ಮಂಡ್ಯ : ಮಂಡ್ಯ ಜಿಲ್ಲಾ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್ ಗೆ ನಿರ್ಬಂಧ ವಿಧಿಸಿ ಮಂಡ್ಯ ಡಿಸಿ ಡಾ.ಕುಮಾರ ಆದೇಶ ಹೊರಡಿಸಿದ್ದಾರೆ. ಇಂದು ಕೆರಗೋಡು ಪ್ರವಾಸ ಹಮ್ಮಿಕೊಂಡಿದ್ದ ಮುತಾಲಿಕ್, ಹನುಮಧ್ವಜ ವಿವಾದಿತ ಮಂಡ್ಯದ ಕೆರಗೋಡು ಗ್ರಾಮ. ಹನುಮಧ್ವಜ ಇಳಿಸಿ ಎರಡು ವರ್ಷ ಹಿನ್ನೆಲೆ, ಇಂದು 2ನೇ ವರ್ಷದ ಕರಾಳ ದಿನ ಹಾಗೂ ಪಂಜಿನ ಮೆರವಣಿಗೆ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಆಗಮಿಸಲು ನಿರ್ಧರಿಸಿ, ಹಿಂದೂ ಕಾರ್ಯಕರ್ತರಿಗೆ ಮುತಾಲಿಕ್ ಆಹ್ವಾನ ನೀಡಿದ್ದರು. ಮುತಾಲಿಕ್, ಆಗಮನ, ಭಾಷಣದಿಂದ ಪ್ರಚೋದನೆ ಹೇಳಿಕೆ, ಶಾಂತಿ ಸುವ್ಯವಸ್ಥೆ, ಕೋಮು ಸೌಹಾರ್ದತೆ ಕದಡುವ ಸಾಧ್ಯತೆ ಇದೆ. ಈ ಹಿನ್ನೆಲೆ, ಮುತಾಲಿಕ್ ಗೆ ಮಂಡ್ಯ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಈಗಾಗಲೇ ರಾಜ್ಯಾದ್ಯಂತ ಮುತಾಲಿಕ್ ವಿರುದ್ಧ 39ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವ ಹಿನ್ನೆಲೆ, ನಿರ್ಬಂಧಿಸುವಂತೆ ಮಂಡ್ಯ ಎಸ್ಪಿ ಶೋಭಾರಾಣಿ ಡಿಸಿಗೆ ಪತ್ರ ಬರೆದಿದ್ದರು. ಎಸ್ಪಿ ಪತ್ರದ ಹಿನ್ನೆಲೆ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿ ಡಿಸಿ ಆದೇಶಿಸಿದ್ದಾರೆ. BNSS 2023 ಸೆಕ್ಷನ್ 163 ಅಡಿ ಮಂಡ್ಯ ಜಿಲ್ಲೆಗೆ ನಿರ್ಬಂಧ ವಿಧಿಸಲಾಗಿದೆ.








