ಬೆಂಗಳೂರು: ಅಕ್ಟೋಬರ್ 31ರಂದು ನಾಪತ್ತೆಯಾಗಿದ್ದಂತ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಇಂದು ತುಂಗಾ ನದಿಯ ಕಾಲುವೆಯಲ್ಲಿ ಶವವಾಗಿ ಕಾರಿನ ಸಹಿತ ಪತ್ತೆಯಾಗಿದ್ದರು. ಅವರ ಸಾವಿನ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೀಗಾಗಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರನ ಸಾವಿನ ಬಗ್ಗೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತದೆ ಎಂಬುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಗಂತ ಅವರು, ಅಕ್ಟೋಬರ್ 31 ರಂದು ಮಿಸ್ಸಿಂಗ್ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಕಾಣೆಯಾಗಿದ್ದರು. ಈ ಬಗ್ಗೆ ಸಿಸಿ ಟಿವಿ ಎಲ್ಲವನ್ನೂ ಚೆಕ್ ಮಾಡಲಾಗಿದೆ. ಇವತ್ತು ಚಾನಲ್ ನಲ್ಲಿ ಅವರ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ಈ ಕುರಿತಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯಲಿದೆ ಎಂದರು.
ಶಾಸಕರ ಸಹೋದರನ ಪುತ್ರ ಸಾವಿನ ಬಗ್ಗೆ ಕೆಲವು ಅನುಮಾನಗಳು ಕೇಳಿ ಬರ್ತಿವೆ ಎನ್ನುವ ಬಗ್ಗೆ ಮಾತನಾಡಿದ ಅವರು, ಎಲ್ಲಾ ಆಯಾಮಗಳಿಂದ ತನಿಖೆ ನಡೆಯಲಿದೆ. ತನಿಖೆ ನಡೆಯದೆ ಏನೂ ಹೇಳೋಕೆ ಸಾಧ್ಯವಿಲ್ಲ. ರೇಣುಕಾಚಾರ್ಯ ನನ್ನಜೊತೆ ಸಂಪರ್ಕದಲ್ಲಿದ್ರು. ಅವರ ಜೊತೆ ನಾನು ಮಾತನಾಡ್ತಿದ್ದೆ ಎಂದರು.
ಶಾಸಕ ರೇಣುಕಾಚಾರ್ಯ ಚಂದ್ರಶೇಖರ್ ಕಿಡ್ನ್ಯಾಪ್ ಶಂಕೆಯನ್ನು ವ್ಯಕ್ತ ಪಡಿಸಿದ್ದರು. ಅದು ಖಚಿತ ಆಗಿಲ್ಲ, ತನಿಖೆಯಿಂದ ಗೊತ್ತಾಗಬೇಕು. ದಿನಕ್ಕೆ ಎರಡು ಮೂರು ಬಾರಿ ಫೋನ್ ಮಾಡ್ತಾ ಇದ್ರು. ಅಧಿಕಾರಿಗಳಿಗೆ ನಾನು ಸೂಚನೆ ಕೊಟ್ಟಿದ್ದೆ ಎಂದು ಹೇಳಿದರು.
ಐದು ಸಾವಿರ ಪೊಲೀಸ್ ಪೇದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ವಯೋಮಿತಿ ಸಡಿಲಕ್ಕೆ ಒತ್ತಾಯ ಇತ್ತು. ಇದಕ್ಕೆ ಆದೇಶ ಆಗಿದೆ, ಎರಡು ವರ್ಷ ರಿಲ್ಯಾಕ್ಸೇಶನ್ ನೀಡಲಾಗಿದೆ. ಅರ್ಜಿ ಸಲ್ಲಿಸಲು ಈ ತಿಂಗಳು ಅವಕಾಶವಿದೆ. ಈ ಅವಕಾಶವನ್ನ ಎಲ್ಲರು ಬಳಸಿಕೊಳ್ಳಬೇಕು ಎಂದರು.