ರಾಯಚೂರು : ಹೊಸ ವರ್ಷದ ಹಿನ್ನೆಲೆ ಕುಡಿದ ಮತ್ತಿನಲ್ಲಿದ್ದ ಕಿಡಿಗೇಡಿಗಳ ಗುಂಪೊಂದು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇಲ್ಲಿನ ಲಿಂಗಸನಗೂರು ಹೊರ ವಲಯದ ಕರಡಕಲ್ ಬಳಿ ನಡೆದಿದೆ.
ಹೊಸ ವರ್ಷಕ್ಕೆ ಪಾರ್ಟಿ ಮಾಡಿ ಕುಡಿತದ ಅಮಲಿನಲ್ಲಿದ್ದ 10 ಮಂದಿ 2 ಹಾಸ್ಟೆಲ್ ಗೆ ಏಕಾಏಕಿ ನುಗ್ಗಿದೆ. ಸಿಕ್ಕ ಸಿಕ್ಕ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ತಿಮ್ಮನಗೌಡ, ವೆಂಕಟೇಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲ್ಲೆ ನಡೆಸಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ದರ ಇಳಿಕೆ, ಲಿಂಗಾನುಪಾತ ಏರಿಕೆ – ಸಚಿವ ಸುಧಾಕರ್
Raisins Benefits : ಒಣದ್ರಾಕ್ಷಿ ತಿನ್ನುವುದ್ರಿಂದ ಶುಗರ್ ಬರುತ್ತಾ? ತಜ್ಞರ ಅಭಿಪ್ರಾಯಗಳೇನು ಗೊತ್ತಾ: ಮಾಹಿತಿ ಓದಿ