ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲು ಪಾಲಾಗಿದ್ದು ಇಂದು ಅವರನ್ನು ನಟ ವಿನೋದ್ ಪ್ರಭಾಕರ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ದರ್ಶನ್ ಭೇಟಿಗೆ ಹೋದಾಗ ಸಾಕಷ್ಟು ಮಂಕಾಗಿದ್ದರು ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಅವರನ್ನು ಭೇಟಿ ಆದಾಗ ಏನ್ ಟೈಗರ್ ಅಂದ್ರು ನನ್ನ ಬಳಿ ಮಾತನಾಡಿದರು ಅಷ್ಟೇ. ಅವರ ಮುಖ ನೋಡಿ ಶೇಕ್ ಹ್ಯಾಂಡ್ ಮಾಡಿ ಬಂದೆ ಎಂದು ಭೇಟಿಯ ಬಳಿಕ ವಿನೋದ್ ಪ್ರಭಾಕರ್ ಅವರು ಹೇಳಿಕೆ ನೀಡಿದರು. ರೇಣುಕಾ ಸ್ವಾಮಿ ಕುಟುಂಬ ಕಣ್ಣೀರಿನಲ್ಲಿ ಕೈ ತೊಳಿತ ಇದೆ ಇತ್ತ ದರ್ಶನ ಕುಟುಂಬದವರು ಕೂಡ ನೋವಿನಲ್ಲಿ ಇದ್ದಾರೆ. ಯಾರಿಗೆ ಸಾಂತ್ವನ ಹೇಳ್ಬೇಕು ಅಂತ ತಿಳಿಯಲಿಲ್ಲ ದರ್ಶನ್ ಬೇಟಿಗೆ ಹೋದಾಗ ಸಾಕಷ್ಟು ಮಂಕಾಗಿದ್ದರು ಎಂದರು.
ರೇಣುಕಾ ಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಅವರ ಕುಟುಂಬಕ್ಕೆ, ಅವರ ತಂದೆಯಾಗಲಿ ತಾಯಿಯಾಗಲಿ ಅವರ ಹೆಂಡತಿ ಆಗಿರಬಹುದು, ಎಲ್ಲರಿಗೂ ಭಗವಂತ ದುಃಖ ಭರಿಸುವ ಶಕ್ತಿ ಕೊಡಲಿ.ಈ ಒಂದು ಘಟನೆ ಆಗಬಾರದಾಗಿತ್ತು. ದರ್ಶನ್ ಸರ್ ಅವರನ್ನು ಒಟ್ಟಿಗೆ ಮೀಟ್ ಆಗಿದ್ದು 4 ತಿಂಗಳು ಆಗಿತ್ತು.ಘಟನೆ ನಂತರ ಅನ್ನಪೂರ್ಣೇಶ್ವರಿ ಸ್ಟೇಷನ್ ಗೆ ಹತ್ತಿರ ಹೋಗಬೇಕು ಕೂಡ ನಾನು ಪ್ರಯತ್ನ ಮಾಡಿದೆ ಅಲ್ಲೂ ಆಗಲಿಲ್ಲ.
ದರ್ಶನ್ ಪ್ರಕರಣದಲ್ಲಿ ವಿನೋದ್ ಪ್ರಭಾಕರ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸಮಸ್ಯೆ ಬಗೆಹರಿಯೋ ಹಾಗಿದ್ರೆ ನಾನೇ 1 ಲಕ್ಷ ಪೋಸ್ಟ್ ಹಾಕುತ್ತಿದ್ದೆ. ಆದರೆ ಇಂತಹ ಸಂದರ್ಭದಲ್ಲಿ ಕೂಡ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.