ದಾವಣಗೆರೆ : ಆಟವಾಡುತ್ತಾ ಆಯತಪ್ಪಿ ನೀರಿನ ತೊಟ್ಟಿಯಲ್ಲಿ ಬಿದ್ದು ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಕರೂರು ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ.
ಮೃತ ಬಾಲಕನನ್ನು ದಾವಣಗೆರೆ ತಾಲೂಕಿನ ಕರೂರು ಗ್ರಾಮದ ಸೈಯದ್ ಆಜಾನ್ ಎಂದು ಹೇಳಲಾಗುತ್ತಿದ್ದು, ವಿನೋಬನಗರದ ನಿವಾಸಿ ಸೈಯದ್ ಶಹಬಾದ್ ಇಕ್ಬಾಲ್ ಅವರ ಪುತ್ರ ಎಂದು ತಿಳಿಬಂದಿದೆ. ನಿನ್ನೆ ಕುಟುಂಬದವರೊಂದಿಗೆ ಮದುವೆಗೆ ಸೈಯದ್ ಶಹಬಾದ್ ಇಕ್ಬಾಲ್ ಕರೂರು ಗ್ರಾಮಕ್ಕೆ ಬಂದಿದ್ದರು.
ಈ ವೇಳೆ ರಾತ್ರಿ ಬಾಲಕ ಆಟವಡುತ್ತಾ ಹೋಗಿ ಕಾರ್ಖಾನೆ ಸಲುವಾಗಿ ನಿರ್ಮಾಣ ಮಾಡಿದ್ದ ನೀರಿನ ಸಣ್ಣ ತೊಟ್ಟಿಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದಾನೆ. ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವು ಕಂಡಿದ್ದಾನೆ. ಬಾಲಕನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಗಾಂಧಿಗನರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,