ಬೆಳಗಾವಿ : ಕಳೆದ ಡಿಸೆಂಬರ್ ನಲ್ಲಿ ಬಾಗಲಕೋಟೆಯ ನವನಗರ್ದಲ್ಲಿ ಬೀದಿ ನಾಯಿಗಳಿಂದ ಗಾಯಗೊಂಡಿದ್ದ ಹತ್ತು ವರ್ಷದ ಬಾಲಕಿ ಅಲೈನ ಇಂದು ಹುಬ್ಬಳ್ಳಿಯ ಕಿಂಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿತ ಸಾವನ್ನಪ್ಪಿದ್ದಳು ಇದೀಗ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಎರಡು ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ಅಟ್ಯಾಕ್ ಮಾಡಿದೆ.
ಹೌದು ಚಿಕ್ಕೋಡಿ ಪಟ್ಟಣದಲ್ಲಿ ಬೀದಿನಾಯಿಗಳು ಅಟ್ಟಹಾಸ ಮೆರೆದಿದ್ದು ಎರಡು ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ ನಡೆಸಿವೆ. ಎರಡು ವರ್ಷದ ಋತ್ವಿಕ್ ಕುದರೆ ಎಂಬ ಮಗುವಿನ ಮೇಲೆ ದಾಳಿ ಮಾಡಿವೆ. ಮಗುವಿನ ಬಲ ಭಾಗದ ಕೆನ್ನೆ ಕಚ್ಚಿ ನಾಯಿಗಳು ಗಾಯಗೊಳಿಸಿವೆ. ಇನ್ನು ನಾಯಿಗಳ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಹಾಗೂ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.








