ಕೆಎನ್ಎನ್ಡಿಜಿಟಲ್ ಡೆಸ್ಕ್ : ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಕ್ರೂರತೆ ಮತ್ತು ಮನೋವಿಕಾರತೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದ್ರಂತೆ, ಇತ್ತೀಚೆಗೆ ಕಿಮ್ ಬಗ್ಗೆ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ. ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಿಮ್ ಜಾಂಗ್ ಉನ್ ಮರಣದಂಡನೆ ವಿಧಿಸಿದ್ದು, ಜನರ ಮಧ್ಯೆಯೇ ಪೊಲೀಸರು ಅವ್ರಿಗೆ ಗುಂಡಿಕ್ಕಿ ಕೊಂದಿದ್ದಾರೆ.

ವಿದ್ಯಾರ್ಥಿಗಳು ಮಾಡಿದ್ದು ಇಷ್ಟೇ.!
ಉತ್ತರ ಕೊರಿಯಾದ ಇಬ್ಬರು ವಿದ್ಯಾರ್ಥಿಗಳು ಇತ್ತೀಚೆಗೆ ಚೀನಾದ ಗಡಿಯ ಸಮೀಪವಿರುವ ರಂಗ್ ರಾಂಗ್ ಪ್ರಾಂತ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಅವರು ದಕ್ಷಿಣ ಕೊರಿಯಾದ ಚಲನಚಿತ್ರಗಳು ಮತ್ತು ಅಮೇರಿಕನ್ ನಾಟಕಗಳನ್ನ ವೀಕ್ಷಿಸಿದರು. ಇವುಗಳನ್ನ ಸಹ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದು, ಇದನ್ನ ತಿಳಿದ ಕಿಮ್ ಜಾಂಗ್ ಉನ್ ಕೋಪಗೊಂಡಿದ್ದಾರೆ.

ಕಿಮ್ ಜಾಂಗ್ ಉನ್ ಆ ಇಬ್ಬರು ವಿದ್ಯಾರ್ಥಿಗಳನ್ನ ಸಾರ್ವಜನಿಕವಾಗಿ ಗುಂಡು ಹಾರಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳು 15-16 ವರ್ಷ ವಯಸ್ಸಿನವರಾಗಿದ್ದು, ಇವರಿಬ್ಬರನ್ನೂ ಹೆಸ್ಸಾನ್ ನಗರದಲ್ಲಿ ಜನಸಂದಣಿಯ ಸಮ್ಮುಖದಲ್ಲಿ ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಬ್ರಿಟಿಷ್ ನಿಯತಕಾಲಿಕೆ ದಿ ಇಂಡಿಪೆಂಡೆಂಟ್ ತನ್ನ ಲೇಖನದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.

 

BREAKING NEWS : ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ‘ಭಗವಾನ್’ ಆರೋಗ್ಯದಲ್ಲಿ ಚೇತರಿಕೆ

BIGG NEWS : ಭಾರತದಲ್ಲಿ ಕೋವಿಡ್ ಸೋಂಕಿನ ನಂತ್ರ ‘ಹೃದಯಾಘಾತದ ಸಾವುಗಳ ಸಂಖ್ಯೆ ಹೆಚ್ಚಳ ʼ : ʼಶಾಕಿಂಗ್‌ ಮಾಹಿತಿ ಬಿಚ್ಚಿಟ್ಟʼ ತಜ್ಞರು | Heart Attack

ಕೆನರಾ ಬ್ಯಾಂಕ್ ಗ್ರಾಹಕರಿಗೆ ‘ಬಿಗ್‌ ಶಾಕ್‌’: ಎಂಸಿಎಲ್ಆರ್ ದರ 5 ಬಿಪಿಎಸ್ ಹೆಚ್ಚಳ, ಸಾಲದ ಇಎಂಐ ಏರಿಕೆ

Share.
Exit mobile version