ದಾವಣಗೆರೆ : ದಾವಣಗೆರೆ ಪಾಲಿಕೆ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಗಳು ಖಾಸಗಿ ಶಾಲೆ ತೆರವುಗೊಳಿಸಿರುವ ಘಟನೆ ವರದಿಯಾಗಿದೆ. ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳನ್ನು ಹೊರಗೆ ಕಳುಹಿಸಿ ಶಾಲೆಯನ್ನು ತೆರವುಗೊಳಿಸಿದ್ದಾರೆ. ದಾವಣಗೆರೆಯ ಎಸ್ ಓ ಜಿ ಕಾಲೋನಿಯಲ್ ಇರುವ ಜೀವಿಎಸ್ ಖಾಸಗಿ ಶಾಲೆ ಪಾಲಿಕೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆಯ ಕಮಿಷನರ್ ರೇಣುಕಾ ಹಾಗೂ ತಹಶೀಲ್ದಾರ್ ಅಶ್ವತ್ ಸಮುಖದಲ್ಲಿ ಶಾಲೆಯನ್ನು ತೆರವುಗೊಳಿಸಲಾಯಿತು. ಖಾಸಗಿ ವ್ಯಕ್ತಿಯಿಂದ ಜಮೀನು ಬಾಡಿಗೆ ಪಡೆದು ಪ್ರಭು ಶಾಲೆ ಶಾಲೆ ನಡೆಸುತ್ತಿದ್ದರು ಪಾಲಿಕೆಗೆ ಸೇರಿದ ಜಾಗದಲ್ಲಿ ಶಾಲೆ ಇದೆ ಎಂದು ಅಧಿಕಾರಿಗಳ ವಾದವಾಗಿತ್ತು. ಶಾಲೆ ಸ್ಥಳಾಂತರ ಮಾಡಲು ಪ್ರಭು ಸಮಯಾವಕಾಶ ಕೇಳಿದರು ಬೆಳಿಗ್ಗೆ ಕಾಲಾವಕಾಶ ಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.
ಇದೀಗ ಪೊಲೀಸರ ಸಮ್ಮುಖದಲ್ಲಿ ಪಾಲಿಗೆ ಶಾಲೆ ತೆರವುಗೊಳಿಸಿದ್ದಾರೆ ಕಳೆದ 15 ವರ್ಷಗಳಿಂದ ಜೀವಿ ಎಸ್ ಖಾಸಗಿ ಶಾಲೆ ಅಲ್ಲಿಯೆ ನಡೆಸಿಕೊಂಡು ಬಂದಿದ್ದರು. ಮಕ್ಕಳನ್ನು ಹೊರಗೆ ಹಾಕುವ ವೇಳೆ ಮಕ್ಕಳು ಕಣ್ಣೀರಿಡುತ್ತಾ, ಚಾಲೆಂದ ಹೊರಹೋಗುವ ದೃಶ್ಯ ಮನ ಕಲಕುವಂತಿತ್ತು. ಪಾಲಿಕೆ ಸಿಬ್ಬಂದಿಗಳ ಈ ಅಮಾನವೀಯ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.








