ಉಡುಪಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ದಿನ ಕಳಿಯುತಿದ್ದಾರೆ. ಈಗಾಗಲೇ ಅವರ ಕುಟುಂಬಸ್ಥರು ಆಗಾಗ ಭೇಟಿ ನೀಡುತ್ತಿದ್ದು, ಪತ್ನಿ ವಿಜಯಲಕ್ಷ್ಮಿ ಕೂಡ ನಟ ದರ್ಶನ ಅವರಿಗೆ ಧೈರ್ಯ ಹೇಳುತ್ತಿದ್ದಾರೆ. ಅಲ್ಲದೆ ಕಾನೂನು ಹೋರಾಟದ ಕುರಿತು ವಕೀಲರೊಂದಿಗೂ ಚರ್ಚಿಸುತ್ತಿದ್ದಾರೆ.
ಇದೀಗ ಗಂಡನನ್ನು ಬಿಡಿಸಿಕೊಳ್ಳಲು ವಿಜಯಲಕ್ಷ್ಮಿ ಅವರು ದೇವರ ಮೊರೆ ಹೋಗಿದ್ದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.ಆಪ್ತರ ಜೊತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರು ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿ ತಾಯಿಯ ದರ್ಶನವನ್ನ ಪಡೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಆಪ್ತರ ಜೊತೆ ಬಂದು ವಿಜಯಲಕ್ಷ್ಮೀ ಅವರು ದರ್ಶನ ಪಡೆದಿದ್ದಾರೆ. ಶುಕ್ರವಾರ ಅಂದರೆ ಇಂದು ಬೆಳಗ್ಗೆ ಅವರು ನವ ಚಂಡಿಕಾ ಹೋಮ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ದರ್ಶನ್ ಅವರು ಈ ಕಷ್ಟದ ಪರಿಸ್ಥಿತಿಯಿಂದ ಹೊರಬರಲಿ ಎಂದು ವಿಜಯಲಕ್ಷ್ಮಿ ಅವರು ದೇವರಲ್ಲಿ ಪ್ರಾರ್ಥನೆ ಮಾಡಲಿದ್ದಾರೆ.
ದರ್ಶನ್ ಗೆ ಜೈಲಲ್ಲಿ ಊಟದ ಸಮಸ್ಯೆಯಿಂದ ಅವರು ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಅವರಿಗೆ ಅಜೀರ್ಣ, ಅತಿಸಾರ ಮುಂತಾದ ಸಮಸ್ಯೆಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ. ಜಾಮೀನು ಸಿಗುವ ತನಕ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಸದ್ಯಕ್ಕಂತೂ ಜಾಮೀನು ಸಿಗುವುದು ಕಷ್ಟವಾಗಿದೆ. ಈ ಪರಿಸ್ಥಿತಿಯನ್ನು ಎದುರಿಸಲು ವಿಜಯಲಕ್ಷ್ಮಿ ಅವರು ದೇವರಿಗೆ ಮೊರೆಹೋಗಿದ್ದಾರೆ.