ದಾವಣಗೆರೆ: ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ನಂತ್ರ ಭೀಕರ ಬರಗಾಲ ಆವರಿಸಿದೆ. ಬರಗಾಲದಿಂದಾಗಿ ಬೆಳೆ ನಾಶಗೊಂಡ ಪರಿಣಾಮ ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ತಾಲೂಕಿನ ಶಿವಪುರ ಗ್ರಾಮದಲ್ಲಿ ರೈತ ಭೀಮಾನಾಯ್ಕ್ (38) ಎಂಬುವರೇ ಆತ್ಮಹತ್ಯೆಗೆ ಶರಣಾದಂತ ರೈತರಾಗಿದ್ದಾರೆ. ಮೆಕ್ಕೆಜೋಳದ ಬೆಳೆ ಕೈಕೊಟ್ಟಿದ್ದರಿಂದ ಮನನೊಂದು ನೇಣಮುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬ್ಯಾಂಕ್ ಸೇರಿದಂತೆ ವಿವಿಧ ಕಡೆಯಿಂದ ರೈತ ಭೀಮಾ ನಾಯ್ಕ್ 12 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸೋದಕ್ಕೆ ಇದ್ದಂತ ಮಾರ್ಗ ಮೆಕ್ಕೆಜೋಳದ ಬೆಳೆಯೇ ಕೈಕೊಟ್ಟ ಕಾರಣ, ಇಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಬೆಂಗಳೂರು : ಖಾಸಗಿ ರೆಸಾರ್ಟ್ ನಲ್ಲಿ ‘ರೈನ್ ಡಾನ್ಸ್’ ಆಯೋಜನೆ : ಜಲಮಂಡಳಿ ಆದೇಶಕ್ಕೆ ಡೋಂಟ್ ಕೇರ್ ಎಂದ ಜನ
BREAKING : ಮಂಡ್ಯದಲ್ಲಿ ‘ಪಟಾಕಿ’ ತುಂಬುವ ವೇಳೆ ಭೀಕರ ಸ್ಪೋಟ : ಓರ್ವ ಕಾರ್ಮಿಕ ದುರ್ಮರಣ