ಮಂಡ್ಯ : ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಇದು ಜಡತ್ವದಿಂದ ಕೂಡಿದೆ ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಸಬೇಕು ಆಗ ಮಾತ್ರ ಜಾಸ್ತಿ ವ್ಯವಸ್ಥೆಗೆ ಚಲನೆ ಸಿಗುತ್ತದೆ. ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮ ಕರ್ತವ್ಯ ಆಗಿದೆ. ಜಾತಿ ಹೋಗಬೇಕಾದರೆ ಸಮಾನತೆ ಬರಬೇಕು ಎಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಶಿವರಾತ್ರಿ ಶಿವಯೋಗಿಗಳ ಜಯಂತೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮೌಢ್ಯ ಆಚರಿಸುವ ನಾವುಗಳು ವಚನಗಳನ್ನು ಪಾಲನೆ ಮಾಡುತ್ತಿಲ್ಲ. ವಿದ್ಯಾವಂತರು ಕೂಡ ಮೌರ್ಯ ನಂಬುತ್ತಿದ್ದಾರೆ ಹಿಂದಿನ ಜನ್ಮ ಹಾಗೂ ಮುಂದಿನ ಜನ್ಮ ಎಂಬುವುದು ಗೊತ್ತಿಲ್ಲ ಎಲ್ಲರೂ ಹುಟ್ಟಿದ ಮೇಲೆ ಸಾಯಲೇಬೇಕು ಸಾವು ಗ್ಯಾರಂಟಿ, ಹುಟ್ಟು ಆಕಸ್ಮಿಕ ಈ ನಡುವೆ ಸಾರ್ಥಕ ಜೀವನ ನಮ್ಮದಾಗಬೇಕು ವೈಚಾರಿಕತೆಯಿಂದ ಕೂಡಿದ ವಿದ್ಯೆ ಸಿಗದಿದ್ದರೆ ಪ್ರಯೋಜನವಿಲ್ಲ ವಿದ್ಯಾವಂತರಾದವರು ಕೂಡ ಯಾವುದೇ ಪ್ರಯೋಜನವಿಲ್ಲ.
ಸುತ್ತೂರು ಮಠ ಗ್ರಾಮೀಣ ಜನರಿಗೆ ಶಿಕ್ಷಣ ಮತ್ತು ಆರೋಗ್ಯ ನೀಡುತ್ತಿದೆ ದಾಸೋಹ ಕಾಯಕ ಎಂದರೆ ಪ್ರೊಡಕ್ಷನ್ ದಾಸೋಹ ಎಂದರೆ ಡಿಸ್ಟ್ರಿಬ್ಯೂಷನ್ ಎಂದು ಸಿದ್ದರಾಮಯ್ಯ ತಿಳಿಸಿದರು. ಬದಲಾವಣೆಗೆ ಪ್ರಯತ್ನಿಸಿದ ಪ್ರಮುಖರಲ್ಲಿ ಶಿವಯೋಗಿಗಳು ಕೂಡ ಒಬ್ಬರು. ಸಮಾಜದ ಬದಲಾವಣೆಗೆ ಪ್ರಯತ್ನಿಸಿದವರಲ್ಲಿ ಶ್ರೀಗಳು ಕೂಡ ಒಬ್ಬರು. ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದ ಅಸಮಾನತೆ ನಿರ್ಮಾಣವಾಗಿದೆ. ಅಸಮಾನತೆ ತೊಲಗದೆ ಈ ಸಮಾಜದಲ್ಲಿ ಶಾಂತಿ ನೆಲೆಸುವುದಿಲ್ಲ.
ಎರಡುವರೆ ಸಾವಿರ ವರ್ಷಗಳ ಹಿಂದೆ ಬಸವಣ್ಣ ಪ್ರಯತ್ನಿಸಿದ್ರು ಸಮಾನತೆಗಾಗಿ ಬಸವಣ್ಣನವರು ಪ್ರಯತ್ನಿಸಿದ್ದರು. ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಧರ್ಮಗಳು ಪ್ರೀತಿ ಹಾಗೂ ಕರುಣೆ ಬೋಧಿಸುತ್ತವೆ. ಹೊರತು ದ್ವೇಷವನ್ನಲ್ಲ. ಮನುಷ್ಯ ಪ್ರಾಣಿಗಳನ್ನು ಪ್ರೀತಿಸಿ ಮನುಷ್ಯನನ್ನೇ ದ್ವೇಷಿಸುತ್ತಾನೆ. ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮ ಕರ್ತವ್ಯ ಆಗಿದೆ. ಜಾತಿ ಹೋಗಬೇಕಾದರೆ ಸಮಾನತೆ ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.








