Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರ್ಕಿ `ST’ ಪಟ್ಟಿಗೆ ಸೇರಿಸಲು ಶಿಫಾರಸು : ಸಚಿವ ಪ್ರಿಯಾಂಕ್ ಖರ್ಗೆ

11/03/2026 8:40 PM

ಗ್ಯಾಸ್ ಇಲ್ಲದಿದ್ದರೂ ನಿಮಿಷಗಳಲ್ಲಿ ಅಡುಗೆ ರೆಡಿ : ಪ್ರತಿ ಮನೆಯಲ್ಲೂ ಇರಲೇಬೇಕು ಈ 5 ‘ಮ್ಯಾಜಿಕ್’ ಸ್ಟವ್‌’ ಗಳು !

11/03/2026 8:32 PM

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

11/03/2026 8:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ಮಾರಿ ಜಾತ್ರೆ ಪ್ರಯುಕ್ತ ‘ಹೆಲಿ ಟೂರಿಸಂ’ಗೆ ಡಿಸಿ ಅನುಮತಿ: ನಾಳೆಯಿಂದ ‘ಹೆಲಿಕ್ಯಾಪ್ಟರ್ ಪ್ರವಾಸ’ ಆರಂಭ
KARNATAKA

ಸಾಗರದ ಮಾರಿ ಜಾತ್ರೆ ಪ್ರಯುಕ್ತ ‘ಹೆಲಿ ಟೂರಿಸಂ’ಗೆ ಡಿಸಿ ಅನುಮತಿ: ನಾಳೆಯಿಂದ ‘ಹೆಲಿಕ್ಯಾಪ್ಟರ್ ಪ್ರವಾಸ’ ಆರಂಭ

By kannadanewsnow0905/02/2026 8:32 AM

ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹೆಲಿ ಟೂರಿಸಂಗೆ ಕಿರಣ್ ದೊಡ್ಮನೆ ಅವರು ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ಅನುಮತಿ ಕೋರಿದ್ದರು. ಇವರ ಮನವಿಯನ್ನು ಪರಿಶೀಲಿಸಿರುವಂತ ಶಿವಮೊಗ್ಗ ಡಿಸಿ ಸಾಗರದಲ್ಲಿ ಮಾರಿ ಜಾತ್ರೆ ಪ್ರಯುಕ್ತ ಹೆಲಿ ಟ್ಯೂರಿಸಂಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ನಾಳೆಯಿಂದ ಸಾಗರದಲ್ಲಿ ಹೆಲಿಕಾಪ್ಟರ್ ಮೂಲಕ ಪ್ರವಾಸ ಆರಂಭಗೊಳ್ಳಲಿದೆ.

ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ದಿನಾಂಕ:03.02.2026 ರಂದು ಸಾಗರದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ ಪ್ರಯುಕ್ತ ದಿನಾಂಕ:05.02.2026 ರಿಂದ 09.02.2026 ರವರೆಗೆ ಪ್ರವಾಸಿಗರಿಗಾಗಿ ಹೆಲಿಕ್ಯಾಪ್ಟರ್ ಸೇವೆ ಒದಗಿಸುವ ಸಲುವಾಗಿ ಸಾಗರ ಗೋಪಾಲಗೌಡ ಕ್ರೀಡಾಂಗಣದಲ್ಲಿ ಹೆಲಿಕ್ಯಾಪ್ಟರ್ ಇಳಿಸಿ ಹಾರಿಸಲು ಹಾಗೂ “ಹೆಲಿ ಟೂರಿಸಂ” ನಡೆಸಲು ಅನುಮತಿಯನ್ನು ನೀಡುವಂತೆ ಅನುಮತಿಯನ್ನು ಕೋರಿರುತ್ತಾರೆ ಎಂದಿದ್ದಾರೆ.

ಮುಂದುವರೆದು ಸಾಗರ ಮಾರಿಕಾಂಬಾ ದೇವಿಯ ಜಾತ್ರೆಯ ಸಂಬಂಧ ಸಾಗರ ಗೋಪಾಲಗೌಡ ಕ್ರೀಡಾಂಗಣದಲ್ಲಿ “ಹೆಲಿ ಟೂರಿಸಂ’ ಕಾರ್ಯಾಚರಣೆಯನ್ನು ನಡೆಸುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮತ್ತು ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಶಿವಮೊಗ್ಗ ವಿಭಾಗ, ಶಿವಮೊಗ್ಗ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ, ಮೆಸ್ಕಾಂಲಾ ಇಖೆರವರಿಂದ ವರದಿ ಪಡೆಯಲಾಗಿದ್ದು, ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಇಲಾಖೆಗಳು ಉಲ್ಲೇಖಿಸಿರುವಂತೆ ಷರತ್ತುಗಳು /ನಿಬಂಧನೆಗಳನ್ನು ಅನುಸರಿಸುವ ಷರತ್ತಿಗೆ ಒಳಪಟ್ಟು ದಿನಾಂಕ:05.02.2026 ರಿಂದ 09.02.2026 ರವರೆಗೆ ಹೆಲಿಕಾಪ್ಟರ್ ಹಾರಾಟ ನಡೆಸಲು ಅನುಮತಿ ನೀಡಬಹುದೆಂದು ವರದಿ ನೀಡಿರುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.

