ಚಿಕ್ಕಮಗಳೂರು : ತಾಲ್ಲೂಕು, ಬಿಂಡಿಗಾ ದೇವೀರಮ್ಮ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವವು ಅಕ್ಟೋಬರ್.19ರಿಂದ 23 ರವರೆಗೆ ನಡೆಯಲಿದೆ. ಈ ದೇವಿರಮ್ಮ ಜಾತ್ರಾ ಮಹೋತ್ಸವ್ಕೆ ಆಗಮಿಸುವಂತ ಭಕ್ತಾಧಿಗಳಿಗೆ ಜಿಲ್ಲಾಡಳಿತ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ.
ಈ ಕುರಿತಂತೆ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮಳೆ ಬರುವ ಕುರಿತು ಮುನ್ಸೂಚನೆ ನೀಡಿದ್ದು, ದೇವಿರಮ್ಮ ದರ್ಶನಕ್ಕೆ ದಿನಾಂಕ: ಬೆಟ್ಟ ಏರುವವರು 15 ವರ್ಷ ಮೇಲ್ಪಟಿರ ಬೇಕು ಮತ್ತು 60 ವರ್ಷದೊಳಗಿರಬೇಕು ಎಂದಿದೆ.
ತರೀಕೆರೆಯಿಂದ ವಾಹನಗಳಲ್ಲಿ ಆಗಮಿಸುವ ಭಕ್ತರು/ ಸ್ಥಳೀಯರು ಮಾತ್ರ ಲಿಂಗದಹಳ್ಳಿ ಮಾರ್ಗವಾಗಿ ಬಿಂಡಿಗಾ ಗ್ರಾಮಕ್ಕೆ ಬರುವುದು . ತರೀಕೆರೆಯಿಂದ ಅನ್ಯಕಾರ್ಯ ನಿಮಿತ್ತ ಚಿಕ್ಕಮಗಳೂರಿಗೆ ಬರುವ ಇತರೆ ಎಲ್ಲಾ ವಾಹನಗಳು ಅ:19 ಬೆಳಿಗ್ಗೆ 6 ಇಂದ ಅ.20 ಮಧ್ಯಾಹ್ನ 2 ಗಂಟೆಯವರೆಗೆ ಕಡ್ಡಾಯವಾಗಿ ಕಡೂರು ಮಾರ್ಗವಾಗಿ ಬರುವುದು ಎಂದು ಹೇಳಿದೆ.
ತರೀಕೆರೆ-ಲಿಂಗದಳ್ಳಿ-ಸಂತವೇರಿ ಮಾರ್ಗವಾಗಿ ಬರುವವರು ತಮ್ಮ ವಾಹನಗಳನ್ನು ಕುಮಾರ ಗಿರಿಯಲ್ಲಿ ಪಾರ್ಕಿಂಗ್ ಮಾಡುವುದು. ಚಿಕ್ಕಮಗಳೂರು-ಕೈಮರ ಮಾರ್ಗವಾಗಿ ಬರುವ ಸಾರ್ವಜನಿಕರು ಕಡ್ಡಾಯವಾಗಿ ಮಲ್ಲೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಪಾರ್ಕಿಂಗ್ ಮಾಡುವುದು ಎಂಬುದಾಗಿ ಸೂಚಿಸಿದೆ.
ರಸ್ತೆ ಬದಿ ಹಾಗೂ ಶಾಲೆಯ ಗೇಟ್‌ನಿಂದ ಕುಮಾರಗಿರಿ ಅರ್ಚ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ ಯಾವುದೇ ರೀತಿಯ ವಾಹನಗಳನ್ನು ನಿಲುಗಡೆ ಮಾಡಬಾರದು. ಚಿಕ್ಕಮಗಳೂರಿನಿಂದ ಬಿಂಡಿಗಾ ಶ್ರೀ ದೇವಿರಮ್ಮ ದೇವಸ್ಥಾನಕ್ಕೆ ತೆರಳುವ ಭಕ್ತಾಧಿಗಳು ಚಿಕ್ಕಮಗಳೂರಿನ ಐ.ಜಿ-ರಸ್ತೆ, ಎಮ್.ಜಿ-ರಸ್ತೆ, ಡಿ.ಎ.ಸಿ.ಜಿ ಪಾಲಿಟೆಕ್ನಿಕ್ ಮೈದಾನದಲ್ಲಿ ವ್ಯವಸ್ಥಿತ ರೀತಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಸಾರ್ವಜನಿಕ ಸಾರಿಗೆಯ ಬಸ್ಸುಗಳಲ್ಲಿ ಬಿಂಡಿಗಾ ಗ್ರಾಮಕ್ಕೆ ಪ್ರಯಾಣಿಸಿ ಸಹಕರಿಸುವಂತೆ ಮನವಿ ಮಾಡಿದೆ.
ಮುಳ್ಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ, ಹಾಗೂ ಮಾಣಿಕ್ಯಧಾರಾ ಸ್ಥಳಗಳಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಹಾಗೂ ಜಾತ್ರೆಯಿಂದ ಉಂಟಾಗುವ ಜನಸಂದಣಿ ಹಿನ್ನಲೆಯಲ್ಲಿ ದಿನಾಂಕ 19/20 ರಂದು ಈ ಪ್ರದೇಶಗಳಿಗೆ ತೆರಳದಂತೆ ನಿರ್ಬಂಧಿಸಲಾಗಿದೆ ಎಂದಿದೆ.
ಇನ್ನೂ ಹೋಮ್ ಸ್ಟೇಗಳು, ರೆಸಾರ್ಟ್ ಮತ್ತು ವಸತಿ ಗೃಹಗಳಲ್ಲಿ ಈಗಾಗಲೇ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿರುವ ಪ್ರವಾಸಿಗರಿಗೆ ನಿರ್ಬಂಧವಿರುವುದಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಡಳಿತವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
KUWJ ಸಂಘದ ಚುನಾವಣೆಗೆ ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಆರ್.ದೇವರಾಜು ನೇಮಕ
ಸಾಗರದಲ್ಲಿ ‘ದಲಿತ ಸಂಘರ್ಷ ಸಮಿತಿ’ಯಿಂದ ಸುಪ್ರೀಂ ಕೋರ್ಟ್ ಸಿಜೆ ಗವಾಯಿ ಮೇಲೆ ಶೂ ಎಸೆದಿದ್ದನ್ನು ಖಂಡನೆ, ಪ್ರತಿಭಟನೆ