವರ ಸಲ್ಲಿಕೆಗೆ ಮಾರ್ಚ್ 31ರವರೆಗೆ ಗಡುವು