ಆದ್ದರಿಂದ ವರದಿಯನ್ನು ಪರಿಗಣಿಸಿ ಸಾಗರ ಗೋಪಾಲಗೌಡ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ತಾತ್ಕಲಿಕ ಹೆಲಿಪ್ಯಾಡ್ ನಲ್ಲಿ H125- H130 Helicopter ಅನ್ನು ದಿನಾಂಕ:05.02.2026 ರಿಂದ 09.02.2026 ರವರೆಗೆ ಇಳಿಸಿ ಪಾರ್ಕಿಂಗ್ ಮಾಡಲು ಹಾಗೂ ಸದರಿ ದಿನಗಳಂದು ಹೆಲಿಕಾಪ್ಟರ್ ಹಾರಾಟ ನಡೆಸಲು ಈ ಕೆಳಕಂಡ ಕೋಷ್ಟಕ (1) ರಲ್ಲಿ ನಮೂದಿಸಿರುವಂತೆ “ ಹೆಲಿ ಟೂರಿಸಂ” ನಡೆಸಲು ಈ ಕೆಳಕಂಡ ನಿಬಂಧನೆಗಳಿಗೆ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಈ ಕಛೇರಿಗೆ ಸಲ್ಲಿಸಿರುವ ವರದಿಯಲ್ಲಿನ ಷರತ್ತಿಗೆ ಒಳಪಟ್ಟು ಅನುಮತಿಸಿದೆ ಎಂಬುದಾಗಿ ತಿಳಿಸಿದ್ದಾರೆ.

ಷರತ್ತುಗಳು ಅನ್ವಯ?

* ಹವಾಮಾನ ವೈಪರೀತ್ಯದ ಬಗ್ಗೆ, ಹವಾಮಾನ ಇಲಾಖೆಯಿಂದ ಸೂಕ್ತ ದೃಢೀಕರಣ ಪತ್ರವನ್ನು ಪಡೆದು ಕಾರ್ಯಾಚರಣೆ ಮಾಡುವುದು.

* ಹೆಲಿಪ್ಯಾಡ್ ಕಾರ್ಯಾಚರಣೆಯ ವೆಚ್ಚವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಭರಿಸತಕ್ಕದ್ದು.

* ಹೆಲಿಪ್ಯಾಡ್‌ನ ಸಮರ್ಪಕತೆಯ ಬಗ್ಗೆ, ಸಂಸ್ಥೆಯವರೇ ಮುಂಚಿತವಾಗಿ ಪರೀಕ್ಷಿಸಿ ದೃಢಪಡಿಸಿಕೊಳ್ಳತಕ್ಕದ್ದು ಹಾಗೂ ಹೆಲಿಪ್ಯಾಡ್ ಸಮರ್ಥತೆ ಮತ್ತು ಸುರಕ್ಷತೆ ಸಂಬಂಧಪಟ್ಟ ಹೆಲಿಪ್ಯಾಡ್‌ನ ಮಾಲೀಕರು ಜವಾಬ್ದಾರಿಯಾಗಿರುತ್ತದೆ.

* Civil aviation requirements section 4- Aerodrome standards & Air traffic services, series B, part II, Dated 21.12.2005 ರ ಕ್ರ.ಸಂ.3.5 ರಂತೆ ಹೆಲಿಕಾಪ್ಟರ್ ಮತ್ತು ಹಲಿಕಾಪ್ಟರ್‌ನಲ್ಲಿ ಪ್ರಯಾಣಿಸುವವರ ಸುರಕ್ಷತೆಯು ಸಂಬಂಧಪಟ್ಟ ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ.

* Civil aviation requirements section 4-Aerodrome standards & Air traffic services, series B, part II, Dated 21.12.2005 ರ ಕ್ರ.ಸಂ.3.8 ರಂತೆ ಹೆಲಿಪ್ಯಾಡ್ ಬಳಿ ಅಂಬುಲೆನ್ಸ್ ಸೇವೆ, ಭದ್ರತಾ ವ್ಯವಸ್ಥೆ, ಅಗ್ನಿ ಶಾಮಕ ವ್ಯವಸ್ಥೆಯನ್ನು ಸಂಸ್ಥೆಯವರೇ ಮಾಡಿಕೊಳ್ಳತಕ್ಕದ್ದು.

* ಹೆಲಿಕ್ಯಾಪ್ಟರ್ ಸಂಸ್ಥೆಯು Director General of Civil Aviation ಇವರಿಂದ ಹೊರಡಿಸಲಾದ Civil Aviation Requirements ನಲ್ಲಿ ನೀಡಲಾದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂಬುದಾಗಿ ಷರತ್ತು ವಿಧಿಸಿದ್ದಾರೆ.

