ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ ಮನೆ ಮಾಡಿದ್ದು, ಚಿಕ್ಕಮಗಳೂರು ಸಂಪೂರ್ಣ ಕೇಸರಿಮಯವಾಗಿದೆ. ಇಂದಿನಿಂದ ದತ್ತ ಜಯಂತಿಗೆ ಚಾಲನೆ ಸಿಕ್ಕಿದ್ದು, ಇಂದು ಅನುಸೂಯ ಜಯಂತಿ ನಡೆದಿದೆ.

ಅನುಸೂಯ ಜಯಂತಿ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಸಾವಿರಾರು ಮಹಿಳೆಯರು ದತ್ತಾತ್ರೇಯನ ದರ್ಶನ ಪಡೆದರು. ನೂರಾರು ಬಸ್ ಗಳಲ್ಲಿ ದತ್ತಪೀಠಕ್ಕೆ ಆಗಮಿಸಿದ ಮಹಿಳಾ ಭಕ್ತರು ದತ್ತ ಪಾದುಕೆ ದರ್ಶನ ಪಡೆದರು. ಇದೇ ಮೊದಲ ಬಾರಿಗೆ ಹಿಂದೂ ಅರ್ಚಕರಿಂದ ದತ್ತಾತ್ರೇಯನಿಗೆ ಪೂಜೆ ನೆರವೇರಿತು.

ದತ್ತಜಯಂತಿಗೆ ಅಡ್ಡಿ ಮಾಡುವ ಹುನ್ನಾರ
ಇದರ ನಡುವೆ ದತ್ತಜಯಂತಿ ಗೆ ಅಡ್ಡಿ ಪಡಿಸುವ ಹುನ್ನಾರ ನಡೆದಿದ್ದು, ರಸ್ತೆಯುದ್ದಕ್ಕೂ ಮೊಳೆ ಹಾಕಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.ಚಿಕ್ಕಮಗಳೂರು ತಾಲೂಕಿನ ದತ್ತಪೀಠ ರಸ್ತೆಯಲ್ಲಿರುವ ಕೈಮಾರ ಚೆಕ್ ಪೋಸ್ಟ್ನಿಂದ ದತ್ತಪೀಠದ ರಸ್ತೆಯ ಉದ್ದಕ್ಕೂ ಮೊಳೆಗಳನ್ನು ಹಾಕಿರುವುದು ಕಂಡುಬಂದಿದೆ. ಅಲ್ಲದೇ ದತ್ತ ಪೀಠಕ್ಕೆ ತೆರುಳವವರಿಗೆ ಅಪಘಾತ ಮಾಡಲೆಂದು ಕಿಡಿಗೇಡಿಗಳು ಮೊಳೆ ಹಾಕಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ನಡೆದದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಫಿನಾಡಿನಲ್ಲಿ ಇಂದು ಅನಸೂಯ ಜಯಂತಿ, ನಾಳೆ, ಶೋಭಾಯಾತ್ರೆ ನಡೆಯಲಿದ್ದು, ನಾಡಿದ್ದು ದತ್ತಪಾದುಕೆ ದರ್ಶನ ನಡೆಯಲಿದೆ. ಹಾಗಾಗಿ, ಹಿಂದೂ ಸಂಘಟನೆಗಳು ನಗರವನ್ನ ಕೇಸರಿಮಯವನ್ನಾಗಿಸಿದ್ರೆ, 4,500ಕ್ಕೂ ಅಧಿಕ ಪೊಲೀಸರು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ

ಜಿಲ್ಲಾದ್ಯಂತ ಖಾಕಿ ಪಡೆ 4, 500 ಪೊಲೀಸರೊಂದಿಗೆ ಹೈ ಅಲರ್ಟ್ ಘೋಷಿಸಿದ್ದು, ಓರ್ವ ಎಸ್ಪಿ, ನಾಲ್ವರು ಎ.ಎಸ್.ಪಿ. 17 ಡಿವೈಎಸ್ಪಿ, 39 ಇನ್ಸ್ಪೆಕ್ಟರ್, 156 ಸಬ್ ಇನ್ಸ್ಪೆಕ್ಟರ್, 285 ಎಎಸ್ಐ, 2050 ಕಾನ್ಸ್ಟೇಬಲ್, 200 ಲೇಡಿ ಪೋಲೀಸ್, 500 ಹೋಂ ಗಾರ್ಡ್, 15 ಕೆ.ಎಸ್.ಆರ್.ಪಿ, 25 ಡಿ.ಆರ್ ಸೇರಿ ಒಟ್ಟು 4500 ಪೊಲೀಸರು, 150ಕ್ಕೂ ಹೆಚ್ಚು ಸಿಸಿಟಿವಿಗಳು ಕಾರ್ಯನಿರ್ವಹಿಸಲಿವೆ. ಮಂಗಳೂರು, ಉಡುಪಿ, ಶಿವಮೊಗ್ಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹೆಚ್ಚುವರಿ ಪೊಲೀಸರು ಬಂದೋಬಸ್ತ್ ಮಾಡಲಾಗಿದೆ ನಗರ ಸೇರಿದಂತೆ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ 25 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಹಲವರಿಂದ ಬಾಂಡ್ ಬರೆಸಿಕೊಂಡಿದ್ದಾರೆ. ಸಮಾಜದ ಶಾಂತಿ ಕದಡಿ, ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದ್ರೆ ನಿರ್ಧಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಳ್ಳೋದಾಗಿ ಡಿಸಿ ಹಾಗೂ ಎಸ್ಪಿ ಖಡಕ್ಕಾಗಿ ಎಚ್ಚರಿಸಿದ್ದಾರೆ.

‘ಕಿಮ್’ ಸೈಕೋಯಿಸಂ ; ಆ ಸಿನಿಮಾ ನೋಡಿದ ‘ಇಬ್ಬರು ವಿದ್ಯಾರ್ಥಿ’ಗಳನ್ನ ಜನರ ಮಧ್ಯೆಯೇ ಗುಂಡಿಕ್ಕಿ ಕೊಲ್ಲುವಂತೆ ಆದೇಶ

Congress Twitter War: ‘ಸಿದ್ರಾಮುಲ್ಲಾ ಖಾನ್’ ಎಂದ ಬಿಜೆಪಿಗರಿಗೆ ‘ಟ್ವಿಟ್’ನಲ್ಲಿ ಕಾಂಗ್ರೆಸ್ ಸಖತ್ ಢಿಚ್ಚಿ: ಇವರನ್ನೆಲ್ಲಾ ಏನೆಂದು ಕರೆಯಲೆಂದು ಪ್ರಶ್ನೆ.!

Share.
Exit mobile version