ದಾವಣಗೆರೆ : ಶಾಲೆಗೆ ಸ್ವಲ್ಪ ಮರಳು ಪಡೆದಿದ್ದಕ್ಕೆ ನಿನ್ನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಗಲಾಟೆ ನಡೆದಿತ್ತು ಗಲಾಟೆಯ ವೇಳೆ ಓರ್ವನ ಕೊಲೆಯಾಗಿತ್ತು. ಈ ಒಂದು ಕೊಲೆಗೆ ಸಂಬಂಧಿಸಿದಂತೆ ಇದೀಗ ಮಾಜಿ ಸಚಿವ ಎಂಪಿ ರೇಣುಕಾಚಾರ್ಯರ ಕಟ್ಟಾ ಬೆಂಬಲಿಗ ಸೇರಿದಂತೆ ಒಟ್ಟು 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು ಮರಳು ದಂಧೆಯ ವಿಚಾರಕ್ಕೆ ಮರ್ಡರ್ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ ರೇಣುಕಾಚಾರ್ಯ ಕಟ್ಟಾ ಬೆಂಬಲಿಗ ಸೇರಿ 6 ಜನರನ್ನು ಇದೀಗ ಬಂಧಿಸಲಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಈ ಒಂದು ಕೊಲೆ ನಡೆದಿತ್ತು ಮರಿಗೊಂಡನಹಳ್ಳಿಯ ಮರಳು ಪಡೆದಿದ್ದ ವಿಚಾರಕ್ಕೆ ಶಿವರಾಜ್ (33) ಕೊಲೆ ಮಾಡಲಾಗಿತ್ತು.
ಪಕ್ಕದ ಕಡದಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿದ್ದು, ಆತನ ಪುತ್ರ ಅಭಿಷೇಕ್ ಸೇರಿದಂತೆ 6 ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ಮರಿಗೊಂಡನಹಳ್ಳಿ ಶಾಲೆಗೆ ಸ್ವಲ್ಪ ಮರಳು ಪಡೆದಿದ್ದಕ್ಕೆ ಗಲಾಟೆ ನಡೆದಿತ್ತು.
ಗಲಾಟೆಯಲ್ಲಿ ಇಬ್ಬರಿಗೆ ಆರೋಪಿ ಸತೀಶ್ ಅಂಡ್ ಗ್ಯಾಂಗ್ ಚಾಕು ಇರಿದಿದ್ದರು. ಕೂಡಲೇ ಶಿವರಾಜ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಶಿವರಾಜ್ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಗಯಾಳು ಭರತ್ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.