ಮುಂಗಡ ಬುಕ್ಕಿಂಗ್ ಗೆ ಈ ಸಂಖ್ಯೆಗೆ ಸಂಪರ್ಕಿಸಿ

ಈ ಬಗ್ಗೆ ಕಿರಣ್ ದೊಡ್ಮನಿ ಅವರು ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ, ಹೆಲಿ ಟೂರಿಸಂಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ದೊರೆಯುವುದು ಸ್ವಲ್ಪ ತಡವಾಯಿತು. ಹೀಗಾಗಿ ಇಂದಿನಿಂದ ಆರಂಭಗೊಳ್ಳಬೇಕಿದ್ದ ಹೆಲಿ ಟೂರಿಸಂ ನಾಳೆಯಿಂದ ಆರಂಭಗೊಳ್ಳಲಿದೆ. ಸಾಗರದ ಗೋಪಾಗೌಡ ಕ್ರೀಢಾಂಗಣದಲ್ಲಿ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಸಾಗರದ ಸಮಸ್ತ ಸಾರ್ವಜನಿಕರು ಹೆಲಿ ಟೂರಿಸಂ ಪ್ರಯೋಜನ ಪಡೆದುಕೊಳ್ಳಬೇಕು. ಬುಕ್ಕಿಂಗ್ ಗಾಗಿ – +919945563294 ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರ್ಕಿ `ST’ ಪಟ್ಟಿಗೆ ಸೇರಿಸಲು ಶಿಫಾರಸು : ಸಚಿವ ಪ್ರಿಯಾಂಕ್ ಖರ್ಗೆ

11/03/2026 8:40 PM1 Min Read

ಗ್ಯಾಸ್ ಇಲ್ಲದಿದ್ದರೂ ನಿಮಿಷಗಳಲ್ಲಿ ಅಡುಗೆ ರೆಡಿ : ಪ್ರತಿ ಮನೆಯಲ್ಲೂ ಇರಲೇಬೇಕು ಈ 5 ‘ಮ್ಯಾಜಿಕ್’ ಸ್ಟವ್‌’ ಗಳು !

11/03/2026 8:32 PM2 Mins Read

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

11/03/2026 8:15 PM2 Mins Read
Recent News

ರಾಜ್ಯದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರ್ಕಿ `ST’ ಪಟ್ಟಿಗೆ ಸೇರಿಸಲು ಶಿಫಾರಸು : ಸಚಿವ ಪ್ರಿಯಾಂಕ್ ಖರ್ಗೆ

11/03/2026 8:40 PM

ಗ್ಯಾಸ್ ಇಲ್ಲದಿದ್ದರೂ ನಿಮಿಷಗಳಲ್ಲಿ ಅಡುಗೆ ರೆಡಿ : ಪ್ರತಿ ಮನೆಯಲ್ಲೂ ಇರಲೇಬೇಕು ಈ 5 ‘ಮ್ಯಾಜಿಕ್’ ಸ್ಟವ್‌’ ಗಳು !

11/03/2026 8:32 PM

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

11/03/2026 8:15 PM

RCB IPL 2026 Schedule : ಮಾ.28ರಿಂದ ‘IPL’ ಆರಂಭ ; ‘RCB’ ಯಾವ ದಿನ, ಯಾವ ತಂಡದ ಜೊತೆ ಸೆಣಸಾಡಲಿದೆ.? ಪೂರ್ಣ ವೇಳಾಪಟ್ಟಿ ಇಲ್ಲಿದೆ!

11/03/2026 8:13 PM
State News
KARNATAKA

ರಾಜ್ಯದಲ್ಲಿ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ, ಬಾರ್ಕಿ `ST’ ಪಟ್ಟಿಗೆ ಸೇರಿಸಲು ಶಿಫಾರಸು : ಸಚಿವ ಪ್ರಿಯಾಂಕ್ ಖರ್ಗೆ

By kannadanewsnow5711/03/2026 8:40 PM KARNATAKA 1 Min Read

ಬೆಂಗಳೂರು: ರಾಜ್ಯದ ಪ್ರಮುಖ ಸಮುದಾಯಗಳಾದ ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರ್ಕಿ ಸಮಾಜಗಳನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ…

ಗ್ಯಾಸ್ ಇಲ್ಲದಿದ್ದರೂ ನಿಮಿಷಗಳಲ್ಲಿ ಅಡುಗೆ ರೆಡಿ : ಪ್ರತಿ ಮನೆಯಲ್ಲೂ ಇರಲೇಬೇಕು ಈ 5 ‘ಮ್ಯಾಜಿಕ್’ ಸ್ಟವ್‌’ ಗಳು !

11/03/2026 8:32 PM

14 ವರ್ಷದ ಹೆಣ್ಣು ಮಕ್ಕಳಿಗೆ `HPV’ ಲಸಿಕೆ : ಪೋಷಕರೊಂದಿಗೆ ಬರುವುದು ಕಡ್ಡಾಯ !

11/03/2026 8:15 PM

BIG NEWS : ಕರ್ನಾಟಕದಲ್ಲಿ ₹6.70 ಲಕ್ಷ ಕೋಟಿ ಮೊತ್ತದ 117 ಹೂಡಿಕೆ ಒಪ್ಪಂದಗಳಿಗೆ ಸಹಿ : 2.47 ಲಕ್ಷ ಉದ್ಯೋಗಗಳ ಸೃಷ್ಟಿ

11/03/2026 7:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.