ಮೈಸೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪಕರಣದಲ್ಲಿ ನಿನ್ನೆ ಹೈಕೋರ್ಟ್ ನಟ ದರ್ಶನ ಅವರಿಗೆ ಮಧ್ಯಂತರ ಜಾಮೀನು ನೀಡಿದೆ ಹಿನ್ನೆಲೆಯಲ್ಲಿ ನಟ ದರ್ಶನ ಅವರು ನಿನ್ನೆ ಬೆಂಗಳೂರಿನ ಪತ್ನಿ ವಿಜಯಲಕ್ಷ್ಮಿ ಮನೆಗೆ ಆಗಮಿಸಿದ್ದು ರಾತ್ರಿ ಮಗ ವಿನೇಶ್ ಬರ್ತಡೇ ಆಚರಿಸಿ ಇಂದು ಅಥವಾ ನಾಳೆ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ದಾಖಲಾಗಲಿದ್ದಾರೆ.
ಇದರ ನಡುವೆ ಮೈಸೂರಿನ ಅರ್ಜುನ್ ಅವಧೂತ ಗುರೂಜಿ ಅವರು ದರ್ಶನ್ ರಾಜಕೀಯ ಭವಿಷ್ಯ ಕುರಿತು ಮಾತನಾಡಿದ್ದು, ದರ್ಶನ ರಾಜಕೀಯಕ್ಕೆ ಬರುತ್ತಾರೆ. ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ ರಾಜಕೀಯ ಪಕ್ಷಗಳೇ ಅವರ ಬಳಿಗೆ ಹೋಗುತ್ತವೆ ಎಂದು ದರ್ಶನ್ ರಾಜಕೀಯ ಎಂಟ್ರಿ ಕುರಿತು ಮೈಸೂರಿನ ಅರ್ಜುನ್ ಅವಧೂತ ಗುರೂಜಿ ತಿಳಿಸಿದರು.
2025 ನೇ ಇಸವಿಯಲ್ಲಿ ದರ್ಶನವರಿಗೆ ಒಳ್ಳೆಯ ಭವಿಷ್ಯವಿದೆ. ದರ್ಶನ್ ರಿಲೀಸ್ ಆಗಿರುವುದು ಕನ್ನಡಿಗರಿಗೆ ಹಾಗೂ ಅವರ ಅಭಿಮಾನಿಗಳು ತುಂಬಾ ಸಂತಸ ತಂದಿದೆ. ಅದರಲ್ಲೂ ಅಭಿಮಾನಿಗಳ ಪ್ರಾರ್ಥನೆ, ವಿಜಯಲಕ್ಷ್ಮಿ ಅವರ ತಪಸ್ಸು ಹಾಗೂ ದಿನಕರ್ ತೂಗುದೀಪ ಅವರ ಪ್ರಯತ್ನದಿಂದ ಅವರು ದರ್ಶನ್ ಅವರು ರಿಲೀಸ್ ಆಗಿದ್ದಾರೆ ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅರ್ಜುನ್ ಅವಧೂತ ಗುರೂಜಿ ಹೇಳಿದರು.