ಬೆಂಗಳೂರು : ರಾಜ್ಯದಲ್ಲಿ ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ಭೀಕರ ಬರಗಾಲ ಎದುರಾಗಿದ್ದು ರೈತರು ತೀವ್ರವಾದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾದಗಿರಿಯ ಕೃಷ್ಣ ಮೇಲ್ದಂಡೆ ಅಚ್ಚುಕಟ್ಟು ಪ್ರದೇಶಗಳಿಗೆ 2.77 ಟಿಎಂಸಿ ನೀರು ಬಿಡುವಂತೆ ನಿರ್ಧರಿಸಲಾಗಿದೆ ಎಂದು ಡಿಸೆಂಬ ಡಿಕೆ ಶಿವಕುಮಾರ್ ತಿಳಿಸಿದರು.
ಕೃಷ್ಣ ಮೇಲ್ದಂಡೆ ಅಚ್ಚುಕಟ್ಟು ಜನಪ್ರತಿನಿಧಿಗಳ ಜೊತೆಗೆ ಚರ್ಚಿಸಿದ್ದೇನೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.ತಡರಾತ್ರಿ ಜನಪ್ರತಿನಿಧಿಗಳು ಜಿಲ್ಲಾಡಳಿತದ ಜೊತೆ ಸಭೆ ನಡೆಸಿದ್ದೇನೆ. ವೀಡಿಯೋಕಾನ್ಸ್ ಮೂಲಕ ಸಭೆ ನಡೆಸಿ ಮಾಹಿತಿಯನ್ನು ಪಡೆದಿದ್ದೇನೆ. ಯಾದಗಿರಿ ಸೇರಿ ಹಲವು ಜಿಲ್ಲೆಯ ಶಾಸಕರು ಭೇಟಿ ಮಾಡಿದ್ದರು ಕುಡಿಯುವ ನೀರಿಗೆ ಬಹಳ ದೊಡ್ಡ ತೊಂದರೆ ಆಗುವ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ರೈತರು ಕಚೇರಿ ಮುಂದೆ ಗುಂಡಿ ತೋಡಿಕೊಂಡು ಅದರಲ್ಲಿ ಕೂತಿದ್ದಾರೆ.ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಲು ಹೋಗಬಾರದು ಅಂತ ಹೇಳಿದ್ದೇನೆ. ರೈತರಿಂದಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ 2.75 ಟಿಎಂಸಿ ನೀರು ಬಿಡಬೇಕೆಂದು ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಮೆಣಸು ಬೆಳೆಗಾರರಿಗೆ ತೊಂದರೆ ಆಗಿದೆ ಅವರಿಗೆ ನೀರು ತಲುಪಬೇಕು ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.