ಮಂಗಳೂರು : ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ಅವ್ಯವಸ್ಥೆ ಕಂಡು ಬಂದಿದೆ. ಪ್ರಾಣಿಗಳ ಸಾವಿಗೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಇದೀಗ ಹೊಣೆಯಾಗಿದೆ. ಪಿಲಿಕುಳದಲ್ಲಿ ಪ್ರಾಣಿಗಳ ಸಾವಿನ ರಹಸ್ಯ ಇದೀಗ ಬಯಲಾಗಿದೆ. ವಿಷಾಹಾರ ಸೇವನೆಯೇ ಪ್ರಾಣಿಗಳ ಸಾವಿಗೆ ಕಾರಣವಾಗಿದೆ. ಮೃತ ಜಿಂಕೆಯೊಂದರ ಮರಣೋತ್ತರ ವರದಿಯಲ್ಲಿ ವಿಷಾಹಾರ ಸೇವನೆ ಮಾಡಿರುವುದು ಬಹಿರಂಗವಾಗಿದೆ.
ಪ್ರಾಣಿಯ ದೇಹದಲ್ಲಿ ಹೈಡ್ರೋಸೈನೆಡ್ ಮತ್ತು ನೈಟ್ರೇಟ್ ಅಂಶಗಳು ಪತ್ತೆಯಾಗಿವೆ. ಸುಮಾರು ನಾಲ್ಕರಿಂದ 150ಕ್ಕೂ ಅಧಿಕ ಪ್ರಾಣಿಗಳ ಆ ಸ್ವಾಭಾವಿಕ ಸಾವಾಗಿದ್ದು, ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಪ್ರಯೋಗಾಲಯದಿಂದ ವರದಿ ಬಹಿರಂಗವಾಗಿದೆ. ಪ್ರಾಣಿಗಳಿಗೆ ನೀಡಲಾಗಿದೆ ತರಕಾರಿ ಎಲೆಗಳಿಂದಲೇ ಪ್ರಾಣಕ್ಕೆ ಕುತ್ತು ತಂದಿದೆ. ಎಲೆಕೋಸು ಮತ್ತು ಹೂಕೋಸು ಬೆಳಗ್ಗೆ ಅತಿಯಾದ ಕೀಟನಾಶಕ ಬಳಕೆ ಮಾಡಿರುವುದು ಬೆಳಗೆಗೆ ಬಂದಿದೆ.
ಇದನ್ನು ಶುಚಿಗೊಳಿಸದೆ ನೇರವಾಗಿ ಪ್ರಾಣಿಗಳಿಗೆ ನೀಡಲಾಗುತ್ತಿತ್ತು. ಈ ವಿಷಪೂರಿತ ಅಂಶಗಳು ಮೃಗಾಲಯದ ಪ್ರಾಣಿಗಳ ಸಾವಿಗೆ ಕಾರಣವಾಗಿದೆ. ಇಲ್ಲಿವರೆಗೂ ಕಡ ಮೃಗಾಲಯದಲ್ಲಿ ಕಳೆದ ನಾಲ್ಕು ವರ್ಷದಲ್ಲಿ 150 ಮೂಕ ಪ್ರಾಣಿಗಳ ಮಾರಣಹೋಮ ಹಾಗಿದೆ. ಹುಲಿ, ಜಿಂಕೆ, ಸಾಂಬಾರ್ ಕಾಗೆ, ಕಾಡು ಹಂದಿಗಳು ಸೇರಿದಂತೆ ಸುಮಾರು 150ಕ್ಕೂ ಅಧಿಕ ವನ್ಯಜೀವಿಗಳು ಸಾವನ್ನಪ್ಪಿರುವ ಮಾಹಿತಿ ತಿಳಿದು ಬಂದಿದೆ.








