Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
BK Hariprasad

BREAKING: ಜೂನ್.21ರಂದು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಪದಗ್ರಹಣ!

ವಾಟ್ಸಾಪ್ ಕಿರಿಕಿರಿಗೆ ಬ್ರೇಕ್: ನಿಮ್ಮ ಅನುಮತಿ ಇಲ್ಲದೆ ಯಾರೂ ನಿಮ್ಮನ್ನು ಗ್ರೂಪ್‌ಗೆ ಸೇರಿಸದಂತೆ ಹೀಗೆ ತಡೆಯಿರಿ!

ವಾಹನ ಚಾಲಕರೇ ಗಮನಿಸಿ : ನಿಮ್ಮ `DL’ ಕಳೆದುಹೋಗಿದೆಯಾ? ಜಸ್ಟ್ ಹೀಗೆ `ಡುಪ್ಲಿಕೇಟ್ ಲೈಸೆನ್ಸ್’ ಪಡೆಯಿರಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದಲ್ಲಿ ‘ದಲಿತ ಸಂಘರ್ಷ ಸಮಿತಿ’ಯಿಂದ ಸುಪ್ರೀಂ ಕೋರ್ಟ್ ಸಿಜೆ ಗವಾಯಿ ಮೇಲೆ ಶೂ ಎಸೆದಿದ್ದನ್ನು ಖಂಡನೆ, ಪ್ರತಿಭಟನೆ
KARNATAKA

ಸಾಗರದಲ್ಲಿ ‘ದಲಿತ ಸಂಘರ್ಷ ಸಮಿತಿ’ಯಿಂದ ಸುಪ್ರೀಂ ಕೋರ್ಟ್ ಸಿಜೆ ಗವಾಯಿ ಮೇಲೆ ಶೂ ಎಸೆದಿದ್ದನ್ನು ಖಂಡನೆ, ಪ್ರತಿಭಟನೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನದಿಸಿದ ನ್ಯಾಯವಾದಿ ರಾಕೇಶ್ ಕಿಶೋರ್ ಅವರನ್ನು ಗಡಿಪಾರು ಅಥವಾ ಕಠಿಣ ಶಿಕ್ಷೆ ವಿಧಿಸುವ ಜೊತೆಗೆ ಇವರ ಹಿಂದೆ ಯಾರು ಯಾರು ಇದ್ದಾರೆ ಎನ್ನುವುದನ್ನು ತನಿಖೆ ನಡೆಸಿ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯಿಸಿ ಇಂದು ಸಾಗರದಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್.ಗವಾಯಿ ದಲಿತ ಸಮುದಾಯಕ್ಕೆ ಸೇರಿದ್ದು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವಸಿದ್ದಾಂತದ ಆಧಾರದ ಮೇಲೆ ಅತ್ಯಂತ ಘನತೆಯಿಂದ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಅ.6ರಂದು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಣೆ ಸಂದರ್ಭದಲ್ಲಿ 71 ವರ್ಷದ ರಾಕೇಶ್ ಕಿಶೋರ್ ಎಂಬ ವಕೀಲರು ತನ್ನ ಕಾಲಿನ ಶೂ ಅನ್ನು ತೆಗೆದು ಎಸೆದಿರುವ ಆಘಾತಕಾರಿ ಘಟನೆ ನಡೆದಿದೆ. ಇದು ಭಾರತದ ನ್ಯಾಯಾಂಗ ವ್ಯವಸ್ಥೆಗೆ ಕರಾಳ ದಿನವಾಗಿದೆ. ಪ್ರಜ್ಞಾವಂತ ನಾಗರೀಕರು ಈ ಕೃತ್ಯದಿಂದ ತಲೆತಗ್ಗಿಸುವಂತೆ ಅಗಿದೆ ಎಂದು ಮನವಿ ಮಾಡಲಾಯಿತು.

ರಾಕೇಶ್ ಕಿಶೋರ್ ತೋರಿಸಿರುವ ಅಸಹನೆ ಹಿಂದೂ ಧರ್ಮದ ಒಳಗಿನ ಅಸ್ಪೃಶ್ಯತೆ ಜಾತಿಯತೆ, ತಾರತಮ್ಯ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಗಟ್ಟಿಯಾಗಿ ಉಳಿದುಕೊಂಡಿದೆ ಎನ್ನುವುದನ್ನು ಈ ಘಟನೆ ಸಾಬೀತುಪಡಿಸಿದೆ. ಗವಾಯಿ ಅವರು ನ್ಯಾಯಾಧೀಶರಾಗಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಅನುಯಾಯಿಯಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಕೇಶ್ ಕಿಶೋರ್ ದರ್ಮದ ಹೆಸರಿನಲ್ಲಿ ಅಸಹನೆಯನ್ನು ಹುಟ್ಟುಹಾಕುವ ಭಯೋತ್ಪಾದಕರಂತೆ ನಡೆದುಕೊಂಡಿದ್ದಾರೆ. ಸಮ ಸಮಾಜದ ಮಧ್ಯೆ ಜಾತಿಯ ವಿಷಬೀಜ ಬಿತ್ತುವ ಸನಾತನ ಮನುವಾದಿ ಭಯೋತ್ಪಾದಕ ರಾಕೇಶ್ ಕಿಶೋರ್ ಅವರಿಗೆ ಕಾಣದ ಕೈಗಳು ಪ್ರಚೋದನೆ ನೀಡಿರುವುದು ಕಂಡು ಬರುತ್ತದೆ. ತಕ್ಷಣ ರಾಕೇಶ್ ಕಿಶೋರ್ ಅವರನ್ನು ದೇಶದಿಂದ ಗಡಿಪಾರು ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿತು.

