ಚಿಕ್ಕಮಗಳೂರು : ದತ್ತಪೀಠವೇ ಬೇರೆ, ಬಾಬಾಬುಡನ್ ದರ್ಗಾ ಬೇರೆ, ದಾಖಲೆಗಳ ಪ್ರಕಾರ ದತ್ತಪೀಠದ ಎರಡನೇ ಹಂತದ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ದತ್ತಪೀಠವೇ ಬೇರೆ, ದರ್ಗಾವೇ ಬೇರೆ, ದತ್ತಪೀಠ ಹಾಗೂ ದರ್ಗಾ ಎರಡೂ ಗ್ರಾಮಗಳೇ ಬೇರೆ, ಅದನ್ನು ಒಟ್ಟು ಮಾಡಿದ್ದು, ಸರಿಯಲ್ಲ. ಐ.ಡಿ. ಪೀಠದಲ್ಲಿರುವುದು ದತ್ತಪೀಠ, ನಾಗೇನಹಳ್ಳಿಯಲ್ಲಿ ಇರುವುದು ಬಾಬಬುಡನ್ ದರ್ಗಾ ಎರಡು ಪ್ರತ್ಯೇಕ ಜಾಗದಲ್ಲಿದೆ ಎನ್ನುವ ಎರಡನೇ ಹಂತದ ಹೋರಾಟಕ್ಕೆ ಸಿದ್ದತೆ ನಡೆಸಲಾಗುತ್ತದೆ ಎಂದು ಸಿ.ಟಿ.ರವಿ ನೀಡಿದ್ದಾರೆ.ಇನಾಂ ದತ್ತಾತ್ರೇಯ ಪೀಠ ಸರ್ವೆ ನಂಬರ್ 195ರಲ್ಲಿ ಇದ್ದರೆ, ಬಾಬಾಬುಡನ್ ದರ್ಗಾ ಜಾಗರ ಹೋಬಳಿ ನಾಗೇನಹಳ್ಳಿ ಸರ್ವೆ ನಂಬರ್ 57ರಲ್ಲಿ ಇದೆ. ಮುಜರಾಯಿ ದಾಖಲೆಗಳ ಪ್ರಕಾರ ದತ್ತ ದೇವರಿಗೆ ಪ್ರತ್ಯೇಕ ತಸ್ತಿಕ್ ನಿಗದಿಯಾಗಿದ್ದರೆ, ದರ್ಗಾದ ಹೆಸರಿನಲ್ಲಿ ತಸ್ತಿಕ್ ನಿಗದಿಯಾಗಿಲ್ಲ ಎಂದು ಹೇಳಿದ್ದಾರೆ.
ದತ್ತಪೀಠದ ಹೋರಾಟಕ್ಕೆ ಗೆಲುವು ಸಿಕ್ಕಿದ್ದು, ಹಿಂದೂ ಅರ್ಚಕರ ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಜಾಗದ ವಿವಾದದಲ್ಲಿ 2ನೇ ಹಂತದ ಹೋರಾಟಕ್ಕೆ ಸಿದ್ದತೆ ಮಾಡಲಾಗುತ್ತಿದೆ ಎಂದಿದ್ದಾರೆ.
ವಿವಾದಿತ ದತ್ತಪೀಠಕ್ಕೆ ಇಬ್ಬರು ಹಿಂದೂ ಅರ್ಚಕರ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಡಳಿತ ಮಂಡಳಿಯ ಶಿಫಾರಸ್ಸಿನ ಮೇರೆಗೆ ಶೃಂಗೇರಿ ಮೂಲದ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರ ಮೂಲದ ಸಂದೀಪ್ ಎಂಬ ಇಬ್ಬರು ಹಿಂದೂ ಅರ್ಚಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.