ಬೆಂಗಳೂರು : ನವೆಂಬರ್ ನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿಕೆ ನೀಡಿದ್ದರು. ಅದಾದ ಬಳಿಕ ಇದೀಗ ಶಾಸಕ ಡಾ. ರಂಗನಾಥ್ ಕೂಡ ಡಿಕೆ ಶಿವಕುಮಾರ್ ಶೀಘ್ರದಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕುಣಿಗಲ್ ಕ್ಷೇತ್ರದ ಶಾಸಕ ಡಾಕ್ಟರ್ ರಂಗನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷ 140 ಸ್ಥಾನ ಗೆಲ್ಲಲು ಡಿಕೆ ಶಿವಕುಮಾರ್ ಅವರ ಸಾಕಷ್ಟು ಶ್ರಮವಿದೆ. ಡಿಕೆ ಶಿವಕುಮಾರ್ ಗೆ ಸ್ಥಾನಮಾನ ಕೊಡಲು ಹೈಕಮಾಂಡ್ ಚಿಂತನೆ ಮಾಡಬೇಕು.ಡಿಕೆ ಶಿವಕುಮಾರ್ ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗುತ್ತಾರೆ. ಹೈಕಮಾಂಡ್ ನಿರ್ಧಾರಕಾಗಿ ಪಕ್ಷದ ಕಾರ್ಯಕರ್ತರು ಕಾಯುತ್ತಿದ್ದಾರೆ. ಕಾರ್ಯಕರ್ತರು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಅಪೇಕ್ಷೆ ಪಡುತ್ತಿದ್ದಾರೆ.
ರಾಜಕೀಯ ಅನ್ನೋದು ಕೃಷಿ ಇದ್ದಹಾಗೆ ಕೃಷಿಯಲ್ಲಿ ರಾಜಕೀಯದಲ್ಲಿ ಸಮಸ್ಯೆ ಬಗೆಹರಿಯಬೇಕು. ರಾಜಕೀಯದಲ್ಲಿ ಜನರ ಸಮಸ್ಯೆ ಬಗೆಹರಿಯಬೇಕು ಡಿಕೆ ಶಿವಕುಮಾರ್ ಹಾರ್ಡ್ಶಿಪ್ ನಂಬಿ ಕೆಲಸ ಮಾಡುತ್ತಾರೆ. ಬೆಳಗ್ಗೆ 8 ಗಂಟೆಯಿಂದ ಮಧ್ಯರಾತ್ರಿವರೆಗೂ ಕೆಲಸ ಮಾಡುತ್ತಾರೆ. ಡಿಕೆ ಶಿವಕುಮಾರ್ ಅವರಿಗೆ ಭಗವಂತನ ಆಶೀರ್ವಾದ ಇದೆ. ಅವರು ಸಿಎಂ ಆಗೇ ಆಗುತ್ತಾರೆ.
ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯನವರು ದೇಶಕ್ಕೆ ಮಾದರಿಯಾಗುವ ಕೆಲಸ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಡಿಕೆ ಶಿವಕುಮಾರ್ ನಮಗೆ ರಾಜಕೀಯ ಗುರುಗಳು ಎಂದು ಬೆಂಗಳೂರಲ್ಲಿ ಕುಣಿಗಲ್ ಕ್ಷೇತ್ರದ ಶಾಸಕ ಡಾ. ರಂಗನಾಥ್ ತಿಳಿಸಿದರು.