ಈ ಪ್ರತಿಭಟನೆ ಉದ್ದೇಶಿಸಿ ಲಕ್ಷ್ಮಣ್ ಸಾಗರ್, ನಾಗರಾಜ್, ನಟರಾಜ ಗೇರುಬೀಸು, ರೇವಪ್ಪ ಹೊಸಕೊಪ್ಪ, ಲಲಿತಮ್ಮ ಇನ್ನಿತರರು ಮಾತನಾಡಿದರು. ಪ್ರತಿಭಟನೆಯಲ್ಲಿ ಧರ್ಮರಾಜ್, ಅಣ್ಣಪ್ಪ ಕೆಳದಿಪುರ, ಶಿವಾನಂದ ಕುಗ್ವೆ, ಚಾರ್ವಕ ರಾಘವೇಂದ್ರ, ರಂಗಪ್ಪ ಹೊನ್ನೆಸರ, ನಾರಾಯಣ ಮಂಡಗಳಲೆ, ಗಣಪತಿ ಇರುವಕ್ಕಿ, ಮಧುಮಾಲತಿ, ಎಲ್.ಚಂದ್ರಪ್ಪ, ನಾರಾಯಣ ಅರಮನೆಕೇರಿ, ಸರಸ್ವತಿ ನಾಗರಾಜ್, ಮರಿಯಾ ಲೀಮಾ ಇನ್ನಿತರರು ಹಾಜರಿದ್ದರು.

ಸಾಗರದಲ್ಲಿ ಯಶಸ್ವಿಯಾಗಿ ನಡೆದ ‘ಗಾಂಧಿ ಸ್ಮೃತಿ’ ಮತ್ತು ‘ವ್ಯಸನ ಮುಕ್ತ’ರ ಸಮಾವೇಶ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡವೆಂದು ಮನೆಯಿಂದಲೇ ಪ್ರತಿಭಟನೆ ಧ್ವನಿ ಬರಬೇಕು: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್

Share. Facebook Twitter LinkedIn WhatsApp Email

Related Posts

BK Hariprasad

BREAKING: ಜೂನ್.21ರಂದು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಪದಗ್ರಹಣ!

1 Min Read

ವಾಹನ ಚಾಲಕರೇ ಗಮನಿಸಿ : ನಿಮ್ಮ `DL’ ಕಳೆದುಹೋಗಿದೆಯಾ? ಜಸ್ಟ್ ಹೀಗೆ `ಡುಪ್ಲಿಕೇಟ್ ಲೈಸೆನ್ಸ್’ ಪಡೆಯಿರಿ!

2 Mins Read

GOOD NEWS: ರಾಜ್ಯದ ನೇಕಾರರ ಗಮನಕ್ಕೆ: ‘ನೇಕಾರ ಸಮ್ಮಾನ್ ಯೋಜನೆ’ಯಡಿ ಧನಸಹಾಯಕ್ಕೆ ಅರ್ಜಿ ಆಹ್ವಾನ

2 Mins Read
Recent News
BK Hariprasad

BREAKING: ಜೂನ್.21ರಂದು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಪದಗ್ರಹಣ!

ವಾಟ್ಸಾಪ್ ಕಿರಿಕಿರಿಗೆ ಬ್ರೇಕ್: ನಿಮ್ಮ ಅನುಮತಿ ಇಲ್ಲದೆ ಯಾರೂ ನಿಮ್ಮನ್ನು ಗ್ರೂಪ್‌ಗೆ ಸೇರಿಸದಂತೆ ಹೀಗೆ ತಡೆಯಿರಿ!

ವಾಹನ ಚಾಲಕರೇ ಗಮನಿಸಿ : ನಿಮ್ಮ `DL’ ಕಳೆದುಹೋಗಿದೆಯಾ? ಜಸ್ಟ್ ಹೀಗೆ `ಡುಪ್ಲಿಕೇಟ್ ಲೈಸೆನ್ಸ್’ ಪಡೆಯಿರಿ!

ಹಳೆಯ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಹೆಚ್ಚಿಸಲು ಇಲ್ಲಿದೆ 5 ಸುಲಭ ಟಿಪ್ಸ್!

State News
BK Hariprasad KARNATAKA

BREAKING: ಜೂನ್.21ರಂದು ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್ ಪದಗ್ರಹಣ!

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಮಹತ್ವದ ಸಾಂಸ್ಥಿಕ ಬದಲಾವಣೆಯಾಗಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ನೂತನ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್…

ವಾಹನ ಚಾಲಕರೇ ಗಮನಿಸಿ : ನಿಮ್ಮ `DL’ ಕಳೆದುಹೋಗಿದೆಯಾ? ಜಸ್ಟ್ ಹೀಗೆ `ಡುಪ್ಲಿಕೇಟ್ ಲೈಸೆನ್ಸ್’ ಪಡೆಯಿರಿ!

GOOD NEWS: ರಾಜ್ಯದ ನೇಕಾರರ ಗಮನಕ್ಕೆ: ‘ನೇಕಾರ ಸಮ್ಮಾನ್ ಯೋಜನೆ’ಯಡಿ ಧನಸಹಾಯಕ್ಕೆ ಅರ್ಜಿ ಆಹ್ವಾನ

BIG NEWS: ರಾಜ್ಯದಲ್ಲಿ 68,776 ಮೃತ ಮಹಿಳೆಯರ ಖಾತೆಗೂ ‘ಗೃಹಲಕ್ಷ್ಮಿ ಯೋಜನೆ’ ಹಣ ಜಮೆ | Gruhalakshmi Scheme

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.