ಬೀದರ್ : ಕೆಲವರಿಗೆ ಕಾನೂನು ಬಗ್ಗೆ ತಿಳುವಳಿಕೆ ಇಲ್ಲದಿರುವುದು ದಾರಿಂದ ವನ್ಯಜೀವಿಗಳ ಅಂಗಾಂಗಗಳನ್ನು ನಿಯಮಬಾಹಿರವಾಗಿ ಸಂಗ್ರಹಿಸಿರುತ್ತಾರೆ. ಆದ್ದರಿಂದ ಅವರು ತಕ್ಷಣ ವನ್ಯಜೀವಿಗಳ ಅಂಗಗಳನ್ನು ವಾಪಸ್ ನೀಡಬೇಕು. ಇದಕ್ಕೆ ಏಪ್ರಿಲ್ 10 ರವರೆಗೆ ಸಮಯ ಅವಕಾಶವಿದ್ದು, ತಪ್ಪಿದ್ದಲ್ಲಿ ಅಂತವರ ವಿರುದ್ಧ ದೂರು ದಾಖಲಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಬೀದರ್‌ನಲ್ಲಿ ಭೇಟಿಯಾದ ಸುದ್ದಿಗಾರರಿಗೆ ಮಾತನಾಡಿ, ಕಾನೂನು ಗೊತ್ತಿಲ್ಲದೆ ವನ್ಯಜೀವಿಗಳ ಅಂಗಾಂಗಗಳನ್ನಿಟ್ಟುಕೊಂಡಿರುವ, ಅವುಗಳನ್ನು ಅರಣ್ಯ ಇಲಾಖೆ ಸುಪರ್ದಿಗೆ ನೀಡಿದ್ರೆ ಯಾವುದೇ ಪ್ರಕರಣ ದಾಖಲಾಗಲ್ಲ ಆದರೆ ನಿರ್ಲಕ್ಷಿಸಿದ್ದೆಯಾದಲ್ಲಿ ಅಂಥವರ ಮೇಲೆ ದೂರು ದಾಖಲಾಗುವದು ಪಕ್ಕಾ ಎಂದರು.
WATCH VIDEO: ಮಗನ ಶವದ ಮುಂದೆ ‘ಸಿದ್ದರಾಮಯ್ಯ’ ಸರ್ಕಾರದ 2 ಸಾವಿರ ರೂ. ನೆನೆದ ತಾಯಿ: ವಿಡಿಯೋ ವೈರಲ್!!
ವನ್ಯಜೀವಿಗಳ ಅಂಗಾಂಗಳ ಸಂಗ್ರಹದ ಕುರಿತಾಗಿ ಇತ್ತೀಚಿಗೆ ಅರಣ್ಯ ಇಲಾಖೆಯ ಕಾರ್ಯಾಚರಣೆ ಹಲವರ ನಿದ್ದೆಗೆಡಿಸಿತ್ತಲ್ಲದೆ ಖ್ಯಾತನಾಮರೂ ಸೇರಿದಂತೆ ಅನೇಕರ ಮೇಲೆ ದೂರು ದಾಖಲಾಗುವಂತೆ ಆಗಿ ಕೊನೆಗೆ ಕಾನೂನಿನ ಅರಿವಿಲ್ಲದೆ ಸಂಗ್ರಹ ಮಾಡಿದ್ದವರ ಮೇಲೆ ಸರ್ಕಾರ ಅನುಕಂಪ ತೋರಿ ವಾಪಸ್ ನೀಡುವಿಕೆಗೆ ಗಡುವು ನಿರ್ಧರಿಸುವ ಮಾತನಾಡಿದ್ದು, ಇದೀಗ ಗಡುವು ನಿರ್ಧರಿತವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಅಂಬೇಡ್ಕರ್ ಭವನದ ಮಾದರಿಯಲ್ಲಿ ‘ಬಸವ ಭವನ’ ನಿರ್ಮಿಸಿ:ಶಾಸಕ ಶಾಮನೂರು ಶಿವಶಂಕರಪ್ಪ ಆಗ್ರಹ