ನವದೆಹಲಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಟ ದರ್ಶನ್ ಅಭಿಮಾನಿಯಾಗಿದ್ದರು. ಈ ಪ್ರಕರಣದ ಎ1 ಆರೋಪಿ ಪವಿತ್ರಾಗೌಡ ಜೊತೆಗೆ ಅವರು ವಿವಾಹೇತರ ಸಂಬಂಧ ಹೊಂದಿದ್ದರು. ಅವರು ಲಿವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದರು. ಈ ಕಾರಣಕ್ಕೇ ರೇಣುಕಾಸ್ವಾಮಿ ಅಸಭ್ಯವಾಗಿ ಮೆಸೇಜ್ ಮಾಡಿದ್ದನು. ಇದರಿಂದ ಆಕ್ರೋಶಗೊಂಡು ಎ2 ಆರೋಪಿ ದರ್ಶನ್ ತನ್ನ ಸ್ನೇಹಿತರು, ಅಭಿಮಾನಿ ಸಂಘದ ಸದಸ್ಯರನ್ನು ಬಳಸಿಕೊಂಡು ಹತ್ಯೆ ಮಾಡಿದ್ದಾರೆ ಎಂಬುದಾಗಿ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ ವಾದಿಸಿದರು.
ಇಂದು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ನಟ ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಿದ್ದಂತ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಲಾಯಿತು. ಹೈಕೋರ್ಟ್ ನೀಡಿದ್ದಂತ ಜಾಮೀನು ಆದೇಶ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಾರ್ದಿವಾಲಾ ನೇತೃತ್ವದ ದ್ವಿ ಸದಸ್ಯ ಪೀಠದಲ್ಲಿ ನಡೆಸಲಾಯಿತು.
ಸುಮಾರು 1 ಗಂಟೆ ಸರ್ಕಾರದ ಪರವಾಗಿ ಸಿದ್ಧಾರ್ಥ್ ಲೂಥ್ರ ಅವರು ವಾದ ಮಂಡಿಸಿದರು. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬಂದು, ಬೆಂಗಳೂರಿನ ಪಟ್ಟಣಗೆರೆ ಶೆಡ್ ನಲ್ಲಿ ಮಾರಣಾಂತಿಕ ಹಲ್ಲೆ ಮಾಡಿ, ಹತ್ಯೆ ಮಾಡಲಾಗಿದೆ. ಹಲ್ಲೆಗೂ ಮುನ್ನ ಥಳಿಸಿದ್ದಾರೆ. ಕರೆಂಟ್ ಶಾಕ್ ನೀಡಿದ್ದಾರೆ. ಜೊತೆಗೆ ಕಬ್ಬಿಣದ ರಾಡ್, ಕೋಲಿನಿಂದಲೂ ಹೊಡೆದಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ರೇಣುಕಾಸ್ವಾಮಿಯನ್ನು ಆರಂಭದಲ್ಲಿ ಹಣಕಾಸಿನ ವಿಚಾರಕ್ಕೆ ಹತ್ಯೆ ಮಾಡಿರುವುದಾಗಿ ನಾಲ್ವರು ಹಂತಕರು ಶರಣಾಗಿದ್ದರು. ಆದರೇ ತನಿಖಾಧಿಕಾರಿ ವಿಚಾರಣೆ ನಡೆಸಿದಾಗ ದೊಡ್ಡ ಜಾಲವೇ ಬಯಲಾಯಿತು. ಹೈಕೋರ್ಟ್ ಈ ಏಳು ಮಂದಿಗೆ ಜಾಮೀನು ನೀಡಿದೆ. ಇದನ್ನು ನಾವು ಪ್ರಶ್ನಿಸಿ ಇಲ್ಲಿಗೆ ಬಂದಿದ್ದೇವೆ ಎಂದರು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿರುವುದಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಸೇರಿ ಪ್ರಬಲ ಸಾಕ್ಷ್ಯಗಳಿದ್ದಾವೆ. ಹೀಗಾಗಿ ಆರೋಪಿಗಳ ಜಾಮೀನು ರದ್ದು ಮಾಡಬೇಕು ಎಂಬುದಾಗಿ ಸರ್ಕಾರದ ಪರವಾಗಿ ಸಿದ್ದಾರ್ಥ್ ಲೂಥ್ರಾ ವಾದಿಸಿದರು. ವಾದವನ್ನು ಆಲಿಸಿದಂತ ಸುಪ್ರೀಂ ಕೋರ್ಟ್ ನ್ಯಾಯಪೀಠವು ನಾವು ಅದೇ ತಪ್ಪು ಮಾಡುವುದಿಲ್ಲ ಎಂಬುದಾಗಿ ಹೈಕೋರ್ಟ್ ನೀಡಿದಂತ ಜಾಮೀನಿಗೆ ಗರಂ ಆಗಿ, ತೀರ್ಪನ್ನು ಕಾಯ್ದಿರಿಸಿದೆ.
ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ‘ರಿಷಭ್ ಪಂತ್’ ಬ್ಯಾಟಿಂಗ್‌ಗೆ ಲಭ್ಯ: ದೃಢಪಡಿಸಿದ ಬಿಸಿಸಿಐ | Rishabh Pant
`ಪ್ಯಾರಸಿಟಮಾಲ್’ ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು : ವಿಡಿಯೋ ವೈರಲ್ | WATCH VIDEO