ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಸಂದರ್ಭದಲ್ಲಿಯೇ ಕೆ ಎಸ್ ಆರ್ ಟಿ ಸಿ ನೌಕರರಿಗೆ ( KSRTC Employees ) ಸರ್ಕಾರ ಗಳಿಕೆ ರಜೆ ನಗಧೀಕರಣಕ್ಕೆ ಅವಕಾಶ ನೀಡಿ, ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.
ಈ ಕುರಿತಂತೆ ನಿಗಮದ ವ್ಯವಸ್ಥಾಪ ನಿರ್ದೇಶಕರಾದಂತ ವಿ ಅನ್ಬುಕುಮಾರ್, ಅಧ್ಯಕ್ಷರಾದಂತ ಎಂ ಚಂದ್ರಪ್ಪ ನಾಡಬ್ಬದ ದಸರಾ ಹಾರ್ದಿಕ ಶುಭಾಶಗಳನ್ನು ನೌಕರರಿಗೆ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಸಾರಿಗೆ ಸಂಸ್ಥೆಯ ಬೆನ್ನೆಲುಬಾದ ಕಾರ್ಮಿಕರ ಆಶೋತ್ತರಗಳಿಗೆ ಸ್ಪಂದಿಸುವುದು ತನ್ನ ಪ್ರಥಮ ಆದ್ಯತೆಯೆಂದು ಭಾವಿಸಿ, ಹಲವಾರು ಕಾರ್ಮಿಕ ಸ್ನೇಹಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದಿದ್ದಾರೆ.
ಕೋವಿಡ್ ಕ್ಲಿಷ್ಟಕರವಾದ ಆರ್ಥಿಕ ಪರಿಸ್ಥಿಯಿಂದಾಗಿ ಸಿಬ್ಬಂದಿಗಳಿಗೆ ಪಾವತಿಸಬೇಕಾಗಿದ್ದ ಗಳಿಕೆ ರಜೆ ನಗದೀಕರಣವನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ಆದರೇ ಕಾರ್ಮಿಕರ ಮನದಾಳವನ್ನು ಅರಿತಿರುವ ನಿಗಮವು, ಆರ್ಥಿಕ ಪರಿಸ್ಥಿತಿಯು ಇನ್ನೂ ಚೇತರಿಕೆ ಹಂತದಲ್ಲಿದ್ದರೂ ಸಹ, ನಮ್ಮ ಸಿಬ್ಬಂದಿಗಳು ಹಾಗೂ ಕುಟುಂಬದವರು ಎಲ್ಲರಂತೆ ನಾಡಹಬ್ಬ ದಸರಾವನ್ನು ಉಸ್ತಾಹ ಮತ್ತು ಸಡಗರದಿಂದ ಆಚರಿಸಲಿ ಎಂಬ ಸದ್ದುದ್ದೇಶದೊಂದಿಗೆ, ಅಕ್ಟೋಬರ್ 2022ರ 3ನೇ ತಾರೀಕಿನಂದು 2021-22ನೆ ಸಾಲಿನ ಗಳಿಕೆ ರಜೆ ನಗದೀಕರಣದ ಮೊತ್ತವನ್ನು ನಿಗಮದ ಎಲ್ಲಾ ಅರ್ಹ ಸಿಬ್ಬಂದಿಗಳಿಗೆ ಪಾವತಿಸಲು ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.
ಅದೃಷ್ಟ ನಿಮ್ಮ ಬೆನ್ನು ಹತ್ತಬೇಕೆಂದರೆ ಆಮೆ ಮೂರ್ತಿಯನ್ನು ಉತ್ತರ ದಿಕ್ಕಿಗೆ ಇಟ್ಟು ನೋಡಿ ಸಾಕು!