ದಾವಣಗೆರೆ: ಜಿಲ್ಲೆಯಲ್ಲಿನ ಡ್ರಗ್ಸ್ ಕೇಸ್ ನಲ್ಲಿ ಕಾಂಗ್ರೆಸ್ ಘಟಾನುಘಟಿಗಳ ಬಂಧನ ಮುಂದುವರೆದಿದೆ. ಇದೀಗ ಮತ್ತೊಬ್ಬ ಸಚಿವರ ಪರಮಾಪ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಹೌದು ದಾವಣಗೆರೆ ಡ್ರಗ್ಸ್ ಕೇಸಲ್ಲಿ ಕಾಂಗ್ರೆಸ್ ನ ಘಟಾನುಘಟಿಗಳ ಬಂಧನವಾಗಿದೆ. ಮತ್ತೊಬ್ಬ ಸಚಿವರ ಪರಮಾಪ್ತನನ್ನು ದಾವಣಗೆರೆಯಲ್ಲಿ ಪೊಲೀಸರು ಬಲೆಗೆ ಕೆಡವಿದ್ದಾರೆ.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಅನ್ವರ್ ಬಾಷಾ ಬಂಧಿಸಲಾಗಿದೆ. ಸಿಂಥೆಟಿಕ್ ಡ್ರಗ್ಸ್ ಕೇಸ್ ನಲ್ಲಿ ಈವರೆಗೆ ಒಟ್ಟು 8 ಆರೋಪಿಗಳನ್ನು ಬಂಧಿಸಿದಂತೆ ಆಗಿದೆ.
ಡಿಸೆಂಬರ್.23ರಂದು ಡ್ರಗ್ಸ್ ದಂಧೆ ನಡೆಸಿದ್ದ ಗ್ಯಾಂಗ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಕಾಂಗ್ರೆಸ್ ಮುಖಂಡ ವೇದಮೂರ್ತಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಕಾಂಗ್ರೆಸ್ ಮುಖಂಡ, ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜನ್ ಆಪ್ತ. ಬಂಧಿತರಿಂದ 90 ಗ್ರಾಂ ಎಂಡಿಎಂಎ ಡ್ರಗ್ಸ್, ಸಿಂಥೆಟಿಕ್ ಡ್ರಗ್ಸ್ ಸೇರಿ ಲಕ್ಷಾಂತರ ಮೌಲ್ಯದ ಡ್ರಗ್ಸ್ ದಾವಣಗೆರೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕದ ‘ಸಾರಿಗೆ ಇಲಾಖೆ’ಗೆ ‘ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್-2025’ ಪ್ರಶಸ್ತಿ
ದಾವಣಗೆರೆ: ನಾಳೆ ಹೊನ್ನಾಳಿ ತಾಲ್ಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut








