ಬೆಂಗಳೂರು : ಇನ್ನೂ ಮುಂದೆ ರಾಜ್ಯ ಸರ್ಕಾರದ ಎಲ್ಲಾ ನೌಕರರು ತಮ್ಮ ಆಸ್ತಿ- ಹೊಣೆಗಾರಿಕೆ ವಿವರವನ್ನು ವೆಬ್ ಸೈಟ್ ಗಳಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಆಡಳಿತ ಸುಧಾರಣ ಆಯೋಗ 7ನೆ ವರದಿಯನ್ನು ಶಿಫಾರಸ್ಸು ಮಾಡಿದೆ .
ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ನಾಳೆಯಿಂದ 1,000 ʻಗ್ರಾಮ ಆಡಳಿತ ಅಧಿಕಾರಿ’ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ!
ರಾಜ್ಯ ಸರಕಾರದ ಗ್ರೂಪ್ – ಎ. ಬಿ ಹಾಗೂ ಸಿ ನೌಕರರು ಹಾಗೂ ಸಾರ್ವಜನಿಕ ವಲಯದ ಮಂಡಳಿಗಳು, ನಿಗಮಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರ ಆಸ್ತಿ- ಹೊಣೆಗಾರಿಕೆ ವಿವರವನ್ನು ವೆಬ್ ಸೈಟ್ ಗಳಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಆಡಳಿತ ಸುಧಾರಣ ಆಯೋಗ 7ನೆ ವರದಿಯನ್ನು ಶಿಫಾರಸ್ಸು ಮಾಡಿದೆ .
ಲೋಕಸಭಾ ಚುನಾವಣೆಗೆ ‘ಬಿಜೆಪಿ’ ಮೊದಲ ಪಟ್ಟಿ ಪ್ರಕಟ: ಪ್ರಧಾನಿ ಮೋದಿ ಶುಭಹಾರೈಕೆ
ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಆಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಳನೇ ವರದಿ ಸಲ್ಲಿಸಿತು. 9 ಇಲಾಖೆಗಳಲ್ಲಿ ಆಡಳಿತ ಸುಧಾರಣೆ ಸಂಬಂಧ 527 ಶಿಫಾರಸು ಸಲ್ಲಿಸಿದೆ. ಆ ಮೂಲಕ ಒಟ್ಟು ಏಳು ವರದಿಗಳಡಿ 39 ಇಲಾಖೆಗಳ ಸಂಬಂಧ 5039 ಶಿಫಾರಸುಗಳನ್ನು ಸಲ್ಲಿಸಿದಂತಾಗಿದೆ.
ಪಾಳು ಬಿದ್ದ ಭೂಮಿ ಸದ್ಬಳಕೆ
ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ ಭೂಮಿ ಪಾಳು ಬಿದ್ದಿದ್ದು, ಅದನ್ನು ಕೃಷಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಭೂ ಗುತ್ತಿಗೆ ಕಾನೂನು ಜಾರಿಗೊಳಿಸುವುದು. ಸದ್ಯ ಜಾರಿಯಲ್ಲಿರುವ ಕರ್ನಾಟಕ ಭೂ ಸುಧಾರಣಾ ಕಾಯಿದೆ 1961ರ ಪ್ರಕಾರ ಕೃಷಿ ಭೂಮಿಯನ್ನು ಕೃಷಿ ಉದ್ದೇಶಕ್ಕೆ ಗುತ್ತಿಗೆ ನೀಡಲು ಅವಕಾಶ ಇಲ್ಲ. ಇದರಿಂದಾಗಿ ಪಾಳು ಭೂಮಿಯಿಂದ ವಾರ್ಷಿಕ 800 ಕೋಟಿ ರೂ.ನಷ್ಟು ಬೆಳೆ ನಷ್ಟವಾಗುತ್ತಿದೆ.ಆ ಹಿನ್ನೆಲೆಯಲ್ಲಿ ಪಾಳುಬಿದ್ದ ಭೂಮಿಗಳ ಸದ್ಬಳಕೆಗಾಗಿ ಭೂಗುತ್ತಿಗೆ ಕಾನೂನುಗಳನ್ನು ಜಾರಿಗೊಗೊಳಿಸಬಹುದು.
ರಾಜ್ಯದಲ್ಲಿ ‘ಗ್ರಾಮ ಪಂಚಾಯ್ತಿ ಸೇವೆ’ಗಳಿಗೆ ಅರ್ಜಿ ಸಲ್ಲಿಕೆ ಮತ್ತಷ್ಟು ಸರಳ: ಜಸ್ಟ್ ‘ವಾಟ್ಸಾಪ್’ ಮಾಡಿ ಸಾಕು
ನಾನಾ ರಾಜ್ಯಗಳ ಕಾನೂನುಗಳನ್ನು ಅಧ್ಯಯನ ಮಾಡಿ ‘ಕರ್ನಾಟಕ ಬೆಳೆ ಉತ್ಪಾದನೆ ಮತ್ತು ಭೂ ಪುನಶ್ವೇತನ ವಿಧೇಯಕ ಕರಡನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ನೂತನ ಭೂ ಗುತ್ತಿಗೆ ಕಾನೂನು ಜಾರಿಯಾದರೆ ಭೂ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸಲು ಅವಕಾಶ ದೊರೆಯಲಿದೆ.
ಕೃಷಿ ಬೆಳೆ ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸಲು ವರದಿಯಲ್ಲಿರುವ ಕರಡು ವಿಧೇಯಕವನ್ನು ಕಂದಾಯ ಇಲಾಖೆ ಪರಿಶೀಲಿಸಬಹುದು.