ಬೆಂಗಳೂರು : ನಟ ದರ್ಶನ್ ಅವರು ಜೈಲು ಊಟ ಬೇಡ, ಮನೆಯೂಟ ಬೇಕು ಅಂತ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೇ ಅದಕ್ಕೆ ನಿರಾಕರಿಸಿತ್ತು. ಅಲ್ಲದೇ ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು. ಹೀಗಾಗಿ ಜೈಲು ಅಧಿಕಾರಿಗಳಿಗೆ ಮನೆಯೂಟಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಲಾಗಿತ್ತು.
ಆದರೇ ನಟ ದರ್ಶನ್ ಗೆ ಮತ್ತೆ ಶಾಕ್ ಎನ್ನುವಂತೆ ಜೈಲು ಅಧಿಕಾರಿಗಳು ಕೂಡ ಮನೆ ಊಟ ನೀಡಲು ನಿರಾಕರಿಸಿದ್ದಾರೆ. ನಟ ದರ್ಶನ್ ಅವರು ಹೈಕೋರ್ಟ್ ಗೆ ಸಲ್ಲಿಸಿದ್ದಂತ ಮನೆ ಊಟದ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ನ್ಯಾಯಪೀಠವು, ಈ ಬಗ್ಗೆ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಅಲ್ಲದೇ ಅವರಿಗೆ ಅರ್ಜಿ ಸಲ್ಲಿಸುವಂತೆಯೂ ನಟ ದರ್ಶನ್ ಪರ ವಕೀಲರಿಗೆ ಸೂಚಿಸಿ, ಆಗಸ್ಟ್.20ಕ್ಕೆ ಅರ್ಜಿಯ ವಿಚಾರಣೆ ಮುಂದೂಡಿತ್ತು.
ಹೈಕೋರ್ಟ್ ನಿರ್ದೇಶನದಂತೆ ನಟ ದರ್ಶನ್ ಜೈಲು ಊಟ ಬೇಡ. ಮನೆಯೂಟಕ್ಕೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಮನವಿಯನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಶೀಲಿಸಿದಂತ ಜೈಲು ಅಧಿಕಾರಿಗಳು, ಕಾನೂನಿನಲ್ಲಿ ಕೊಲೆ ಆರೋಪಿಗೆ ಮನೆಯೂಟಕ್ಕೆ ಅವಕಾಶವಿಲ್ಲ ಎಂಬುದಾಗಿ ನಿರಾಕರಿಸಿದ್ದಾರೆ. ಈ ಮೂಲಕ ನಟ ದರ್ಶನ್ ಗೆ ಮತ್ತೆ ಶಾಕ್ ನೀಡಿದ್ದಾರೆ.
ಇನ್ನೂ ಆಗಸ್ಟ್.20ರಂದು ಈ ಕುರಿತಂತೆ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ಜೈಲು ಅಧಿಕಾರಿಗಳು ಮನೆಯೂಟ ನಿರಾಕರಣೆ ಮಾಡಲು ಕಾರಣವೇನು ಎನ್ನುವ ಬಗ್ಗೆಯೂ ಆಕ್ಷೇಪಣೆ ಸಲ್ಲಿಸುವ ತಯಾರಿ ನಡೆಸಿದ್ದಾರೆ. ಅಂದು ಕೋರ್ಟ್ ಯಾವ ನಿರ್ದೇಶನ, ಆದೇಶ ಹೊರಡಿಸಲಿದೆ ಎನ್ನುವ ಬಗ್ಗೆ ಕಾದು ನೋಡಬೇಕಿದೆ.