ದಾವಣಗೆರೆ : ಕೋಮು ಭಾವನೆಗೆ ಧಕ್ಕೆ ತರುವ ಫ್ಲೆಕ್ಸ್ ಅಡವಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯ ಲೋಪದ ಆರೋಪದ ಅಡಿ ಪಿಎಸ್ಐ ಹಾಗೂ ಕಾನ್ಸ್ಟೇಬಲ್ ಗಳನ್ನು ಇದೀಗ ಅಮಾನತುಗೊಳಿಸಲಾಗಿದೆ. ದಾವಣಗೆರೆಯ ಆರ್‌ಎಂಸಿ ಯಾರ್ಡ್ PSI ಸಚಿನ್ ಬಿರಾದಾರ್ ಪೊಲೀಸ್ ಕಾನ್ಸ್ಟೇಬಲ್ ಆದ ಷಣ್ಮುಗ ಹಾಗು ವತ್ಸಲ ಅಮಾನತುಗೊಳಗಾದ ಸಿಬ್ಬಂದಿಗಳಾಗಿದ್ದಾರೆ.
ಮೂವರನ್ನು ಅಮಾನತುಗೊಳಿಸಿ ಎಸ್ ಪಿ ಉಮಾ ಪ್ರಶಾಂತ ಆದೇಶ ಹೊರಡಿಸಿದ್ದಾರೆ ದಾವಣಗೆರೆಯ ಮಟ್ಟಿಕಲ್ಲ ಪ್ರದೇಶದಲ್ಲಿ ಆಕ್ಷೇಪಾರ್ಹ ಫ್ಲೆಕ್ಸ್ ಅಳವಡಿಸಲಾಗಿತ್ತು ಶಿವಾಜಿ ಮತ್ತು ಅಫ್ಜಲ್ ಖಾನ್ ಸನ್ನಿವೇಶದ ಅಳವಡಿಸಲಾಗಿತ್ತು. ಸಾವರ್ಕರ್ ಯುವಕರ ಸಂಘ ಈ ಒಂದು ಆಕ್ಷೇಪಾರ್ಹ ಫ್ಲೆಕ್ಸ್ ಅಳವಡಿಸಿತ್ತು. ಕೋಮು ಭಾವನೆಗೆ ಧಕ್ಕೆ ತರುವ ರೀತಿಯ ಫ್ಲೆಕ್ಸ್ ಅಳವಡಿಸಿದ್ದರು. ಆಕ್ಷೇಪರಹ ಫ್ಲೆಕ್ಸ್ ಅಳವಡಿಕೆಗೆ ಬಗ್ಗೆ ಮಾಹಿತಿ ನೀಡದ ಆರೋಪದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರದೆ ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಪಿಎಸ್ಐ ಹಾಗೂ ಇಬ್ಬರು ಕಾಂಸ್ಟೇಬಲ್ ಅಮಾನತುಗೊಳಿಸಿ ಎಸ್ ಪಿ ಉ ಮಹಾಪ್ರಶಾಂತ್ ಆದೇಶ ಹೊರಡಿಸಿದ್ದಾರೆ.