ಕಾಸರಗೋಡು(ಕೇರಳ): ಸಾಲದ ಸುಳಿಯಲ್ಲಿ ಸಿಲುಕಿ, ಹೊಸದಾಗಿ ನಿರ್ಮಿಸಿದ ಮನೆಯನ್ನೇ ಮಾರಲು ಹೊರಟ ಪೇಂಟರ್ಗೆ 1 ಕೋಟಿ ರೂಪಾಯಿ ಲಾಟರಿ ಬಹುಮಾನ ಸಿಕ್ಕಿದೆ.
ಮಂಜೇಶ್ವರದ ಪಾವೂರು ನಿವಾಸಿ ಮೊಹಮ್ಮದ್ ಬಾವ (50) ಹಾಗೂ ಆತನ ಪತ್ನಿ ಅಮೀನಾ (45) ಎಂಟು ತಿಂಗಳ ಹಿಂದೆ 2,000 ಚದರ ಅಡಿ ವಿಸ್ತೀರ್ಣದ ಮನೆಯನ್ನು ನಿರ್ಮಿಸಿದ್ದರು. ಇದನ್ನು ನಿರ್ಮಿಸಲು ಮಾಡಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದೇ, ಮನೆಯನ್ನೇ ಮಾರಾಟಕ್ಕಿಟ್ಟರು. ಅದೃಷ್ಟವೆಂಬಂತೆ, ಮನೆಯ ಟೋಕನ್ ಹಣ ಸ್ವೀಕರಿಸುವ ಎರಡು ಗಂಟೆಗಳ ಮೊದಲು ಅವರಿಗೆ 1 ಕೋಟಿ ರೂಪಾಯಿಯ ಲಾಟರಿ ಬಹುಮಾನ ಬಂದಿದೆ.
ಈ ಬಗ್ಗೆ ಮಾತನಾಡಿರುವ ಬಾವ, ʻನಾನು ನಮ್ಮ ಮನೆಯನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇನೆ. ಈಗಲೂ ನನಗೆ ಲಾಟರಿ ಹೊಡೆದಿದೆ ಎಂದು ನಂಬಲಾಗುತ್ತಿಲ್ಲʼ ಎಂದಿದ್ದಾರೆ.
ಭಾನುವಾರ ಸಂಜೆ 5 ಗಂಟೆಗೆ ನಮ್ಮ ಮನೆ ಖರೀದಿಸಲು ಟೋಕನ್ ಹಣ ನೀಡಲು ಬರುವುದಾಗಿ ವ್ಯಕ್ತಿಯೊಬ್ಬರು ಹೇಳಿದ್ದರು. ನಮಗೆ 45 ಲಕ್ಷ ರೂಪಾಯಿ ಸಾಲ ಇರುವುದರಿಂದ ಮನೆಗೆ 45 ಲಕ್ಷ ರೂಪಾಯಿ ಬೇಕಿತ್ತು. ಆದರೆ ದಲ್ಲಾಳಿ ಮೂಲಕ ಅಂತಿಮವಾಗಿ 40 ಲಕ್ಷ ರೂ. ಗೆ ಮನೆ ಮಾರಲು ನಾವು ಒಪ್ಪಿಕೊಂಡೆವು. ಹೀಗಾಗಿ, ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಗೆ ತೆರಳಿದೆವು.
ನಾವು ಮನೆ ಕಟ್ಟಲು ಬ್ಯಾಂಕ್ನಿಂದ 10 ಲಕ್ಷ ರೂ ಹಾಗೂ ಸಂಬಂಧಿಕರಿಂದ 20 ಲಕ್ಷ ರೂ. ಸಾಲ ಪಡೆದಿದ್ದೇವೆ. ಇದಾದ ಕೆಲವೇ ದಿನಗಳಲ್ಲಿ, ನಾವು ನಮ್ಮ ಎರಡನೇ ಮಗಳ ಮದುವೆಯನ್ನು ಮಾಡಿದ್ದೇವೆ. ಇದರಿಂದ ನಮಗೆ ವಿಪರೀತ ಸಾಲವಾಯಿತು. ನಮಗೆ ನಾಲ್ವರು ಪುತ್ರಿಯರು, ಒಬ್ಬ ಪುತ್ರ ಇದ್ದಾನೆ. ಇಬ್ಬರು ಹಿರಿಯ ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಅವರ 22 ವರ್ಷದ ಮಗ ನಿಜಾಮುದ್ದೀನ್ ಮೂರು ವಾರಗಳ ಹಿಂದೆ ಕತಾರ್ನ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಕಂಡುಕೊಂಡನು. ಇಬ್ಬರು ಕಿರಿಯ ಹೆಣ್ಣು ಮಕ್ಕಳು 12 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ನಾವೆಲ್ಲರೂ ತುಂಬಾ ಒತ್ತಡದಲ್ಲಿದ್ದೆವು. ಕಡಿಮೆ ಆದಾಯ ಬಂದಿದ್ದರಿಂದ ಸಾಲ ತೀರಿಸಲು ಸಾಧ್ಯವಾಗಲಿಲ್ಲ ಎಂದು ಬಾವ ಹೇಳಿದರು.
ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯವರು ಮನೆ ಖರೀದಿದಾರರಿಗಾಗಿ ನಾನು ಊರಿಗೆ ತೆರಳಿದ್ದೆ. ಈ ವೇಳೆ ಕೇರಳ ಸರ್ಕಾರ ನಡೆಸುವ ಫಿಫ್ಟಿ-ಫಿಫ್ಟಿ ಲಾಟರಿಯ ನಾಲ್ಕು ಟಿಕೆಟ್ಗಳನ್ನು ಖರೀದಿಸಿದೆ. ಅದೃಷ್ಟವು ನನ್ನ ದುಃಖವನ್ನು ಕೊನೆಗೊಳಿಸುತ್ತದೆ ಎಂದು ನಾನು ಕಳೆದ ನಾಲ್ಕು ತಿಂಗಳಿಂದ ಲಾಟರಿಗಳನ್ನು ಖರೀದಿಸುತ್ತಿದ್ದೇನೆ. ಮಧ್ಯಾಹ್ನ 3 ಗಂಟೆಗೆ ಲಾಟ್ ಡ್ರಾ ಆಗಿದ್ದು, ಜಾಕ್ ಪಾಟ್ ಹೊಡೆದಿರುವುದು ನನಗೆ ತಿಳಿಯಿತು ಎಂದರು ಬಾವ. ಇದೀಗ ಆದಾಯ ತೆರಿಗೆ ಕಡಿತವಾಗಿ ಸುಮಾರು 63 ಲಕ್ಷ ರೂ. ಬಾವ ಕೈಸೇರಲಿದೆ. ಆದ್ರೆ,ಇದೀಗ ಹೊಸ ಮನೆ ಮಾರಾಟವಾಗಿಲ್ಲ.
BIGG NEWS : ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ಮತಾಂಧ ಶಕ್ತಿಗಳ ಕೈವಾಡ ಇದೆ : ಗೃಹ ಸಚಿವ ಅರಗಜ್ಞಾನೇಂದ್ರ