ಚಿಕ್ಕಬಳ್ಳಾಪುರ: ಮಗಳಿಗೆ ಈಜು ಕಲಿಸೋದಕ್ಕೆ ಕೆರೆಗೆ ಹೋಗಿ, ತಂದೆ-ಮಗಳು ಇಬ್ಬರು ನೀರಲ್ಲಿ ಮುಳುಗಿ ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಶೆಟ್ಟಿಹಳ್ಳಿ ಗ್ರಾಮದ ಕೆರೆಗೆ ಮಗಳಿಗೆ ಈಜು ಕಲಿಸೋದಕ್ಕೆ ತಂದೆ ನಾಗೇಶ್(42) ಕರೆದುಕೊಂಡು ಹೋಗಿದ್ದರು.
ಕೆರೆಯಲ್ಲಿ ತುಂಬಿದ್ದಂತ ಹೂಳಿನ ಕೆಸರಿನಲ್ಲಿ ಇಬ್ಬರು ಸಿಲುಕಿ ನೀರಲ್ಲಿ ಮುಳುಗಿ ತಂದೆ ನಾಗೇಶ್(42) ಹಾಗೂ ಪುತ್ರಿ ಧನುಶ್ರೀ (12) ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಅಂದಹಾಗೇ ಮೃತ ಧನುಶ್ರೀ ಭರತನಾಟ್ಯದಲ್ಲಿ ಖ್ಯಾತಿಯನ್ನು ಪಡೆದಿದ್ದಳು. ಇದೀಗ ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
GOOD NEWS: ಇನ್ಮುಂದೆ ಉದ್ಯೋಗದಾತರ ಅನುಮತಿಯಿಲ್ಲದೇ ‘PF ಖಾತೆ’ ವರ್ಗಾವಣೆಗೆ ಅವಕಾಶ | EPFO Update